ಗರ್ಭಾ ಕಾರ್ಯಕ್ರಮಕ್ಕೆ ಕಲ್ಲು ತೂರಾಟ ಮಾಡಿದವರನ್ನು ಕಂಬಕ್ಕೆ ಕಟ್ಟಿ ಥಳಿಸಿದ ಗುಜರಾತ್ ಪೊಲೀಸ್

ಗರ್ಭಾ ಆರಂಭಿಸಿದಾಗ ಅಕ್ಕಪಕ್ಕದ ಮುಸ್ಲಿಂ ಸಮುದಾಯದವರು ಜಮಾಯಿಸಿ ಮಹಿಳೆಯರನ್ನು ಗರ್ಭಾ ಆಡದಂತೆ ತಡೆದರು. ಕೂಡಲೇ ಕಲ್ಲು ತೂರಾಟ ಆರಂಭವಾಯಿತು.

ಗರ್ಭಾ ಕಾರ್ಯಕ್ರಮಕ್ಕೆ ಕಲ್ಲು ತೂರಾಟ ಮಾಡಿದವರನ್ನು ಕಂಬಕ್ಕೆ ಕಟ್ಟಿ ಥಳಿಸಿದ ಗುಜರಾತ್ ಪೊಲೀಸ್
ಪೊಲೀಸರು ಥಳಿಸುತ್ತಿರುವುದು
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Oct 05, 2022 | 8:54 PM

ದೆಹಲಿ:  ಗರ್ಭಾ (garba )ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ ಮತ್ತು ಕಲ್ಲು ತೂರಾಟ ನಡೆಸಿದ ಆರೋಪದಲ್ಲಿ ಮುಸ್ಲಿಂ ಯುವಕರನ್ನು ಕಂಬಕ್ಕೆ ಕಟ್ಟಿಹಾಕಿ   ಪೊಲೀಸರು ಥಳಿಸುತ್ತಿರುವ ವಿಡಿಯೊ ವೈರಲ್ ಆಗಿದೆ. ಗುಜರಾತಿನಲ್ಲಿ (Gujarat) ನಡೆದ ಘಟನೆ ಇದಾಗಿದ್ದು, ವಿಡಿಯೊ ಹೊರಬಂದು 24 ಗಂಟೆ ಕಳೆದಿದ್ದರೂ ಅಧಿಕಾರಿಗಳು ಇನ್ನೂ ಈ ವಿಡಿಯೊದ ಸತ್ಯಾಸತ್ಯತೆ ಪರಿಶೀಲಿಸಲಾಗಿಲ್ಲ ಎಂದು ಹೇಳಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ. ಎನ್‌ಡಿಟಿವಿ ಗುಜರಾತ್‌ನ ಖೇಡಾ ಜಿಲ್ಲೆಯಿಂದ ಜಿಲ್ಲಾಧಿಕಾರಿ ಕೆಎಲ್ ಬಚಾನಿ ಮತ್ತು ಉಪ ಪೊಲೀಸ್ ಅಧೀಕ್ಷಕ ವಿಆರ್ ಬಾಜ್‌ಪೈ ಅವರೊಂದಿಗೆ ಮಾತನಾಡಿದ್ದು, ಈ ಘಟನೆಯನ್ನು ಖಚಿತಪಡಿಸಲು ಇಬ್ಬರು  ಅಧಿಕಾರಿಗಳಿಗೆ ಸಾಧ್ಯವಾಗಲಿಲ್ಲ.

“ನಾನು ಎಸ್‌ಪಿ (ಪೊಲೀಸ್ ವರಿಷ್ಠಾಧಿಕಾರಿ) ಅವರೊಂದಿಗೆ ಮಾತುಕತೆಗಾಗಿ ಮನವಿ ಮಾಡಿದ್ದೇನೆ. ಅವರು ಕಾರ್ಯನಿರತರಾಗಿದ್ದಾರೆ. ಅವರು ನಾಳೆ ಬರಬೇಕು. ನಾನು ವಿಡಿಯೊ ಪರಿಶೀಲಿಸಿಲ್ಲ. ಅದಕ್ಕಾಗಿಯೇ ನಾನು ಸಭೆ ಕರೆದಿದ್ದೇನೆ. ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿದ ಕಾರಣ ಸಂಬಂಧಿಸಿದ ಐಜಿ (ಇನ್‌ಸ್ಪೆಕ್ಟರ್ ಜನರಲ್) ಅವರೊಂದಿಗೆ ಮಾತನಾಡಬೇಕಿದೆ.ಅವರಿಗೆ ಈ ವಿಷಯ ಬಗ್ಗೆ ಗೊತ್ತಿರಬೇಕು ಎಂದು ಬಚಾನಿ ಹೇಳಿದ್ದಾರೆ. ಈ ಸಂಗತಿ ಉಪ-ನ್ಯಾಯಾಧೀಶರ ವ್ಯಾಪ್ತಿಗೆ ಸೇರಿದೆ. ಸ್ಥಳೀಯ ನ್ಯಾಯಾಲಯವು ಘಟನೆಯ ಬಗ್ಗೆ ಮಾಹಿತಿ ಕೇಳಿ  ನ್ಯಾಯಾಲಯವು ಒಂದು ನಿಲುವು ತೆಗೆದುಕೊಳ್ಳಲಿ ಎಂದು ಅವರು ಹೇಳಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿ ವಿಆರ್ ಬಾಜ್‌ಪೈ ಅವರ ಜತೆ ಮಾತನಾಡಿದಾಗ 3ರಂದು ರಾತ್ರಿ ಸರಪಂಚರು ಗರ್ಭ ಕಾರ್ಯಕ್ರಮ ಆಯೋಜಿಸಿದ್ದರು. ಗರ್ಭಾ ಆರಂಭಿಸಿದಾಗ ಅಕ್ಕಪಕ್ಕದ ಮುಸ್ಲಿಂ ಸಮುದಾಯದವರು ಜಮಾಯಿಸಿ ಮಹಿಳೆಯರನ್ನು ಗರ್ಭಾ ಆಡದಂತೆ ತಡೆದರು. ಕೂಡಲೇ ಕಲ್ಲು ತೂರಾಟ ಆರಂಭವಾಯಿತು.ಮಹಿಳೆಯರು, ಪುರುಷರು ಗಾಯಗೊಂಡಿದ್ದರು. ಮುಸ್ಲಿಮರು ಕಲ್ಲು ತೂರಾಟವನ್ನು ಪ್ರಾರಂಭಿಸಿದರು, ಎಫ್ಐಆರ್ ದಾಖಲಿಸಲಾಗಿದೆ, ಹದಿಮೂರು ಜನರನ್ನು ಬಂಧಿಸಲಾಗಿದೆ.  ಅವರು ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಎಂದಿದ್ದಾರೆ

ಸಾರ್ವಜನಿಕ ಥಳಿತದ ಘಟನೆಯ ಬಗ್ಗೆ ಕೇಳಲಾದ ಪ್ರಶ್ನೆಗೆ, “ನಾವು ಇನ್ನೂ ವಿಡಿಯೊದ ಸತ್ಯಾಸತ್ಯತೆಯನ್ನು ದೃಢೀಕರಿಸಿಲ್ಲ, ನಾವು ಇನ್ನೂ ಈ ವಿಷಯದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಸದ್ಯ ಪರಿಸ್ಥಿತಿ ಉದ್ವಿಗ್ನವಾಗಿದೆ, ಆದ್ದರಿಂದ ಕಾನೂನು ಮತ್ತು ಸುವ್ಯವಸ್ಥೆಯನ್ನು ಸ್ಥಳದಲ್ಲಿ ಇರಿಸಲು ಆದ್ಯತೆ ನೀಡಲಾಗಿದೆ ಎಂದು ಹೇಳಿದ್ದಾರೆ.

ನವರಾತ್ರಿ ಗರ್ಭಾ ಕಾರ್ಯಕ್ರಮಕ್ಕೆ ಕಲ್ಲು ಎಸೆದ ಆರೋಪದ ಮೇಲೆ ಬಂಧಿತ ಮುಸ್ಲಿಂ ಯುವಕರ ಮೇಲೆ ಗುಜರಾತ್‌ನ ಖೇಡಾ ಜಿಲ್ಲೆಯಲ್ಲಿ ಪೋಲೀಸ್ ಸಿಬ್ಬಂದಿ ಕಂಬಕ್ಕೆ ಕಟ್ಟಿ ಬೆತ್ತದಿಂದ ಥಳಿಸುತ್ತಿರುವ ವಿಡಿಯೊಗಳು ಮಂಗಳವಾರ ಟ್ವಿಟರ್‌ನಲ್ಲಿ ವೈರಲ್ ಆಗಿವೆ. ಸಮವಸ್ತ್ರ ಧರಿಸದೆ ಸಾಧಾರಣ ಉಡುಗೆಯಲ್ಲಿರುವ ಪೊಲೀಸರು ಯುವಕರಿಗೆ ಥಳಿಸುತ್ತಿರುವಾಗ ಜನರ ಗುಂಪು ಹರ್ಷೋದ್ಗಾರ ಮಾಡುತ್ತಿರುವುದು ವಿಡಿಯೊದಲ್ಲಿದೆ ಸಾರ್ವಜನಿಕರಲ್ಲಿ ಕ್ಷಮೆಯಾಚಿಸುವಂತೆ ಯುವಕರಿಗೆ ಕೇಳಲಾಯಿತು.ಈ ಹೊತ್ತಲ್ಲಿ ಪ್ರದೇಶದ ಉಸ್ತುವಾರಿ ಪೊಲೀಸ್ ಇನ್ಸ್‌ಪೆಕ್ಟರ್ ಕೂಡ ಉಪಸ್ಥಿತರಿದ್ದರು ಎಂದು ವರದಿಗಳು ತಿಳಿಸಿವೆ.

Published On - 8:54 pm, Wed, 5 October 22