ಪತಿಯ ಮೇಲೆ ಅನುಮಾನ, ದೀಪಾವಳಿಯಂದು ಕುದಿಯುವ ನೀರು ಸುರಿದು, ಆ್ಯಸಿಡ್ ಎರಚಿದ ಪತ್ನಿ
ಪತಿಗೆ ಯಾರೊಂದಿಗೋ ಸಂಬಂಧವಿದೆ ಎಂಬ ಶಂಕೆಯಲ್ಲಿ ಪತ್ನಿ ಆತನ ಮೇಲೆ ಕುದಿಯುವ ನೀರು ಸುರಿದು, ಆ್ಯಸಿಡ್(Acid) ಎರಚಿರುವ ಘಟನೆ ಅಹಮದಾಬಾದಿನಲ್ಲಿ ನಡೆದಿದೆ. ಆತನಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಪತಿಯ ದೂರಿನ ಮೇರೆಗೆ ಪತ್ನಿಯನ್ನು ಬಂಧಿಸಲಾಗಿದೆ. 33 ವರ್ಷದ ರೋಣಕ್ ಪೊಲೀಸರಿಗೆ ಈ ವಿಷಯ ತಿಳಿಸಿದ್ದು, ಕಳೆದ ಒಂದು ವರ್ಷದಿಂದ ತನ್ನ ಪತ್ನಿ ತನ್ನೊಂದಿಗೆ ಆಗಾಗ ಜಗಳವಾಡುತ್ತಿದ್ದಳು.

ಅಹಮದಾಬಾದ್, ಅಕ್ಟೋಬರ್ 22: ಪತಿಗೆ ಯಾರೊಂದಿಗೋ ಸಂಬಂಧವಿದೆ ಎಂಬ ಶಂಕೆಯಲ್ಲಿ ಪತ್ನಿ ಆತನ ಮೇಲೆ ಕುದಿಯುವ ನೀರು ಸುರಿದು, ಆ್ಯಸಿಡ್(Acid) ಎರಚಿರುವ ಘಟನೆ ಅಹಮದಾಬಾದಿನಲ್ಲಿ ನಡೆದಿದೆ. ಪತಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಪತಿಯ ದೂರಿನ ಮೇರೆಗೆ ಪತ್ನಿಯನ್ನು ಬಂಧಿಸಲಾಗಿದೆ.
33 ವರ್ಷದ ರೋಣಕ್ ಪೊಲೀಸರಿಗೆ ಈ ವಿಷಯ ತಿಳಿಸಿದ್ದು, ಕಳೆದ ಒಂದು ವರ್ಷದಿಂದ ತನ್ನ ಪತ್ನಿ ತನ್ನೊಂದಿಗೆ ಆಗಾಗ ಜಗಳವಾಡುತ್ತಿದ್ದಳು. ದೀಪಾವಳಿಯಂದು ಬೆಳಗ್ಗೆ, ಜಗಳ ಮತ್ತೆ ಹೆಚ್ಚಾಗಿತ್ತು. ಹಬ್ಬದ ದಿನದಂದು ಘರ್ಷಣೆಯನ್ನು ತಪ್ಪಿಸಬೇಕೆಂದು ಮೌನವಾಗಿದ್ದರೂ, ಹೆಂಡತಿ ಕೋಪಗೊಂಡಿದ್ದಳು.ಆತ ಮಲಗಿದ್ದಾಗ ಆತನ ಮೇಲೆ ಬಿಸಿನೀರು ಎರಚಿದ್ದಳು.
ಗಂಡ ತಪ್ಪಿಸಿಕೊಳ್ಳಲು ಮತ್ತು ತನ್ನ ಬಟ್ಟೆಗಳನ್ನು ತೆಗೆದುಹಾಕಲು ಪ್ರಯತ್ನಿಸಿದಾಗ ಆ್ಯಸಿಡ್ ಎರಚಿದ್ದಾಳೆ ಇದರಿಂದಾಗಿ ಗಂಭೀರ ಸ್ವರೂಪದ ಗಾಯಗಳಾಗಿವೆ. ಸ್ಯಾಟಲೈಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಮತ್ತಷ್ಟು ಓದಿ: ಬಿಹಾರದಲ್ಲಿ ಬಿಜೆಪಿ ನಾಯಕನ ಪುತ್ರಿ ಮೇಲೆ ಆ್ಯಸಿಡ್ ದಾಳಿ
ರೋನಕ್ ಮತ್ತು ಅವರ ಪತ್ನಿ ಮದುವೆಯಾಗಿ ಎರಡು ವರ್ಷಗಳಾಗಿವೆ. ಪತಿಗೆ ಬೇರೊಬ್ಬ ಮಹಿಳೆಯ ಜತೆ ಸಂಬಂಧವಿದೆ ಎಂದು ಹೇಳುತ್ತಾ ಜಗಳವಾಡುತ್ತಿದ್ದರು. ಕ್ಷುಲ್ಲಕ ವಿಷಯಗಳಿಗೆ ಪದೇ ಪದೇ ಜಗಳ ನಡೆಯುತ್ತಿತ್ತು ಎಂದು ಮೂಲಗಳು ತಿಳಿಸಿವೆ.
ಈ ದಂಪತಿಗಳು ಈ ಹಿಂದೆ ವೆಜಲ್ಪುರದಲ್ಲಿ ವಾಸಿಸುತ್ತಿದ್ದರು, ಅಲ್ಲಿ ಪೊಲೀಸರು ರಾಜಿ ಸಂಧಾನಕ್ಕೆ ಮಧ್ಯಸ್ಥಿಕೆ ವಹಿಸಲು ಪ್ರಯತ್ನಿಸಿದ್ದರು, ಆದರೆ ಉದ್ವಿಗ್ನತೆ ಮುಂದುವರೆಯಿತು. ವ್ಯಕ್ತಿ ತೀವ್ರ ಸುಟ್ಟ ಗಾಯಗಳಿಗೆ ಚಿಕಿತ್ಸೆ ಪಡೆಯುತ್ತಿದ್ದು, ಪೊಲೀಸರು ಮತ್ತಷ್ಟು ತನಿಖೆ ನಡೆಸುತ್ತಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




