ಆಗ ತಾನೆ ಮಗು ಹುಟ್ಟಿತ್ತು ಆದರೆ ಮಗು ಅಳುತ್ತಿರಲಿಲ್ಲ, ಮೈಯೆಲ್ಲಾ ನೀಲಿಗಟ್ಟಿತ್ತು. ತಕ್ಷಣವೇ ಮಗುವನ್ನು ಐಸಿಯುನಲ್ಲಿ ಇರಿಸಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೇರೊಂದು ಆಸ್ಪತ್ರೆಗೂ ಕಳುಹಿಸಲಾಯಿತು. ಆಗ ವೈದ್ಯರಿಗೆ ಅಚ್ಚರಿ ಕಾದಿತ್ತು.
ಮಗುವಿನ ದೇಹದಲ್ಲಿ 60 ಎಂಎಲ್ನಷ್ಟು ನಿಕೋಟಿನ್ ಪತ್ತೆಯಾಗಿದೆ. ತಾಯಿಯ ತಂಬಾಕಿನ ಚಟ ಮಗುವಿಗೂ ಮಾರಕವಾಗಿ ಪರಿಣಮಿಸಿದೆ.
ಗುಜರಾತ್ನ ಮೆಹ್ಸಾನಾ ಆಸ್ಪತ್ರೆಯಿಂದ ಅಹಮದಾಬಾದ್ನ ನವಜಾತ ಶಿಶುಗಳ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಆರಂಭಿಕವಾಗಿ ಮಗುವಿಗೆ ಉಸಿರಾಟದ ಸಮಸ್ಯೆ ಇದ್ದಂತೆ ಕಂಡುಬಂದಿತ್ತು. ಆದರೆ ಲಕ್ಷಣಗಳು ಅಸಾಮಾನ್ಯವಾಗಿದ್ದವು ಮಗುವನ್ನು ಪರೀಕ್ಷಿಸಿದಾಗ ನಿಕೋಟಿನ್ ಅಂಶ ಪತ್ತೆಯಾಗಿತ್ತು.
ಮತ್ತಷ್ಟು ಓದಿ: Ballari News: ಬಳ್ಳಾರಿ; ಮೆಂಥೋಪ್ಲಸ್ ಡಬ್ಬಿ ನುಂಗಿ 9 ತಿಂಗಳ ಮಗು ಸಾವು
ಮಹಿಳೆ ತಂಬಾಕು ವ್ಯಸನಿ, ದಿನಕ್ಕೆ 10-15 ಬಾರಿ ತಂಬಾಕು ಸೇವಿಸುತ್ತಿದ್ದಳು ಎಂಬುದು ತಿಳಿದುಬಂದಿದೆ. ಆ ನಿಕೋಟಿನ್ ರಕ್ತದ ಮೂಲಕ ಭ್ರೂಣವನ್ನು ತಲುಪಿದೆ.
ಗುಜರಾತ್ನಲ್ಲಿ 2020ರ ವರದಿ ಪ್ರಕಾರ ಶೇ.41ರಷ್ಟು ಪುರುಷರು ಹಾಗೂ ಶೇ.8.7 ರಷ್ಟು ಮಹಿಳೆಯರು ತಂಬಾಕು ಸೇವನೆ ಮಾಡುತ್ತಾರೆ.
ತಾನು 15ನೇ ವಯಸ್ಸಿನಿಂದ ತಂಬಾಕು ಚಟಕ್ಕೆ ಒಳಗಾಗಿದ್ದೇನೆ, ಅದು ಮಗುವಿನ ಜೀವಕ್ಕೆ ಅಪಾಯವನ್ನುಂಟು ಮಾಡುತ್ತದೆ ಎಂದು ನನಗೆ ತಿಳಿದಿರಲಿಲ್ಲ ಎಂದು ಹೇಳಿದ್ದಾರೆ.
ಇದೀಗ 5 ದಿನಗಳ ಬಳಿಕ ಮಗುವಿನ ಆರೋಗ್ಯ ಸುಧಾರಿಸುತ್ತಿದೆ. ಅಲ್ಲದೇ ಮಗುವಿಗೆ ಎದೆಹಾಲುಣಿಸುವ ಸಮಯದಲ್ಲಿ ತಂಬಾಕು ಸೇವಿಸದಮತೆ ವೈದ್ಯರು ಸಲಹೆ ನೀಡಿದ್ದಾರೆ. ಏಕೆಂದರೆ ತಾಯಿ ಹಾಲು ಮಾತ್ರ ಮಗು ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ. ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಅಭಿಯಾನ ಆರಂಭಿಸಬೇಕು ಎಂದು ವೈದ್ಯರು ಹೇಳಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:32 am, Mon, 3 July 23