Viral News: ವಧುವನ್ನು ಅಲಂಕರಿಸಿದ ಜೆಸಿಬಿಯಲ್ಲಿ ಕರೆದುಕೊಂಡು ಬಂದ ವರ, ಸ್ವಚ್ಛತೆಗೆ ಸ್ಫೂರ್ತಿಯಾದ ದಂಪತಿಗಳು
ಮದುವೆಗೆ ವಧು-ವರರು ಸಾಮಾನ್ಯವಾಗಿ ಮೆರವಣಿಗೆಗಾಗಿ ಕಾರು ಅಥವಾ ಕುದುರೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ, ಆದರೆ ಇಲ್ಲಿ ಮದುವೆಯಾಗಲು ಜೆಸಿಬಿಯಲ್ಲಿ ಮದುವೆಯ ಸ್ಥಳಕ್ಕೆ ಬಂದಿದ್ದಾರೆ. ಇದರ ಜತೆಗೆ ಸ್ವಚ್ಛತೆಯ ಮಹತ್ವವನ್ನು ಕೂಡ ವರ ಕೃಷ್ಣ ಮಹತೋ ತಿಳಿಸಿದ್ದಾರೆ.
ರಾಂಚಿ: ಜಾರ್ಖಂಡ್‌ನ ರಾಂಚಿಯಲ್ಲಿ ಮದುವೆ ಜೋಡಿಗಳು ವಿಶೇಷವಾಗಿ ಮದುವೆ ಮಂಟಪಕ್ಕೆ ಬಂದಿರುವ ಘಟನೆ ನಡೆದಿದೆ. ಇದೀಗ ಈ ಮದುವೆಯ ಮೆರವಣಿಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗಿದೆ. ಮದುವೆಗೆ ವಧು-ವರರು ಸಾಮಾನ್ಯವಾಗಿ ಮೆರವಣಿಗೆಗಾಗಿ ಕಾರು ಅಥವಾ ಕುದುರೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ, ಆದರೆ ಇಲ್ಲಿ ಮದುವೆಯಾಗಲು ಜೆಸಿಬಿಯಲ್ಲಿ ಮದುವೆಯ ಸ್ಥಳಕ್ಕೆ ಬಂದಿದ್ದಾರೆ. ವರ ರಾಜಾ ಕೃಷ್ಣ ಮಹತೋ ತನ್ನ ವಧುವನ್ನು ಮನೆಗೆ ಕರೆದೊಯ್ಯಲು ಜೆಸಿಬಿ ಸವಾರಿ ಮಾಡುವ ಮೂಲಕ ಮದುವೆಯ ಸ್ಥಳದಿಂದ ಅದ್ಧೂರಿಯಾಗಿ ಬಂದಿರುವುದು ಎಲ್ಲರ ಗಮನ ಸೆಳೆದಿದೆ. ಜೆಸಿಬಿಯನ್ನು ಹೂವುಗಳಿಂದ ಸುಂದರವಾಗಿ ಅಲಂಕರಿಸಲಾಗಿದ್ದು, ಹಾಯಾಗಿ ಕುಳಿತುಕೊಳ್ಳಲು ಹಾಸಿಗೆ, ಕುಶನ್‌ಗಳನ್ನು ಹಾಕಲಾಗಿತ್ತು.
ಅದ್ಧೂರಿಯಾಗಿ ಮೆರವಣಿಗೆ ಹೊರಟಾಗ ನೋಡುಗರೆಲ್ಲ ಬೆರಗಾಗುವಂತೆ ಮಾಡಿತು. ಈ ವಿಶಿಷ್ಟ ಮದುವೆಯ ಮೆರವಣಿಗೆಯನ್ನು ವೀಕ್ಷಿಸಲು ಅಪಾರ ಜನಸ್ತೋಮ ನೆರೆದಿತ್ತು. ವರನು ತನ್ನ ವಧುವಿನ ಜೊತೆ ಜೆಸಿಬಿ ಮೇಲೆ ಕುಳಿತಿರುವ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: Viral Video: ನ್ಯೂಯಾರ್ಕ್ ನಗರಕ್ಕೆ ಮುತ್ತಿಗೆ ಹಾಕಿದ ಜೇನು ಸಮೂಹ
ವೃತ್ತಿಯಲ್ಲಿ ಹೂವಿನ ವ್ಯಾಪಾರಿಯಾಗಿರುವ ವರ ಕೃಷ್ಣ ಮಹತೋ ತಮ್ಮ ಮದುವೆಗೆ ಏನಾದರೂ ವಿಶೇಷವಾಗಿರುವುದನ್ನು ಮಾಡಬೇಕೆಂಬ ಆಸೆಯನ್ನು ವ್ಯಕ್ತಪಡಿಸಿದರು. ನಾನು ಅನೇಕ ಮದುವೆಯ ಕಾರುಗಳಿಗೆ ಹೂವಿನ ಅಲಂಕಾರ ಮಾಡಿದ್ದೇನೆ, ಆದರೆ ಅವರು ತನ್ನ ಮದುವೆ ಏನಾದರೂ ವಿಶೇಷವಾಗಿರುವುದನ್ನು ಮಾಡಬೇಕು ಎಂದು ಈ ರೀತಿಯಲ್ಲಿ ಅಲಂಕಾರ ಮಾಡಿದ್ದೇನೆ ಎಂದು ಹೇಳಿದ್ದಾರೆ.
ವೈವಾಹಿಕ ಜೀವನದಲ್ಲಿ ಸ್ವಚ್ಛತೆ ಮತ್ತು ಅಚ್ಚುಕಟ್ಟುತನದ ಮಹತ್ವವನ್ನು ಸಾರುವ ಸಂದೇಶ ಈ ವಿಶಿಷ್ಟ ವಿವಾಹ ಮೆರವಣಿಗೆಯ ಹಿಂದಿದೆ. ಜೆಸಿಬಿಯನ್ನು ನೋಡಿದಾಗ ಒಬ್ಬರಿಗೆ ಸ್ವಚ್ಛತೆಯ ನೆನಪಾಗುವಂತೆ, ಕೃಷ್ಣ ಮಹತೋ ತನ್ನ ಮದುವೆಯಲ್ಲಿ ಆ ಜಾಗೃತಿಯನ್ನು ಮೂಡಿಸುವ ಗುರಿಯನ್ನು ಹೊಂದಿದ್ದರು, ಅನೇಕರು ಇವರ ಮದುವೆಗೆ ಶುಭ ಹಾರೈಸಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ