
ತಿರುವನಂತಪುರಂ, ಅಕ್ಟೋಬರ್ 22: ಶಬರಿಮಲೆ ದೇವಸ್ಥಾನದಲ್ಲಿ ಚಿನ್ನ ಕಳುವಾಗಿರುವ ಘಟನೆ ಹಿಂದೂ ಧಾರ್ಮಿಕ ಭಕ್ತರಿಗೆ ಆಘಾತ ಕೊಟ್ಟ ಘಟನೆ ಮಾಸುವ ಮುನ್ನವೇ ಕೇರಳದ ಮತ್ತೊಂದು ದೇವಸ್ಥಾನದಲ್ಲಿ ಅಂತಹುದ್ದೇ ಪ್ರಕರಣ ನಡೆದಿರುವುದು ಬೆಳಕಿಗೆ ಬಂದಿದೆ. ಬಹಳ ಜನಪ್ರಿಯವಾದ ಗುರುವಾಯೂರ್ ದೇವಸ್ಥಾನಗಳಲ್ಲಿ (Guruvayur temple) ಬೆಲೆಬಾಳುವ ಆಭರಣಗಳು ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ.
ಕೇರಳದಲ್ಲಿ 12 ದೇವಸ್ಥಾನಗಳ ಆಡಳಿತ ನಿಭಾಯಿಸುವ ಗುರುವಾಯೂರ್ ದೇವಸ್ವಾಮ್ ಮಂಡಳಿಯ ಆಡಿಟಿಂಗ್ ವೇಳೆ ಸಾಕಷ್ಟು ವ್ಯತ್ಯಯಗಳು ಪತ್ತೆಯಾಗಿವೆ. 2019ರಲ್ಲಿ ಮಾಡಲಾದ ಆಡಿಟಿಂಗ್ನಲ್ಲಿ ಕೆಲ ಗಮನಾರ್ಹ ಸಂಗತಿಗಳು ಬೆಳಕಿಗೆ ಬಂದಿವೆ. ಚಿನ್ನ, ಬೆಳ್ಳಿ, ದಂತ ಇತ್ಯಾದಿ ಹಲವು ವಸ್ತುಗಳು ಕಾಣೆಯಾಗಿರುವುದು ಗೊತ್ತಾಗಿದೆ. ಗೋಲ್ಡ್ ಸ್ಕೀಮ್ನಲ್ಲಿ ಇರಲಾಗಿದ್ದ ಠೇವಣಿಗಳಿಂದ 79 ಲಕ್ಷ ರೂ ನಷ್ಟವಾಗಿರುವುದನ್ನು ತೋರಿಸಲಾಗಿದೆ.
ಇದನ್ನೂ ಓದಿ: ರಷ್ಯಾದಿಂದ ತೈಲ ಖರೀದಿ ಕಡಿಮೆ ಮಾಡುತ್ತೆ ಭಾರತ, ಪ್ರಧಾನಿ ಮೋದಿಯಿಂದ ಭರವಸೆ ಸಿಕ್ಕಿದೆ ಎಂದ ಟ್ರಂಪ್
2019-20 ಮತ್ತು 2020-21ರ ಅವಧಿಯಲ್ಲಿ ಗುರುವಾಯೂರ್ ದೇವಸ್ವಾಮ್ನ ಆಡಿಟಿಂಗ್ ಅನ್ನು ಸರ್ಕಾರದಿಂದ ನಡೆಸಲಾಗಿತ್ತು. ಅದರ ವರದಿಯು ಈಗ ಬೆಳಕಿಗೆ ಬಂದಿದೆ. ಆದಾಯ ಮತ್ತು ವೆಚ್ಚದ ಲೆಕ್ಕದಲ್ಲಿ ವ್ಯತ್ಯಾಸ ಗೊತ್ತಾಗಿದೆ. ಚಿನ್ನ, ಬೆಳ್ಳಿ ಇತ್ಯಾದಿ ಬೆಲೆಬಾಳುವ ವಸ್ತುಗಳ ಪರಿಶೀಲನೆಯನ್ನು ಸರಿಯಾಗಿ ನಡೆಸಲಾಗಿಲ್ಲ ಎಂಬುದು ಗೊತ್ತಾಗಿದೆ. ಒಟ್ಟಾರೆ 25 ಕೋಟಿ ರೂ ಮೊತ್ತದ ವಸ್ತುಗಳಿಗೆ ಲೆಕ್ಕ ಸಿಕ್ಕಿಲ್ಲ ಎನ್ನಲಾಗಿದೆ.
ಗುರುವಾಯೂರ್ ದೇವಸ್ಥಾನದಲ್ಲಿ ಚಿನ್ನ ನಾಪತ್ತೆಯಾಗಿರುವುದು ಹಾಗೂ ಆಡಳಿತ ನಿರ್ವಹಣೆ ಸರಿಯಾಗಿ ಆಗದೇ ಇರುವುದು ಸೋಷಿಯಲ್ ಮೀಡಿಯಾದಲ್ಲಿ ಕೆಲವರಿಂದ ಆಕ್ರೋಶಕ್ಕೆ ಎಡೆ ಮಾಡಿಕೊಟ್ಟಿದೆ. ಕೇರಳದ ಎಡಪಂಥೀಯ ಸರ್ಕಾರ ಉದ್ದೇಶಪೂರ್ವಕವಾಗಿ ಹಿಂದೂ ದೇವಸ್ಥಾನಗಳನ್ನು ನಿರ್ಲಕ್ಷಿಸುತ್ತಿವೆ ಎಂದು ಪ್ರದೀಪ್ ಭಂಡಾರಿ ಎನ್ನುವವರು ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಸೋಷಿಯಲ್ ಮೀಡಿಯಾ ಪೋಸ್ಟ್
HUGE INSULT TO HINDU ASTHA BY LEFT GOVT IN KERALA :
After Sabarimala, now Guruvayur Temple, Audit reveals gold missing from temple treasury.
Left government’s INTENTIONAL negligence and mismanagement of Kerala’s revered temples is SHOCKING.
From Sabarimala’s traditions being… pic.twitter.com/0fg7tX7hvu
— Pradeep Bhandari(प्रदीप भंडारी)🇮🇳 (@pradip103) October 22, 2025
ಇದನ್ನೂ ಓದಿ: ತಮಿಳುನಾಡಿನಲ್ಲಿ ವರುಣ ಅಬ್ಬರ; ಚಂಡಮಾರುತ ಸಂಭವ; ಬೆಂಗಳೂರಿಗೂ ರಾಚುತ್ತಾ ಮಳೆ?
ಇದೇ ವೇಳೆ, ಗುರುವಾಯೂರ್ ದೇವಸ್ವಾಮ್ ಮಂಡಳಿ ಈ ಆಡಿಟಿಂಗ್ ಬಗ್ಗೆ ಪ್ರತಿಕ್ರಿಯಿಸಿದ್ದು, ಈ ಲೋಪದೋಷಗಳನ್ನು ಸರಿಪಡಿಸಲಾಗಿದ್ದು, ಈ ಮಾಹಿತಿಯನ್ನು ಕೇರಳ ಹೈಕೋರ್ಟ್ಗೆ ವಿವರಾದ ಅಫಿಡವಿಟ್ ಮೂಲಕ ಸಲ್ಲಿಸಲಾಗಿದೆ ಎಂದು ಹೇಳಿದೆ. ಕೇರಳ ಸರ್ಕಾರ ಕೂಡ ಇದೇ ಅಭಿಪ್ರಾಯ ನೀಡಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 6:54 pm, Wed, 22 October 25