Video: ಈ ಪುಟ್ಟ ಪೋರನ ಪ್ರಕಾರ ಚಂದ್ರನಿಗಿಂತ ದೆಹಲಿಯೇ ಬಲು ದೂರವಂತೆ, ಅದು ಹೇಗೆಂದು ಅವನ ಮಾತಲ್ಲೇ ಕೇಳಿ
ಸೋಷಿಯಲ್ ಮೀಡಿಯಾದಲ್ಲಿ ಪ್ರತಿನಿತ್ಯ ಅನೇಕಾರು ವಿಡಿಯೋಗಳು ಹರಿದಾಡುತ್ತವೆ. ಅವುಗಳಲ್ಲಿ ಕೆಲವು ದೃಶ್ಯಗಳು ನಮ್ಮನ್ನು ಭಾವುಕರನ್ನಗಿಸಿದರೆ, ಇನ್ನೂ ಕೆಲವು ದೃಶ್ಯಗಳು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತವೆ. ಸದ್ಯ ಅಂತಹದೊಂದು ವಿಡಿಯೋ ಇದೀಗ ವೈರಲ್ ಆಗಿದ್ದು, ಚಂದ್ರ ಮತ್ತು ದೆಹಲಿ ಇವೆರಡರಲ್ಲಿ ಯಾವುದು ತುಂಬಾನೇ ದೂರ ಎಂದು ಮೇಷ್ಟ್ರು ಕೇಳಿದ ಪ್ರಶ್ನೆಗೆ ಪುಟ್ಟ ಪೋರನೊಬ್ಬ ತಮಾಷೆಯ ಉತ್ತರವನ್ನು ನೀಡಿದ್ದಾನೆ. ಈ ಬಾಲಕ ನೀಡಿದ ತರ್ಕ ಬದ್ಧ ಉತ್ತರಕ್ಕೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.
ಪುಟ್ಟ ಮಕ್ಕಳ ತರ್ಲೆ ಮಾತುಗಳನ್ನು ಕೇಳೋಕೆ ಬಲು ಚೆಂದ. ಪುಟಾಣಿಗಳ ತೊದಲು ಮಾತುಗಳು, ತಮಾಷೆಯ ಉತ್ತರಗಳು ಇವೆಲ್ಲಾ ನಮ್ಮನ್ನು ಹೊಟ್ಟೆ ಹುನ್ನಾಗಿಸುವಂತೆ ನಗಿಸುತ್ತವೆ. ಇದೀಗ ಅಂತಹದ್ದೇ ತಮಾಷೆಯ ವೀಡಿಯೊವೊಂದು ವೈರಲ್ ಆಗಿದ್ದು, ಶಾಲೆಯಲ್ಲಿ ಮೇಷ್ಟ್ರು ನಮಗೆ ದೆಹಲಿ ದೂರವೇ ಅಥವಾ ಚಂದ್ರ ದೂರವೇ ಎಂದು ಕೇಳಿದ ಪ್ರಶ್ನೆಗೆ ಬಾಲಕನೊಬ್ಬ ಚಂದ್ರನಿಗಿಂತ ದೆಹಲಿಯೇ ದೂರವೆಂದು ತಮಾಷೆಯ ಉತ್ತರವನ್ನು ನೀಡಿದ್ದಾನೆ. ಈ ಪುಟ್ಟ ಪೋರನ ಸ್ಮಾರ್ಟ್ ಉತ್ತರಕ್ಕೆ ನೆಟ್ಟಿಗರಂತೂ ಫುಲ್ ಫಿದಾ ಆಗಿದ್ದಾರೆ.
ಈ ಕುರಿತ ಪೋಸ್ಟ್ ಒಂದನ್ನು ದೀಪಕ್ (Putkuuu) ಎಂಬವರು ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ಶಾಲೆಯ ಮೇಷ್ಟ್ರು ಪುಟ್ಟ ಹುಡುಗನ ಬಳಿ ಮಗು ದೆಹಲಿ ಮತ್ತು ಚಂದ್ರ ಇವೆರಡರಲ್ಲಿ ಯಾವುದು ನಮಗೆ ತುಂಬಾ ದೂರ ಇದೆ ಎಂದು ಪ್ರಶ್ನೆ ಕೇಳುವ ದೃಶ್ಯವನ್ನು ಕಾಣಬಹುದು. ಈ ಪ್ರಶ್ನೆಗೆ ಥಟ್ಟನೆ ಉತ್ತರಿಸಿದ ಬಾಲಕ ಚಂದ್ರನಿಗಿಂತ ದೆಹಲಿಯೇ ದೂರ ಎಂದು ಹೇಳುತ್ತಾನೆ. ಅದು ಹೇಗೆ ಸಾಧ್ಯ ಎಂದು ಮೇಷ್ಟ್ರು ಮರು ಪ್ರಶ್ನಿಸಿದಾಗ ಚಂದ್ರನನ್ನು ಇಲ್ಲೇ ನಿಂತು ನಾವು ನೋಡಬಹುದು, ಆದ್ರೆ ದೆಹಲಿಯನ್ನು ನೋಡಲು ಸಾಧ್ಯವಿಲ್ಲ ಅಲ್ವಾ ಎಂಬ ಉತ್ತರವನ್ನು ನೀಡುತ್ತಾನೆ.
ಇದನ್ನೂ ಓದಿ: ಸ್ವಾತಂತ್ರೋತ್ಸವದ ಈ ಸುದಿನದಂದು ಗಗನಯಾನ ಕಾರ್ಯಕ್ರಮವನ್ನು ಪ್ರದರ್ಶಿಸಿದ ಇಸ್ರೋ
ವೈರಲ್ ವಿಡಿಯೋ ಇಲ್ಲಿದೆ ನೋಡಿ:
क्या Logic दिया भाई ने ❤️😅 pic.twitter.com/jou8vg7u5a
— Deepak (@Putkuuu) August 14, 2024
ಆಗಸ್ಟ್ 14 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ 18 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ‘ಏನ್ ಲಾಜಿಕ್ ಗುರು ನಿಂದೂ’ ಎಂಬ ತಮಾಷೆಯ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ‘ತುಂಬಾ ಬುದ್ದಿವಂತ, ಸರಿಯಾದ ಉತ್ತರವನ್ನೇ ನೀಡಿದ್ದಾನೆ’ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ