ಗುಜರಾತ್‌ನಲ್ಲಿ ಒಂದು ತಿಂಗಳ ಹೆಣ್ಣು ಮಗುವಿಗೆ ಬಿಪೋರ್‌ಜಾಯ್ ಎಂದು ಹೆಸರಿಟ್ಟ ದಂಪತಿ

|

Updated on: Jun 15, 2023 | 4:53 PM

ಕಚ್ ಜಿಲ್ಲೆಯ ಜಖೌನ ಆಶ್ರಯ ಕೇಂದ್ರದಲ್ಲಿರುವ ಗುಜರಾತಿ ಕುಟುಂಬವೊಂದು ತಮ್ಮ ಒಂದು ತಿಂಗಳ ಹೆಣ್ಣು ಮಗುವಿಗೆ ಬಿಪೋರ್​​ಜಾಯ್ ಎಂಬ ಹೆಸರಿಡಲು ನಿರ್ಧರಿಸಿದೆ

ಗುಜರಾತ್‌ನಲ್ಲಿ ಒಂದು ತಿಂಗಳ ಹೆಣ್ಣು ಮಗುವಿಗೆ ಬಿಪೋರ್‌ಜಾಯ್ ಎಂದು ಹೆಸರಿಟ್ಟ ದಂಪತಿ
ಬಿಪೋರ್​​ಜಾಯ್ ಮಗು
Follow us on

ಜಖೌ (ಗುಜರಾತ್): ಪ್ರಕೃತಿ ವಿಕೋಪದ ಹೆಸರನ್ನು ಮಕ್ಕಳಿಗೆ ಇಡುವ ಪ್ರವೃತ್ತಿ ಇಂದು ನಿನ್ನೆಯದ್ದಲ್ಲ. ಇದೀದಗು ಸುದ್ದಿಯಲ್ಲಿರುವ ಚಂಡಮಾರುತದ ಹೆಸರು ಬಿಪೋರ್​​ಜಾಯ್ (Cyclone Biparjoy).  ಗುರುವಾರ ಗುಜರಾತ್ (Gujarat) ಕರಾವಳಿಗೆ ಬಿಪೋರ್​​ಜಾಯ್ ಚಂಡಮಾರುತ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಹೇಳಿದೆ. ಅಂದಹಾಗೆ ಗುಜರಾತ್​ನ ಮಹಿಳೆಯೊಬ್ಬರು ತಮ್ಮ ಒಂದು ತಿಂಗಳ ಮಗಳಿಗೆ ‘ಬಿಪೋರ್​​ಜಾಯ್ ’ ಎಂದು ಹೆಸರಿಡಲು ನಿರ್ಧರಿಸಿದ್ದಾರೆ. ಈ  ಕುಟುಂಬ ಈಗ ಕಚ್ ಜಿಲ್ಲೆಯ ಜಖೌನ ಆಶ್ರಯ ಕೇಂದ್ರದಲ್ಲಿದೆ. ಬಿಪೋರ್​​ಜಾಯ್ ಚಂಡಮಾರುತ ಗುಜರಾತಿಗೆ ಅಪ್ಪಳಿಸುವ ನಿರೀಕ್ಷೆ ಇದ್ದು, ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲ್ಪಟ್ಟ ಸಾವಿರಾರು ಜನರಲ್ಲಿ ಈ ಕುಟುಂಬವೂ ಸೇರಿದೆ.

ಈ ಹಿಂದೆಯೂ ಹಲವಾರು ಮಂದಿ ಚಂಡಮಾರುತದ ಹೆಸರುಗಳನ್ನು ಮಕ್ಕಳಿಗೆ ಇಟ್ಟಿದ್ದಾರೆ. ತಿತ್ಲಿ,ಫನಿ ಮತ್ತು ಗುಲಾಬ್ ಹೀಗೆ ಹೆಸರುಗಳ ಪಟ್ಟಿ ಮುಂದುವರಿಯುತ್ತದೆ.

ಆದಾಗ್ಯೂ, ಬಿಪೋರ್​​ಜಾಯ್ ಎಂಬ ಪದದ ಅರ್ಥ ವಿಪತ್ತು. ಈ ಹೆಸರನ್ನು ಬಾಂಗ್ಲಾದೇಶ ನೀಡಿದ್ದು, 2020 ರಲ್ಲಿ ವಿಶ್ವ ಹವಾಮಾನ ಸಂಸ್ಥೆ (WMO) ದೇಶಗಳು ಈ ಹೆಸರನ್ನು ಅನುಮೋದಿಸಿದ್ದವು.

ಇದನ್ನೂ ಓದಿ: Cyclone Biparjoy: ಬಾಹ್ಯಾಕಾಶದಿಂದ ಬಿಪೋರ್​​ಜಾಯ್ ಚಂಡಮಾರುತ ಹೇಗೆ ಕಾಣಿಸುತ್ತದೆ?; ಚಿತ್ರಗಳಲ್ಲಿ ನೋಡಿ

ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ, ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ನವಜಾತ ಶಿಶುವಿಗೆ ಕರೋನಾ ಎಂದು ಹೆಸರಿಸಲಾಯಿತು. ಇಷ್ಟೇ ಅಲ್ಲ ಆಂಧ್ರಪ್ರದೇಶದ ಕಡಪಾ ಜಿಲ್ಲೆಯ ಇತರ ಇಬ್ಬರು ಮಕ್ಕಳಿಗೆ ವೈರಸ್‌ನ ಹೆಸರನ್ನು ಇಡಲಾಗಿದೆ. ಕೊರೊನಾ ಹೊತ್ತಲ್ಲಿ ರಾಜಸ್ಥಾನದ ದಂಪತಿಗಳು ತ್ರಿಪುರಾದಲ್ಲಿ ಸಿಲುಕಿಕೊಂಡಿದ್ದರು. ಕೋವಿಡ್ ಹರಡುವಿಕೆಯನ್ನು ನಿಯಂತ್ರಿಸಲು ಸರ್ಕಾರ ವಿಧಿಸಿದ ನಿರ್ಬಂಧಗಳ ನಂತರ ತಮ್ಮ ಗಂಡು ಮಗುವಿಗೆ “ಲಾಕ್‌ಡೌನ್” ಎಂದು ಹೆಸರಿಟ್ಟಿದ್ದರು. ಮುಂಬೈನಿಂದ ಉತ್ತರ ಪ್ರದೇಶವನ್ನು ತಲುಪಲು ರೈಲು ಪ್ರಯಾಣ ಮಾಡುತ್ತಿದ್ದಾಗ ಜನಿಸಿದ ಮಗುವಿಗೂ ಲಾಕ್‌ಡೌನ್ ಎಂಬ ಹೆಸರಿಡಲಾಗಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:53 pm, Thu, 15 June 23