ಜಾಮೀನು ಸಿಕ್ಕಿ ಜೈಲಿಂದ ಹೊರಬರುತ್ತಿದ್ದಂತೆ ಮತ್ತೆ ಅರೆಸ್ಟ್ ಆದ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ
ಜಿಗ್ನೇಶ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಇಂದು ಅಂತಿಮವಾಗಿ ಬೇಲ್ ಕೊಟ್ಟಿತ್ತು. ಬೇಲ್ ಸಿಕ್ಕ ಬೆನ್ನಲ್ಲೇ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ಜಿಗ್ನೇಶ್, ನನ್ನ ಪ್ರತಿಷ್ಠೆಯನ್ನು ಕುಂದಿಸಲು ಬಿಜೆಪಿ ಮತ್ತು ಆರ್ಎಸ್ಎಸ್ನಿಂದ ಕುತಂತ್ರ ನಡೆಯುತ್ತಿದೆ ಎಂದಿದ್ದರು.
ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಹಲವು ನಿಂದನಾತ್ಮಕ ಟ್ವೀಟ್ಗಳನ್ನು ಮಾಡಿ ನಾಲ್ಕು ದಿನಗಳ ಹಿಂದೆ ಜೈಲು ಸೇರಿದ್ದ ದಲಿತ ಮುಖಂಡ, ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿಗೆ ಇಂದು ಅಸ್ಸಾಂ ನ್ಯಾಯಾಲಯ ಜಾಮೀನು ನೀಡಿತ್ತು. ನಿನ್ನೆ ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್, ತೀರ್ಪನ್ನು ಇಂದಿಗೆ ಕಾಯ್ದಿರಿಸಿತ್ತು. ಅಂತಿಮವಾಗಿ ಜಿಗ್ನೇಶ್ ಮೇವಾನಿಗೆ ಬೇಲ್ ಸಿಕ್ಕು, ಅವರು ಜೈಲಿನಿಂದ ಹೊರಬಂದಿದ್ದರು. ಆದರೆ ಈಗ ಮತ್ತೊಂದು ಕೇಸ್ನಲ್ಲಿ ಮತ್ತೊಮ್ಮೆ ಜಿಗ್ನೇಶ್ ಮೇವಾನಿ ಬಂಧನವಾಗಿದೆ. ಈ ಬಾರಿ ಅಸ್ಸಾಂನ ಬಾರ್ಪೇಟಾ ಪೊಲೀಸರು ಜಿಗ್ನೇಶ್ರನ್ನು ಬಂಧಿಸಿದ್ದಾರೆ. ಆದರೆ ಈಗ ಜಿಗ್ನೇಶ್ ಬಂಧನವಾಗಿದ್ದೇಕೆ ಎಂಬ ಬಗ್ಗೆ ಅವರು ಮಾಹಿತಿ ನೀಡಿಲ್ಲ.
ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕೀಳಾಗಿ ಹಲವು ಟ್ವೀಟ್ಗಳನ್ನು ಮಾಡಿದ್ದ ಮೇವಾನಿ ವಿರುದ್ಧ ಅಸ್ಸಾಂನ ಕೊಕ್ರಾಝರ್ನ ಬಿಜೆಪಿ ನಾಯಕ ಅರೂಪ್ ಕುಮಾರ್ ಡೇ ದೂರು ನೀಡಿದ್ದರು. ಎಫ್ಐಆರ್ ಕೂಡ ದಾಖಲಾಗಿತ್ತು. ಹೀಗಾಗಿ ಗುರುವಾರ ಆದರೆ ತಮ್ಮ ಬಂಧನವನ್ನು ಜಿಗ್ನೇಶ್ ಮೇವಾನಿ ಖಂಡಿಸಿದ್ದರು. ಪ್ರಧಾನಿ ಕಾರ್ಯಾಲಯ ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ಹೇಳಿದ್ದರು. ಗುಜರಾತ್ನ ಪಾಲನ್ಪುರದಲ್ಲಿರುವ ಸರ್ಕೀಟ್ ಹೌಸ್ನಲ್ಲಿ ಜಿಗ್ನೇಶ್ರನ್ನು ಅಸ್ಸಾಂ ಪೊಲೀಸರು ಬಂಧಿಸಿದ್ದರು.
ಜಿಗ್ನೇಶ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಇಂದು ಅಂತಿಮವಾಗಿ ಬೇಲ್ ಕೊಟ್ಟಿತ್ತು. ಬೇಲ್ ಸಿಕ್ಕ ಬೆನ್ನಲ್ಲೇ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ಜಿಗ್ನೇಶ್, ನನ್ನ ಪ್ರತಿಷ್ಠೆಯನ್ನು ಕುಂದಿಸಲು ಬಿಜೆಪಿ ಮತ್ತು ಆರ್ಎಸ್ಎಸ್ನಿಂದ ಕುತಂತ್ರ ನಡೆಯುತ್ತಿದೆ. ನನ್ನ ವಿರುದ್ಧ ವ್ಯವಸ್ಥಿತವಾಗಿ ಬಲೆ ಹೆಣೆದಿದ್ದಾರೆ. ಅಂದು ಚಂದ್ರಶೇಖರ್ ಆಜಾದ್, ರೋಹಿತ್ ವೇಮುಲಾಗೇ ಮಾಡಿದ್ದನ್ನೇ ನನಗೆ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಇನ್ನೊಂದೆಡೆ ದೂರು ಕೊಟ್ಟಿದ್ದ ಬಿಜೆಪಿ ನಾಯಕ, ಮೇವಾನಿ ಟ್ವೀಟ್ಗಳೆಲ್ಲ ಒಂದು ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಜನರ ಭಾವನೆಗಳನ್ನು ಕೆರಳಿಸುವಂತೇ ಇರುತ್ತವೆ ಎಂದು ಹೇಳಿದ್ದರು. ಬಳಿಕ ಮಾಧ್ಯಮವೊಂದರ ಜತೆಗೆ ಮಾತನಾಡಿದ್ದ ಅವರು, ಜಿಗ್ನೇಶ್ ಮೇವಾನಿ ಸಮಾಜವನ್ನು ಒಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದಿದ್ದರು.
ಇದನ್ನೂ ಓದಿ: ಸಿದ್ದರಾಮಯ್ಯ ಸುಖಾಸುಮ್ಮನೆ ಸರ್ಕಾರವನ್ನು ದೂರುವ ಬದಲು ನ್ಯೂನತೆಗಳಿದ್ದರೆ ಹೇಳಲಿ, ಸರಿಪಡಿಸುತ್ತೇವೆ: ಕೋಟ ಶ್ರೀನಿವಾಸ ಪೂಜಾರಿ