ತಮಿಳುನಾಡಿನಲ್ಲಿ ವರುಣ ಅಬ್ಬರ; ಚಂಡಮಾರುತ ಸಂಭವ; ಬೆಂಗಳೂರಿಗೂ ರಾಚುತ್ತಾ ಮಳೆ?
Heavy rains hit Chennai and other places of TN: ತಮಿಳುನಾಡಿಗೆ ಈಶಾನ್ಯ ಮುಂಗಾರು ಪ್ರವೇಶ ಮಾಡಿದ್ದು ಭಾರೀ ಮಳೆಯಾಗಲಿದೆ. ಹಲವು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಚೆನ್ನೈ ಸೇರಿದಂತೆ ಎಂಟು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಹೊರಡಿಸಲಾಗಿದೆ. ಇಲ್ಲೆಲ್ಲಾ ಭಾರೀ ಮಳೆಯಾಗಬಹುದು. ಚಂಡಮಾರುತ ಕೂಡ ನಿರ್ಮಾಣ ಆಗುವ ಸಾಧ್ಯತೆ ಇದೆ.

ಚೆನ್ನೈ, ಅಕ್ಟೋಬರ್ 21: ತಮಿಳುನಾಡಿಗೆ ಮುಂಗಾರು (North east Monsoon) ಭರ್ಜರಿಯಾಗಿ ಅಡಿ ಇಟ್ಟಿದೆ. ಸತತ ಮಳೆ ಸುರಿಯಲು ಆರಂಭವಾಗಿದೆ. ತಮಿಳುನಾಡಿನ ಎಂಟು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಬಹುದು (heavy rainfall) ಎಂದು ರೆಡ್ ಅಲರ್ಟ್ ಹೊರಡಿಸಲಾಗಿದೆ. ಸರ್ಕಾರವು ಮುಂಜಾಗ್ರತಾ ಕ್ರಮಗಳನ್ನು ಜಾರಿಗೊಳಿಸಿದೆ. ಪರಿಹಾರ ಕಾರ್ಯಾಚರಣೆಗಳು ಹಾಗೂ ಪ್ರವಾಹ ನಿಯಂತ್ರಣ ವ್ಯವಸ್ಥೆಯನ್ನು ಸಜ್ಜುಗೊಳಿಸಲಾಗಿದೆ.
ಚೆನ್ನೈನಲ್ಲಿ ಆರೆಂಜ್ ಅಲರ್ಟ್ ಹೊರಡಿಸಲಾಗಿದೆ. ಇಲ್ಲಿ 11-20 ಸೆಂ.ಮೀ. ಮಳೆಯಾಗುವ ಸೂಚನೆ ಇದೆ. ಎಂಟು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಇದ್ದು, ಅಲ್ಲಿ 20 ಸೆಂ.ಮೀ.ಗಿಂತ ಹೆಚ್ಚು ತೀವ್ರತರವಾದ ಮಳೆಯಾಗುವ ಸಂಭವ ಇದೆ.
ಇದನ್ನೂ ಓದಿ: ಪಾಕಿಸ್ತಾನಕ್ಕೆ ಭಾರತದ ಖಡಕ್ ಸಂದೇಶವಾ? ಕಾಬೂಲ್ನಲ್ಲಿ ಭಾರತದ ರಾಯಭಾರ ಕಚೇರಿ ಪುನಾರಂಭ
ರೆಡ್ ಅಲರ್ಟ್ ಇರುವ ಜಿಲ್ಲೆಗಳು
- ವಿಲುಪುರಂ
- ಕಡಲೂರು
- ಮಾಯಿಲಾಡುದುರೈ
- ನಾಗಪಟ್ಟಿಣಂ
- ತಿರುವಳ್ಳೂರ್
- ತಂಜಾವೂರ್
- ಪುದುಕ್ಕೋಟ್ಟೈ
- ರಾಮನಾಥಪುರಂ
ಆರೆಂಜ್ ಅಲರ್ಟ್ ಹೊರಡಿಸಲಾದ ಜಿಲ್ಲೆಗಳು
- ಚೆನ್ನೈ
- ಚಂಗಲಪಟ್ಟು
- ಕಾಂಚೀಪುರಂ
- ಕಲ್ಲಕುರಿಚ್ಚಿ
- ಅರಿಯಾಲೂರು
- ಪೇರಂಬಲೂರು
- ತೂತ್ತುಕುಡಿ
- ತಿರುನೆಲ್ವೇಲಿ
- ಕನ್ಯಾಕುಮಾರಿ
ಇದನ್ನೂ ಓದಿ: ಕೊಲೆಯಲ್ಲಿ ಅಂತ್ಯವಾಯಿತಾ ಸೊಸೆ-ಮಾವ ಅಕ್ರಮ ಸಂಬಂಧ? ಮಾಜಿ ಸಚಿವೆ ಮತ್ತು ಮಾಜಿ ಡಿಜಿಪಿ ವಿರುದ್ಧ ಪ್ರಕರಣ ದಾಖಲು
ಸೈಕ್ಲೋನ್ ರಚನೆಯಾಗುವ ಸಂಭವ; ಬೆಂಗಳೂರಿಗೂ ಮಳೆ?
ಈಶಾನ್ಯ ಮುಂಗಾರು ತೀವ್ರವಾಗುತ್ತಿದ್ದು, ಹವಾಮಾನ ಇಲಾಖೆ ಪ್ರಕಾರ ಚಂಡಮಾರುತ ರಚನೆಯಾಗುವ ಸಂಭವ ಕಾಣುತ್ತಿದೆ. ತಮಿಳುನಾಡಿನ ಎಂಟು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಬಹುದೆಂದು ರೆಡ್ ಅಲರ್ಟ್ ಇದೆ. ಅದರಲ್ಲೂ ಚಂಗಲಪಟ್ಟು, ವಿಲುಪುರಂ, ಕಡಲೂರು, ಮಾಯಿಲದುರೈ ಜಿಲ್ಲೆಗಳಲ್ಲಿ ತೀವ್ರತರವಾದ ಮಳೆಯಾಗಬಹುದು ಎಂದು ಎಚ್ಚರಿಸಲಾಗಿದೆ.
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಒತ್ತಡದಿಂದ ಚಂಡಮಾರುತ ನಿರ್ಮಾಣವಾಗುವ ಸಾಧ್ಯತೆ ಇದೆ. ತಮಿಳುನಾಡು, ಪಾಂಡಿಚೆರಿ ಮತ್ತು ಆಗ್ನೇಯ ಆಂಧ್ರ ಕರಾವಳಿಯಲ್ಲಿ ಚಂಡಮಾರುತ ಅಪ್ಪಳಿಸಬಹುದು. ಬೆಂಗಳೂರಿನವರೆಗೂ ಮಳೆಯಾಗುವ ಸಾಧ್ಯತೆ ಇಲ್ಲದಿಲ್ಲ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:17 pm, Tue, 21 October 25




