ಲಂಚ ಪಡೆಯುವಾಗ ರೆಡ್ ಹ್ಯಾಂಡ್​ ಆಗಿ ಸಿಕ್ಕಿಬೀಳ್ತಾನೆ ಅಂತಾ ಈ ಪೇದೆ ಏನ್​ ಮಾಡ್ದಾ ಗೊತ್ತಾ?

|

Updated on: Sep 24, 2020 | 6:47 PM

ಗಾಂಧಿನಗರ: ಲಂಚ ಪಡೆಯುವ ವೇಳೆ ACB ಅಧಿಕಾರಿಗಳು ದಾಳಿ ನಡೆಸಿದಾಗ ಸಿಕ್ಕಿಬೀಳುತ್ತೇನೆ ಅನ್ನೋ ಭೀತಿಯಲ್ಲಿ ಪೊಲೀಸ್​ ಪೇದೆಯೊಬ್ಬ ಹಣವನ್ನು ನುಂಗಲು ಮುಂದಾದ ಘಟನೆ ಗುಜರಾತ್​ನಲ್ಲಿ ನಡೆದಿದೆ. ರೈತನೊಬ್ಬನ ಕೆಲಸ ಮಾಡಿಕೊಡಲು ಪೊಲೀಸ್​ ಪೇದೆಯು ಲಂಚಕ್ಕೆ ಬೇಡಿಕೆ ಇಟ್ಟಿದ್ದನಂತೆ. ಇದರಿಂದ ಮನನೊಂದ ರೈತ ACB ಅಧಿಕಾರಿಗಳಿಗೆ ಸಂಪರ್ಕಿಸಿದ್ದನು. ಆಗ ಪೇದೆಯನ್ನು ರೆಡ್​ ಹ್ಯಾಂಡ್​ ಆಗಿ ಹಿಡಿಯಲು ACB ಅಧಿಕಾರಿಗಳು ನಿರ್ಧರಿಸಿದರು. ಪೇದೆಗೆ ನೀಡಬೇಕಿದ್ದ ಲಂಚದ ಹಣಕ್ಕೆ ಫಿನಾಫ್​ಥಲೀನ್​ ಪುಡಿ ಸವರಿ ರೈತನಿಗೆ ಅದನ್ನು ಕಾನ್​ಸ್ಟೇಬಲ್​ಗೆ ನೀಡಲು ಸೂಚಿಸಿದ್ದಾರೆ. ರೈತನಿಂದ […]

ಲಂಚ ಪಡೆಯುವಾಗ ರೆಡ್ ಹ್ಯಾಂಡ್​ ಆಗಿ ಸಿಕ್ಕಿಬೀಳ್ತಾನೆ ಅಂತಾ ಈ ಪೇದೆ ಏನ್​ ಮಾಡ್ದಾ ಗೊತ್ತಾ?
Follow us on

ಗಾಂಧಿನಗರ: ಲಂಚ ಪಡೆಯುವ ವೇಳೆ ACB ಅಧಿಕಾರಿಗಳು ದಾಳಿ ನಡೆಸಿದಾಗ ಸಿಕ್ಕಿಬೀಳುತ್ತೇನೆ ಅನ್ನೋ ಭೀತಿಯಲ್ಲಿ ಪೊಲೀಸ್​ ಪೇದೆಯೊಬ್ಬ ಹಣವನ್ನು ನುಂಗಲು ಮುಂದಾದ ಘಟನೆ ಗುಜರಾತ್​ನಲ್ಲಿ ನಡೆದಿದೆ.

ರೈತನೊಬ್ಬನ ಕೆಲಸ ಮಾಡಿಕೊಡಲು ಪೊಲೀಸ್​ ಪೇದೆಯು ಲಂಚಕ್ಕೆ ಬೇಡಿಕೆ ಇಟ್ಟಿದ್ದನಂತೆ. ಇದರಿಂದ ಮನನೊಂದ ರೈತ ACB ಅಧಿಕಾರಿಗಳಿಗೆ ಸಂಪರ್ಕಿಸಿದ್ದನು. ಆಗ ಪೇದೆಯನ್ನು ರೆಡ್​ ಹ್ಯಾಂಡ್​ ಆಗಿ ಹಿಡಿಯಲು ACB ಅಧಿಕಾರಿಗಳು ನಿರ್ಧರಿಸಿದರು. ಪೇದೆಗೆ ನೀಡಬೇಕಿದ್ದ ಲಂಚದ ಹಣಕ್ಕೆ ಫಿನಾಫ್​ಥಲೀನ್​ ಪುಡಿ ಸವರಿ ರೈತನಿಗೆ ಅದನ್ನು ಕಾನ್​ಸ್ಟೇಬಲ್​ಗೆ ನೀಡಲು ಸೂಚಿಸಿದ್ದಾರೆ.

ರೈತನಿಂದ ಲಂಚ ಪಡೆಯುತ್ತಿದ್ದ ಪೇದೆ ತನ್ನತ್ತ ಬರುತ್ತಿದ್ದ ACB ಅಧಿಕಾರಿಗಳನ್ನ ಕಂಡ ಕೂಡಲೆ ಹಣವನ್ನು ನುಂಗಲು ಮುಂದಾದ. ಆದರೇ, ಅವನ ದುರಾದೃಷ್ಟಕ್ಕೆ ಅದನ್ನು ಸಂಪೂರ್ಣವಾಗಿ ನುಂಗಲು ಸಾಧ್ಯವಾಗಲಿಲ್ಲ. ತದನಂತರ, ACB ಅಧಿಕಾರಿಗಳು ಪೇದೆಯ ಉಗುಳಿನ ಮಾದರಿಯನ್ನು ಸಂಗ್ರಹಿಸಿ ಅದರ DNA ಪರೀಕ್ಷೆ ನಡೆಸಿದ್ದಾರೆ. ಆತ ಜಗಿದ ನೋಟ್​ಗಳ ಮೇಲಿದ್ದ ಉಗುಳಿಗೆ ಅದನ್ನ ಹೋಲಿಸಿ ಎರಡು ಮಾದರಿ ಒಂದೇ ಎಂದು ಖಚಿತವಾದ ಮೇಲೆ ಪೇದೆಯನ್ನು ಬಂಧಿಸಿದ್ದಾರೆ.