ಉಲ್ಫಾ ಬೆದರಿಕೆ ನಂತರ ಗುವಾಹಟಿಯಲ್ಲಿ 2 ಐಇಡಿ ತರಹದ ವಸ್ತುಗಳು ಪತ್ತೆ

|

Updated on: Aug 15, 2024 | 7:20 PM

ಬಾಂಬ್ ನಿಷ್ಕ್ರಿಯ ದಳಗಳು, ಮೆಟಲ್ ಡಿಟೆಕ್ಟರ್‌ಗಳು ಮತ್ತು ಸ್ನಿಫರ್ ಡಾಗ್‌ಗಳನ್ನು ಪ್ರತಿ ಸ್ಥಳಕ್ಕೆ ರವಾನಿಸಲಾಗಿದೆ. ಇದುವರೆಗೆ ಬಾಂಬ್‌ಗಳನ್ನು ವಶಪಡಿಸಿಕೊಳ್ಳುವ ಬಗ್ಗೆ ನಮಗೆ ಯಾವುದೇ ಮಾಹಿತಿ ಸಿಕ್ಕಿಲ್ಲ" ಎಂದು ಅಸ್ಸಾಂ ಪೊಲೀಸ್ ಪ್ರಧಾನ ಕಚೇರಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಉಲ್ಫಾ (I) ಹೆಸರಿಸಿದ 24 ಸ್ಥಳಗಳಲ್ಲಿ ಎಂಟು ಗುವಾಹಟಿಯಲ್ಲಿವೆ. ಇದರಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಇತರ ಮಂತ್ರಿಗಳ ಅಧಿಕೃತ ನಿವಾಸಗಳ ಸಮೀಪವಿರುವ ದಿಸ್ಪುರದ ಲಾಸ್ಟ್ ಗೇಟ್‌ನಲ್ಲಿ ತೆರೆದ ಮೈದಾನವೂ ಸೇರಿದೆ

ಉಲ್ಫಾ ಬೆದರಿಕೆ ನಂತರ ಗುವಾಹಟಿಯಲ್ಲಿ 2 ಐಇಡಿ ತರಹದ ವಸ್ತುಗಳು ಪತ್ತೆ
ಅಸ್ಸಾಂ ಪೊಲೀಸರ ಶೋಧ ಕಾರ್ಯಾಚರಣೆ
Follow us on

ಗುವಾಹಟಿ ಆಗಸ್ಟ್ 15: ನಿಷೇಧಿತ ಉಗ್ರಗಾಮಿ ಸಂಘಟನೆ ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸೋಮ್ (ULFA) (ಇಂಡಿಪೆಂಡೆಂಟ್) ಗುರುವಾರ ಅಸ್ಸಾಂನ 24 ಸ್ಥಳಗಳಲ್ಲಿ ಬಾಂಬ್‌ಗಳನ್ನು ಸ್ಥಾಪಿಸಿರುವುದಾಗಿ ಹೇಳಿಕೊಂಡಿದ್ದು, ಭದ್ರತಾ ಪಡೆಗಳು ಇಲ್ಲಿ ಶೋಧ ಕಾರ್ಯಾಚರಣೆ ನಡೆಸಿವೆ. ಮಾಧ್ಯಮ ಸಂಸ್ಥೆಗಳಿಗೆ ಕಳುಹಿಸಿದ ಇಮೇಲ್‌ನಲ್ಲಿ, ಉಲ್ಫಾದ ಶಾಂತಿ-ವಿರೋಧಿ ಗುಂಪು “ತಾಂತ್ರಿಕ ವೈಫಲ್ಯ” ದಿಂದ ಬಾಂಬ್‌ಗಳನ್ನು ಸ್ಫೋಟಿಸಲು ವಿಫಲವಾಗಿದೆ ಎಂದು ಹೇಳಿದ್ದು ಸ್ಫೋಟಕಗಳನ್ನು ನಿಷ್ಕ್ರಿಯಗೊಳಿಸಲು ಸಾರ್ವಜನಿಕ ಸಹಕಾರ ಕೇಳಿದೆ.

ಇದು 19 ನಿರ್ದಿಷ್ಟ ಸ್ಥಳಗಳಿಗೆ ವಿವರಗಳನ್ನು ನೀಡಿದ್ದರೂ, ಇನ್ನೂ ಐದು ಸ್ಫೋಟಕಗಳ ಸ್ಥಳಗಳನ್ನು ಕಂಡುಹಿಡಿಯಲಾಗಲಿಲ್ಲ ಎಂದು ಸಂಘಟನೆ ಹೇಳಿದೆ. ಇಮೇಲ್‌ನಲ್ಲಿ ಗುರುತಿಸಲಾದ ಎಲ್ಲಾ ಸ್ಥಳಗಳಿಗೆ ಬಾಂಬ್ ನಿಷ್ಕ್ರಿಯ ದಳಗಳು, ಮೆಟಲ್ ಡಿಟೆಕ್ಟರ್‌ಗಳು ಮತ್ತು ಸ್ನಿಫರ್ ಡಾಗ್‌ಗಳನ್ನು ನಿಯೋಜಿಸುವ ಮೂಲಕ ಅಸ್ಸಾಂ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದಾರೆ.

ಬಾಂಬ್ ನಿಷ್ಕ್ರಿಯ ದಳಗಳು, ಮೆಟಲ್ ಡಿಟೆಕ್ಟರ್‌ಗಳು ಮತ್ತು ಸ್ನಿಫರ್ ಡಾಗ್‌ಗಳನ್ನು ಪ್ರತಿ ಸ್ಥಳಕ್ಕೆ ರವಾನಿಸಲಾಗಿದೆ. ಇದುವರೆಗೆ ಬಾಂಬ್‌ಗಳನ್ನು ವಶಪಡಿಸಿಕೊಳ್ಳುವ ಬಗ್ಗೆ ನಮಗೆ ಯಾವುದೇ ಮಾಹಿತಿ ಸಿಕ್ಕಿಲ್ಲ” ಎಂದು ಅಸ್ಸಾಂ ಪೊಲೀಸ್ ಪ್ರಧಾನ ಕಚೇರಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಉಲ್ಫಾ (I) ಹೆಸರಿಸಿದ 24 ಸ್ಥಳಗಳಲ್ಲಿ ಎಂಟು ಗುವಾಹಟಿಯಲ್ಲಿವೆ. ಇದರಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಇತರ ಮಂತ್ರಿಗಳ ಅಧಿಕೃತ ನಿವಾಸಗಳ ಸಮೀಪವಿರುವ ದಿಸ್ಪುರದ ಲಾಸ್ಟ್ ಗೇಟ್‌ನಲ್ಲಿ ತೆರೆದ ಮೈದಾನವೂ ಸೇರಿದೆ.  ಇಮೇಲ್‌ನಲ್ಲಿ ಉಲ್ಲೇಖಿಸಲಾದ ಇತರ ಪ್ರದೇಶಗಳು ಅಂದರೆ ನರೇಂಗಿಯಲ್ಲಿನ ಸೇನಾ ಕಂಟೋನ್ಮೆಂಟ್ ಬಳಿಯ ಸತ್ಗಾಂವ್ ರಸ್ತೆ, ಹಾಗೆಯೇ ಆಶ್ರಮ ರಸ್ತೆ, ಪನ್‌ಬಜಾರ್, ಜೋರಾಬತ್, ಭೇಟಪಾರಾ, ಮಾಲಿಗಾಂವ್ ಮತ್ತು ರಾಜ್‌ಗಢ್.

ಆರು ಸ್ಥಳಗಳಲ್ಲಿ ಪೊಲೀಸರಿಗೆ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗದಿದ್ದರೂ, ಅವರು ಪನ್‌ಬಜಾರ್ ಮತ್ತು ಗಾಂಧಿ ಬಸ್ತಿಯಲ್ಲಿ ಎರಡು ಐಇಡಿ ತರಹದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. “ನಾವು ಎಂಟು ಸ್ಥಳಗಳನ್ನು ಸಂಪೂರ್ಣವಾಗಿ ಹುಡುಕಿದೆವು. ಈ ಸ್ಥಳಗಳ ಪೈಕಿ ಆರರಲ್ಲಿ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ, ಆದರೆ ಪನ್‌ಬಜಾರ್ ಮತ್ತು ಗಾಂಧಿ ಬಸ್ತಿಯಲ್ಲಿ ಎರಡು ಐಇಡಿ ಮಾದರಿಯ ವಸ್ತುಗಳು ಪತ್ತೆಯಾಗಿವೆ ಎಂದು ಗುವಾಹಟಿ ಪೊಲೀಸ್ ಆಯುಕ್ತ ದಿಗಂತ ಬರಾಹ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: Video: ಸ್ವಾತಂತ್ರೋತ್ಸವದ ಈ ಸುದಿನದಂದು ಗಗನಯಾನ ಕಾರ್ಯಕ್ರಮವನ್ನು ಪ್ರದರ್ಶಿಸಿದ ಇಸ್ರೋ

ಶಿವಸಾಗರ್, ದಿಬ್ರುಗಢ್, ಲಖಿಂಪುರ, ನಾಗಾಂವ್, ನಲ್ಬರಿ, ತಮುಲ್ಪುರ್, ತಿನ್ಸುಕಿಯಾ ಮತ್ತು ಗೋಲಾಘಾಟ್ ಜಿಲ್ಲೆಗಳನ್ನು ಸಹ ಉಲ್ಫಾ(I) ತನ್ನ 24 ಸ್ಥಳಗಳ ಪಟ್ಟಿಯಲ್ಲಿ ಹೆಸರಿಸಿದೆ. ಇಮೇಲ್‌ನಲ್ಲಿ ಉಲ್ಲೇಖಿಸಲಾದ ಸ್ಥಳಗಳಲ್ಲಿ ಮತ್ತು ಸುತ್ತಮುತ್ತಲಿನ ಎಲ್ಲಾ ರಸ್ತೆಗಳನ್ನು ಪೊಲೀಸರು ಮುಚ್ಚಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಎಲ್ಲಾ ಸ್ಥಳಗಳಿಗೆ ದೌಡಾಯಿಸಿದ್ದು, ಶೋಧ ಕಾರ್ಯಾಚರಣೆಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ