AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಡದಿಯ ಫಲವತ್ತತೆ ಚಿಕಿತ್ಸೆಗಾಗಿ ಗುಜರಾತ್‌ಗೆ ಬಂದ ಪಾಕ್ ವ್ಯಕ್ತಿ; ಬೇಹುಗಾರಿಕೆ ಆರೋಪದಲ್ಲಿ ಬಂಧನ

ಭಾರತೀಯ ಸಿಮ್ ಕಾರ್ಡ್ ಪಡೆಯಲು ಪಾಕಿಸ್ತಾನಿ ಏಜೆಂಟ್‌ಗಳಿಗೆ ಲಾಭಶಂಕರ್ ಸಹಾಯ ಮಾಡಿದ್ದಾನೆ. ಇದನ್ನು ಸೇನಾ ಶಾಲೆಗಳಲ್ಲಿ ಭಾರತೀಯ ರಕ್ಷಣಾ ಸಿಬ್ಬಂದಿಯ ಮಕ್ಕಳ ಫೋನ್‌ಗಳನ್ನು ಹ್ಯಾಕ್ ಮಾಡಲು ಬಳಸಲಾಗುತ್ತಿತ್ತು. ತನ್ನ ಕುಟುಂಬದ ಸದಸ್ಯರಿಗೆ ದೇಶಕ್ಕೆ ವೀಸಾ ಪಡೆಯಲು ಪಾಕಿಸ್ತಾನಿ ಅಧಿಕಾರಿಗಳು ನೀಡಿದ ಸಹಾಯಕ್ಕೆ ಪ್ರತಿಯಾಗಿ ಅವರು ಇದನ್ನು ಮಾಡಿದ್ದಾರೆ ಎಂದು ಎಟಿಎಸ್ ಹೇಳಿದೆ.

ಮಡದಿಯ ಫಲವತ್ತತೆ ಚಿಕಿತ್ಸೆಗಾಗಿ ಗುಜರಾತ್‌ಗೆ ಬಂದ ಪಾಕ್ ವ್ಯಕ್ತಿ; ಬೇಹುಗಾರಿಕೆ ಆರೋಪದಲ್ಲಿ ಬಂಧನ
ಪ್ರಾತಿನಿಧಿಕ ಚಿತ್ರ
ರಶ್ಮಿ ಕಲ್ಲಕಟ್ಟ
|

Updated on:Oct 21, 2023 | 2:09 PM

Share

ದೆಹಲಿ ಅಕ್ಟೋಬರ್  21: ಮೂಲತಃ ಪಾಕಿಸ್ತಾನದಿಂದ (Pakistan) ಬಂದು  ಗುಜರಾತ್ ನಿವಾಸಿಯಾದ ಲಾಭಶಂಕರ್ ದುರ್ಯೋಧನ ಮಹೇಶ್ವರಿ ಅವರನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ATS) ಗುರುವಾರ ಬೇಹುಗಾರಿಕೆಯ (spying) ಶಂಕೆಯ ಮೇಲೆ ಬಂಧಿಸಿದೆ. 53 ವರ್ಷದ ಲಾಭಶಂಕರ್ ಅವರು 1999 ರಲ್ಲಿ ಗುಜರಾತ್‌ನ ಆನಂದ್ ಜಿಲ್ಲೆಯ ತಾರಾಪುರ ಪಟ್ಟಣಕ್ಕೆ ಪಾಕಿಸ್ತಾನದಿಂದ ” ಫಲವತ್ತತೆ ಚಿಕಿತ್ಸೆ” ಗಾಗಿ ಪತ್ನಿಯೊಂದಿಗೆ ಆಗಮಿಸಿದ್ದರು ಎಂದು ಹೇಳಲಾಗುತ್ತದೆ. ಅವರು ಗುಜರಾತ್‌ನಲ್ಲಿ ಉಳಿದುಕೊಂಡರು, ಯಶಸ್ವಿ ಉದ್ಯಮಿಯಾದರು. 2006 ರಲ್ಲಿ ಭಾರತೀಯ ಪೌರತ್ವವನ್ನು ಪಡೆದರು. ಆದಾಗ್ಯೂ ದಂಪತಿಗೆ ಮಕ್ಕಳಿರಲಿಲ್ಲ.

ಏತನ್ಮಧ್ಯೆ, ಭಾರತೀಯ ಸೇನೆಯ ಬಗ್ಗೆ ಸೂಕ್ಷ್ಮ ಮಾಹಿತಿಯನ್ನು ಪಡೆಯಲು ಪಾಕಿಸ್ತಾನಿ ಏಜೆಂಟ್‌ಗಳಿಗೆ ಸಹಾಯ ಮಾಡಿದ ಆರೋಪದ ಮೇಲೆ ಗುಜರಾತ್ ಎಟಿಎಸ್ ಅವರನ್ನು ಬಂಧಿಸಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ತಿಳಿಸಿದೆ.

ಭಾರತೀಯ ಸಿಮ್ ಕಾರ್ಡ್ ಪಡೆಯಲು ಪಾಕಿಸ್ತಾನಿ ಏಜೆಂಟ್‌ಗಳಿಗೆ ಲಾಭಶಂಕರ್ ಸಹಾಯ ಮಾಡಿದ್ದಾನೆ. ಇದನ್ನು ಸೇನಾ ಶಾಲೆಗಳಲ್ಲಿ ಭಾರತೀಯ ರಕ್ಷಣಾ ಸಿಬ್ಬಂದಿಯ ಮಕ್ಕಳ ಫೋನ್‌ಗಳನ್ನು ಹ್ಯಾಕ್ ಮಾಡಲು ಬಳಸಲಾಗುತ್ತಿತ್ತು. ತನ್ನ ಕುಟುಂಬದ ಸದಸ್ಯರಿಗೆ ದೇಶಕ್ಕೆ ವೀಸಾ ಪಡೆಯಲು ಪಾಕಿಸ್ತಾನಿ ಅಧಿಕಾರಿಗಳು ನೀಡಿದ ಸಹಾಯಕ್ಕೆ ಪ್ರತಿಯಾಗಿ ಅವರು ಇದನ್ನು ಮಾಡಿದ್ದಾರೆ ಎಂದು ಎಟಿಎಸ್ ಹೇಳಿದೆ.

1999 ರಲ್ಲಿ ತಾರಾಪುರಕ್ಕೆ ಬಂದ ನಂತರ, ಲಾಭಶಂಕರ್ ಆರಂಭದಲ್ಲಿ ಪಾಕಿಸ್ತಾನದಿಂದ ವಲಸೆ ಬಂದಿದ್ದ ತನ್ನ ಅತ್ತೆಯೊಂದಿಗೆ ವಾಸಿಸುತ್ತಿದ್ದರು. ನಂತರ ಅವರು ದೀರ್ಘಾವಧಿಯ ವೀಸಾಕ್ಕೆ ಅರ್ಜಿ ಸಲ್ಲಿಸಿದರು.ಕ್ರಮೇಣ ತನ್ನ ಅಳಿಯಂದಿರ ಸಹಾಯದಿಂದ ಯಶಸ್ವಿ ಉದ್ಯಮಿಯಾಗಿ ತಮ್ಮನ್ನು ತಾವು ಸ್ಥಾಪಿಸಿಕೊಂಡರು ಎಂದು ರಕ್ಷಣಾ ಮೂಲಗಳನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

2022 ರಲ್ಲಿ, ಪಾಕಿಸ್ತಾನಕ್ಕೆ ಭೇಟಿ ನೀಡಿದಾಗ ಅವರ ಪಾಕಿಸ್ತಾನಿ ವೀಸಾವನ್ನು ಪ್ರಕ್ರಿಯೆಗೊಳಿಸುವಾಗ ಪಾಕಿಸ್ತಾನಿ ಏಜೆಂಟ್‌ಗಳು ಅವರಿಗೆ ನೆರವು ನೀಡಿದ್ದಾರೆ ಎಂದು ನಂಬಲಾಗಿದೆ. ತನ್ನ ತಂದೆ ತಾಯಿಯೊಂದಿಗೆ ಆರು ವಾರಗಳ ತಂಗಿದ್ದ ಸಂದರ್ಭದಲ್ಲಿ ಲಾಭಶಂಕರ್ ಪಾಕಿಸ್ತಾನದ ಗುಪ್ತಚರ ಸಂಸ್ಥೆಯೊಂದಿಗೆ ಸಂಪರ್ಕದಲ್ಲಿದ್ದರು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಗೊಂದಲ ಮುಂದುವರಿದರೆ ಇಂಡಿಯಾ ಮೈತ್ರಿಕೂಟ ಯಶಸ್ವಿಯಾಗಲ್ಲ: ಕಾಂಗ್ರೆಸ್ ವಿರುದ್ಧ ಅಖಿಲೇಶ್ ಯಾದವ್ ಮತ್ತೆ ವಾಗ್ದಾಳಿ

ಭಾರತಕ್ಕೆ ಮರಳಿದ ನಂತರ, ಜಾಮ್‌ನಗರ ನಿವಾಸಿ ಮೊಹಮ್ಮದ್ ಸಕ್ಲೇನ್ ಉಮರ್ ತಾಹಿಮ್ ಹೆಸರಿನಲ್ಲಿ ನೋಂದಾಯಿಸಲಾದ ಸಿಮ್ ಕಾರ್ಡ್ ಅನ್ನು ಪಾಕಿಸ್ತಾನ ರಾಯಭಾರಿ ಕಚೇರಿಯ ಸಂಪರ್ಕಕ್ಕೆ ತಲುಪಿಸಲು ಲಾಭಶಂಕರ್ ಅನುಕೂಲ ಮಾಡಿಕೊಟ್ಟಿದ್ದಾನೆ ಎಂದು ಎಟಿಎಸ್ ಹೇಳಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:09 pm, Sat, 21 October 23