ಜ್ಞಾನವಾಪಿ ಮಸೀದಿಯೂ ಅಲ್ಲ ಹಿಂದೂ ದೇವಾಲಯವೂ ಅಲ್ಲ, ಅದು ಬೌದ್ಧ ಮಠ: ಸುಪ್ರೀಂಕೋರ್ಟ್‌ನಲ್ಲಿ ಪಿಐಎಲ್

ಮೊಘಲ್ ದೊರೆ ಔರಂಗಜೇಬ್ ದೇವಾಲಯವನ್ನು ಕೆಡವಿದ ನಂತರ ಜ್ಞಾನವಾಪಿಯಲ್ಲಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಹಿಂದೂ ಕಡೆಯವರು ವಾದಿಸುತ್ತಿರುವಾಗಲೇ ಭಂತೆ ಅವರ ವಾದ ಪ್ರಸ್ತುತ ಪ್ರಕರಣದಲ್ಲಿ ವಿಭಿನ್ನ ತಿರುವನ್ನು ಪಡೆದುಕೊಂಡಿದೆ.

ಜ್ಞಾನವಾಪಿ ಮಸೀದಿಯೂ ಅಲ್ಲ ಹಿಂದೂ ದೇವಾಲಯವೂ ಅಲ್ಲ, ಅದು ಬೌದ್ಧ ಮಠ: ಸುಪ್ರೀಂಕೋರ್ಟ್‌ನಲ್ಲಿ ಪಿಐಎಲ್
ಸುಮಿತ್ ರತನ್ ಭಂತೆImage Credit source: Facebook
Follow us
|

Updated on: Aug 03, 2023 | 6:50 PM

ದೆಹಲಿ ಆಗಸ್ಟ್ 03:ಜ್ಞಾನವಾಪಿ ಮಸೀದಿಯೂ (Gyanvapi masjid) ಅಲ್ಲ, ಹಿಂದೂ ದೇಗುಲವೂ ಅಲ್ಲ. ಅದು ಬೌದ್ಧ ಮಠ (Buddhist mutt)’ ಎಂದು ಬೌದ್ಧ ಧರ್ಮಗುರುವೊಬ್ಬರು ಗುರುವಾರ ಹೇಳಿಕೆ ನೀಡಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ. ಬೌದ್ಧ ಧಾರ್ಮಿಕ ಮುಖಂಡ ಸುಮಿತ್ ರತನ್ ಭಂತೆ ಅವರು ಈ ಬಗ್ಗೆ ಸುಪ್ರೀಂಕೋರ್ಟ್​​​ನಲ್ಲಿ (Supreme Court) ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (PIL) ಸಲ್ಲಿಸಿದ್ದಾರೆ. ಮೊಘಲ್ ದೊರೆ ಔರಂಗಜೇಬ್ ದೇವಾಲಯವನ್ನು ಕೆಡವಿದ ನಂತರ ಜ್ಞಾನವಾಪಿಯಲ್ಲಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಹಿಂದೂ ಕಡೆಯವರು ವಾದಿಸುತ್ತಿರುವಾಗಲೇ ಭಂತೆ ಅವರ ವಾದ ಪ್ರಸ್ತುತ ಪ್ರಕರಣದಲ್ಲಿ ವಿಭಿನ್ನ ತಿರುವನ್ನು ಪಡೆದುಕೊಂಡಿದೆ.

ಬೌದ್ಧರ ಆ ವಾದವ ಈಗ ಇಡೀ ಸಮಸ್ಯೆಗೆ ಹೊಸ ಆಯಾಮವನ್ನು ನೀಡಿದೆ. ಬೌದ್ಧ ಧರ್ಮಗುರುಗಳು ಬೌದ್ಧ ಮಠದ ಪುರಾವೆಗಳನ್ನು ನೋಡಲು ಪ್ರತ್ಯೇಕ ಸಮೀಕ್ಷೆಗೆ ಒತ್ತಾಯಿಸಿದ್ದಾರೆ. ಬೌದ್ಧ ಮಠಗಳನ್ನು ಕೆಡವಿ ನಿರ್ಮಿಸಲಾದ ಅನೇಕ ದೇವಾಲಯಗಳು ದೇಶದಾದ್ಯಂತ ಇವೆ ಎಂದು ಭಂತೆ ಹೇಳಿದ್ದಾರೆ.

ಭಂತೆ ಅವರು ಸಮೀಕ್ಷೆಗೆ ಒತ್ತಾಯಿಸಿ ಪಿಐಎಲ್ ಸಲ್ಲಿಸಿರುವ ಭಂತೆ, ಜ್ಞಾನವಾಪಿಯಲ್ಲಿ ಕಂಡುಬರುವ ತ್ರಿಶೂಲ ಮತ್ತು ಸ್ವಸ್ತಿಕ್ ಚಿಹ್ನೆಗಳು ಬೌದ್ಧ ಧರ್ಮಕ್ಕೆ ಸೇರಿವೆ ಎಂದಿದ್ದಾರೆ. ಸುಮಿತ್ ರತನ್ ಭಂತೆ ಪ್ರಕಾರ, ಜ್ಞಾನವಾಪಿ ಅಥವಾ ಕೇದಾರನಾಥದಲ್ಲಿ ಜ್ಯೋತಿರ್ಲಿಂಗಗಳೆಂದು ವರ್ಣಿಸಲಾಗುತ್ತಿರುವ ಚಿಹ್ನೆಗಳು ವಾಸ್ತವವಾಗಿ ಬುದ್ಧ ಸ್ತೂಪಗಳಾಗಿವೆ. ಇದು ಜ್ಞಾನವಾಪಿ ಹಿಂದೂ ದೇವಾಲಯ ಅಥವಾ ಮಸೀದಿ ಅಲ್ಲ ಆದರೆ ಬೌದ್ಧ ಮಠ ಎಂದು ತೋರಿಸುತ್ತದೆ.

ಭಂತೆ ಅವರು ಬುದ್ಧನ ಮಠಗಳನ್ನು ಕಂಡುಹಿಡಿಯುವ ಕಾರ್ಯಾಚರಣೆಯಲ್ಲಿದ್ದಾರೆ . ದೇವಾಲಯಕ್ಕೆ ದಾರಿ ಮಾಡಿಕೊಡಲು ವಿವಿಧ ಜೈನ-ಬುದ್ಧರ ಮಠಗಳನ್ನು ಕೆಡವಲಾಯಿತು ಎಂದು ಇವರು ವಾದಿಸುತ್ತಿದ್ದಾರೆ.

ದೇಶದಲ್ಲಿ ಎಲ್ಲೆಲ್ಲಿ ರೂಪುರೇಷೆಗಳು ಬದಲಾಯಿತೋ ಅಲ್ಲೆಲ್ಲಾ ದೇವಾಲಯಗಳು ಮತ್ತು ಮಸೀದಿಗಳನ್ನು ಅವುಗಳ ಮೂಲ ಸ್ವರೂಪಕ್ಕೆ ಮರುಸ್ಥಾಪಿಸಬೇಕ. ಬೌದ್ಧ ಜನಸಂಖ್ಯೆಯು ಅದೇ ವಿಷಯವನ್ನು ಬಯಸುತ್ತದೆ ಎಂದ ಅವರು ಬದರಿನಾಥ್ ಮತ್ತು ಕೇದಾರನಾಥದ ಬಗ್ಗೆಯೂ ಪಿಐಎಲ್ ಸಲ್ಲಿಸುವುದಾಗಿ ಹೇಳಿದ್ದಾರೆ. ಇದರಿಂದ ಅವುಗಳನ್ನು ಅವುಗಳ ಮೂಲ ಸ್ವರೂಪಕ್ಕೆ ಹಿಂತಿರುಗಿಸಬಹುದು. ಅವರ ಪ್ರಕಾರ ಬುದ್ಧ ಧರ್ಮವು ಎಲ್ಲಕ್ಕಿಂತ ಪ್ರಾಚೀನವಾದುದು.

ಇದನ್ನೂ ಓದಿ: ನಿಮಗೆ ಕೋಪ ಬಂದಿದೆ ಎಂದ ಖರ್ಗೆ; ನನಗೆ ಮದುವೆಯಾಗಿ 45 ವರ್ಷಗಳಾಯ್ತು, ನಾನು ಸಿಟ್ಟಾಗಲ್ಲ ಎಂದು ಉತ್ತರಿಸಿದ ಧನ್ಖರ್

ಎಎಸ್‌ಐ ಸಮೀಕ್ಷೆಯನ್ನು ಸರಿಯಾದ ರೀತಿಯಲ್ಲಿ ನಡೆಸಿದರೆ, ಜ್ಞಾನವಾಪಿ ಬುದ್ಧನ ಮಠ ಎಂದು ಕಾಣಿಸುತ್ತದೆ. ಅದು ನಿಜವಾಗಿದ್ದರೆ, ಜ್ಞಾನವಾಪಿಯನ್ನು ನಮಗೆ ಒಪ್ಪಿಸಬೇಕು. ಇಸ್ಲಾಂ 1500 ವರ್ಷಗಳ ಹಿಂದೆ ಮತ್ತು ಹಿಂದೂ ಧರ್ಮ 1200 ವರ್ಷಗಳ ಹಿಂದೆ ಬಂದಿತು. ಆದರೆ ಬೌದ್ಧಧರ್ಮವು 2500 ವರ್ಷಗಳಷ್ಟು ಹಳೆಯದು ಅಂತಾರೆ ಭಂತೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ