Video: ಸ್ವಾತಂತ್ರೋತ್ಸವದ ಈ ಸುದಿನದಂದು ಗಗನಯಾನ ಕಾರ್ಯಕ್ರಮವನ್ನು ಪ್ರದರ್ಶಿಸಿದ ಇಸ್ರೋ
78ನೇ ಸ್ವಾತಂತ್ರ್ಯ ದಿನದಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮಹತ್ವಾಕಾಂಕ್ಷೆಯ ಗಗನ್ ಯಾನ್ ಕಾರ್ಯಕ್ರಮದ ಭಾಗವಾಗಿ ದೇಶೀಯವಾಗಿ ಅಭಿವೃದ್ಧಿಪಡಿಸಿದ ಬಾಹ್ಯಾಕಾಶ ನೌಕೆಯಲ್ಲಿ ಬಾಹ್ಯಾಕಾಶಕ್ಕೆ ಹಾರಲು ತಯಾರಾಗಿರುವ ಗಗನಯಾತ್ರಿಗಳ ಮೊದಲ ಬ್ಯಾಚ್‌ನ ತರಬೇತಿಯನ್ನು ಪ್ರದರ್ಶಿಸಿದೆ. ಈ ಕುರಿತ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಮಹತ್ವಾಕಾಂಕ್ಷೆಯ ಗಗನ್ ಯಾನ್ ಕಾರ್ಯಕ್ರಮದ ಭಾಗವಾಗಿ ದೇಶೀಯವಾಗಿ ಅಭಿವೃದ್ಧಿಪಡಿಸಿದಂತಹ ಬಾಹ್ಯಾಕಾಶ ನೌಕೆಯಲ್ಲಿ ಬಾಹ್ಯಾಕಾಶಕ್ಕೆ ಹಾರಲು ತಯಾರಾಗಿರುವ ಗಗನಯಾತ್ರಿಗಳ ಮೊದಲ ಬ್ಯಾಚ್‌ನ ತರಬೇತಿಯನ್ನು ಸ್ವಾತಂತ್ರ ದಿನದ ಅಂಗವಾಗಿ ಇಂದು ಇಸ್ರೋ ಪ್ರದರ್ಶಿಸಿದೆ. ಈ ಗಗನಯಾನ ಮಿಷನ್ ಕಾರ್ಯಕ್ರಮ ಪ್ರದರ್ಶನದ ವಿಡಿಯೋವನ್ನು ಇಸ್ರೋ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.
ಇಸ್ರೋದ ಬಹು ಮಹತ್ವಾಕಾಂಕ್ಷೆಯ ಗಗನಯಾನ ಮಿಷನ್‌ನಲ್ಲಿ, ಮೂರು ದಿನಗಳ ಕಾರ್ಯಾಚರಣೆಯಲ್ಲಿ ಮೂವರು ಸಿಬ್ಬಂದಿಯನ್ನು, 400 ಕಿಮೀ ಕಕ್ಷೆಗೆ ಉಡಾಯಿಸುವ ಮೂಲಕ ಮಾನವ ಸಹಿತ ಬಾಹ್ಯಾಕಾಶ ಹಾರಾಟದ ಸಾಮರ್ಥ್ಯವನ್ನು ಪ್ರದರ್ಶಿಸಿ, ಅವರನ್ನು ಸುರಕ್ಷಿತವಾಗಿ ಭೂಮಿಗೆ ಕರೆತರಲಾಗುವ ಯೋಜನೆಯಾಗಿದೆ. ಈ ಗಗನಯಾನಿಗಳು ಇರುವ ಕ್ಯಾಪ್ಸೂಲ್ ಹೊತ್ತ ರಾಕೆಟ್ 2025ಕ್ಕೆ ಗಗನಕ್ಕೆ ಚಿಮ್ಮಲಿದೆ. ಈಗಾಗಲೇ ಗಗನಯಾತ್ರಿಗಳ ಗ್ರೂಪ್ ಕ್ಯಾಪ್ಟನ್‌ಗಳಾದ ಪ್ರಶಾಂತ್ ಬಾಲಕೃಷ್ಣನ್ ನಾಯರ್, ಅಂಗದ್ ಪ್ರತಾಪ್, ಅಜಿತ್ ಕೃಷ್ಣನ್ ಮತ್ತು ವಿಂಗ್ ಕಮಾಂಡರ್ ಶುಭಾಂಶು ಶುಕ್ಲಾ ಅವರು ಬೆಂಗಳೂರಿನ ಮಾನವ ಬಾಹ್ಯಾಕಾಶ ಹಾರಾಟ ಕೇಂದ್ರದಲ್ಲಿ ಮತ್ತು ಮಾಸ್ಕೋದ ಸ್ಟಾರ್ ಸಿಟಿಯಲ್ಲಿ ಯೂರಿ ಗಗಾರಿನ್ ಗಗನಯಾತ್ರಿ ತರಬೇತಿ ಕೇಂದ್ರದಲ್ಲಿ ಮೂರು ವರ್ಷಗಳ ತರಬೇತಿಯನ್ನು ಪಡೆದಿದ್ದಾರೆ. ಇಂದು ಈ ನಾಲ್ಕು ಗಗನಯಾನಿಗಳು ಮಹತ್ವಾಕಾಂಕ್ಷೆಯ ಗಗನಯಾನ ಮಿಷನ್ ಕಾರ್ಯಕ್ರಮವನ್ನು ಪ್ರದರ್ಶಿಸಿದರು.
National Space Day – 2024
🇮🇳 Jai Hind… A testament to Aatmanirbhar Bharat#NSpD2024 @DrJitendraSingh pic.twitter.com/jRuogExFi2
— ISRO (@isro) August 15, 2024
ಈ ಕುರಿತ ಪೋಸ್ಟ್ ಒಂದನ್ನು ಇಸ್ರೋ (ISISRO ತನ್ನ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿದ್ದು, “ಆತ್ಮನಿರ್ಭರ ಭಾರತಕ್ಕೆ ಸಾಕ್ಷಿ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದೆ. ವೈರಲ್ ವೀಡಿಯೋದಲ್ಲಿ ಮಹತ್ವಾಕಾಂಕ್ಷೆಯ ಗಗನ್ ಯಾನ್ ಕಾರ್ಯಕ್ರಮದ ಭಾಗವಾಗಿ ದೇಶೀಯವಾಗಿ ಅಭಿವೃದ್ಧಿಪಡಿಸಿದ ಬಾಹ್ಯಾಕಾಶ ನೌಕೆಯಲ್ಲಿ ಬಾಹ್ಯಾಕಾಶಕ್ಕೆ ಹಾರಲು ತಯಾರಾಗಿರುವ ಗಗನಯಾತ್ರಿಗಳ ಮೊದಲ ಬ್ಯಾಚ್‌ನ ತರಬೇತಿಯನ್ನು ಪ್ರದರ್ಶಿಸಿದ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ವಿಕಲಚೇತನ ವ್ಯಕ್ತಿಯ ಮೇಲೆ ದರ್ಪ ತೋರಿದ ರೈಲ್ವೆ ಗಾರ್ಡ್
ಇಂದು ಮುಂಜಾನೆ ಹಂಚಿಕೊಳ್ಳಲಾದ ಈ ವೀಡಿಯೋ 63 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ‘ಹೆಮ್ಮೆಯ ಸಂಗತಿ’ ಎಂಬ ಕಾಮೆಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ‘ ಜೈ ಹಿಂದ್’ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ