ನಿಮಗೆ ಕೋಪ ಬಂದಿದೆ ಎಂದ ಖರ್ಗೆ; ನನಗೆ ಮದುವೆಯಾಗಿ 45 ವರ್ಷಗಳಾಯ್ತು, ನಾನು ಸಿಟ್ಟಾಗಲ್ಲ ಎಂದು ಉತ್ತರಿಸಿದ ಧನ್ಖರ್
ಮಲ್ಲಿಕಾರ್ಜುನ ಖರ್ಗೆ ಅವರ ಟೀಕೆಯಲ್ಲೂ ಮಾರ್ಪಾಡು ಮಾಡುವಂತೆ ಸಭಾಪತಿ ಒತ್ತಾಯಿಸಿದಾಗ, ಕಾಂಗ್ರೆಸ್ ಅಧ್ಯಕ್ಷರು ನೀವು ಒಳಗೆ ಕೋಪಗೊಂಡಿದ್ದೀರಿ, ನೀವದನ್ನು ತೋರಿಸುತ್ತಿಲ್ಲ ಎಂದಿದ್ದಾರೆ. ಇದನ್ನು ಕೇಳಿ ಸದನದಲ್ಲಿ ಅಧ್ಯಕ್ಷರೂ ಸೇರಿ ಎಲ್ಲರೂ ನಗಲು ಶುರು ಮಾಡಿದರು.
ದೆಹಲಿ ಆಗಸ್ಟ್ 03: ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಮತ್ತು ರಾಜ್ಯಸಭೆಯ ಸಭಾಪತಿ ಜಗದೀಪ್ ಧನ್ಖರ್ (Jagdeep Dhankhar) ನಡುವಿನ ಮಾತಿನ ಚಕಮಕಿ ನಡುವೆಯೂ ಸದನದಲ್ಲಿ ನಗೆಯ ಅಲೆ. ರಾಜ್ಯಸಭೆಯ ಅಧ್ಯಕ್ಷರು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಸಮರ್ಥಿಸಿಕೊಂಡಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.ನಿಯಮ 267ರ ಅಡಿಯಲ್ಲಿ ಮಣಿಪುರದಲ್ಲಿ ನಡೆದ ಹಿಂಸಾಚಾರದ ಚರ್ಚೆಯ ಪರವಾಗಿ ಕಾಂಗ್ರೆಸ್ ಅಧ್ಯಕ್ಷರು ವಾದಿಸುತ್ತಿದ್ದರು. ಆಗ ಅಧ್ಯಕ್ಷರು, ಅಲ್ಪಾವಧಿಯ ಚರ್ಚೆಗೆ ಅವಕಾಶ ಕಲ್ಪಿಸುವ ನಿಯಮ 176 ರ ಅಡಿಯಲ್ಲಿ ಚರ್ಚಿಸಲು ಸರ್ಕಾರ ಸಿದ್ಧವಾಗಿದೆ ಎಂದು ಹೇಳಿದ್ದಾರೆ.ಮಣಿಪುರ ವಿಚಾರ ಚರ್ಚೆ ನಡೆಸುವ ನಿಯಮದ ಬಗ್ಗೆ ಭಿನ್ನಾಭಿಪ್ರಾಯವು ಸುಮಾರು ಎರಡು ವಾರಗಳ ಕಾಲ ಮೇಲ್ಮನೆಯಲ್ಲಿ ಕಲಾಪವನ್ನು ನಿರ್ಬಂಧಿಸಿದೆ.
ನಿಯಮ 267 ರ ಅಡಿಯಲ್ಲಿ ನೋಟಿಸ್ ಎಲ್ಲಾ ಇತರ ವ್ಯವಹಾರಗಳನ್ನು ಬದಿಗಿರಿಸಿ ಮತ್ತು ಸಮಸ್ಯೆಯನ್ನು ಆದ್ಯತೆಯ ಮೇಲೆ ತೆಗೆದುಕೊಳ್ಳಬೇಕೆಂದು ಒತ್ತಾಯಿಸುತ್ತದೆ. ಇದು ಒಂದು ಪೂರ್ವನಿದರ್ಶನವಾಗಿದೆ. ಇದು ಪ್ರತಿಷ್ಠೆಯ ವಿಷಯವಾಗಿದೆ ಎಂದು ನನಗೆ ಅರ್ಥವಾಗುತ್ತಿಲ್ಲ. ಒಂದು ಕಾರಣ ಇರಬೇಕು ಎಂದು ನೀವು ನಮಗೆ ಹೇಳಿದ್ದೀರಿ. ನಿಯಮ 267ರ ಅಡಿಯಲ್ಲಿ ಚರ್ಚೆ ನಡೆಸಲು ಕಾರಣವನ್ನು ತಿಳಿಸಿದ್ದೇವೆ. ನಿನ್ನೆ ನಾನು ನಿಮ್ಮಲ್ಲಿ ವಿನಂತಿಸಿದೆ, ಆದರೆ ನೀವು ಬಹುಶಃ ಕೋಪಗೊಂಡಿದ್ದೀರಿ ಖರ್ಗೆ ಹೇಳಿದರು.
ಇದಕ್ಕೆ ಸಭಾಪತಿಯವರು ನಗುತ್ತಾ, “ನಾನು ಮದುವೆ ಆಗಿ 45 ವರ್ಷಗಳೇ ಕಳೆಯಿತು. ನಾನು ಎಂದಿಗೂ ಕೋಪಗೊಂಡಿಲ್ಲ ಎಂದಾಗ ಸದನದಲ್ಲಿ ನಗೆಗಡಲು. ನಂತರ ಅವರು ಕಾಂಗ್ರೆಸ್ ನಾಯಕ ಪಿ ಚಿದಂಬರಂ ಅವರನ್ನು ಉಲ್ಲೇಖಿಸಿ, ಅತ್ಯಂತ ಪ್ರತಿಷ್ಠಿತ ಹಿರಿಯ ವಕೀಲರಾದ ಚಿದಂಬರಂ ಅವರಿಗೆ ತಿಳಿದಿದೆ. ನಮ್ಮ ಕೋಪವನ್ನು ಕನಿಷ್ಠ ಅಧಿಕಾರಿ ಮೇಲಾದರೂ ತೋರಿಸಲು ನಮಗೆ ಹಕ್ಕಿಲ್ಲ. ನೀವು (ಖರ್ಗೆ) ಒಬ್ಬ ಅಧಿಕಾರಿ ಸರ್ ಎಂದಿದ್ದಾರೆ.
ಖರ್ಗೆ ಅವರ ಟೀಕೆಯಲ್ಲೂ ಮಾರ್ಪಾಡು ಮಾಡುವಂತೆ ಸಭಾಪತಿ ಒತ್ತಾಯಿಸಿದಾಗ, ಕಾಂಗ್ರೆಸ್ ಅಧ್ಯಕ್ಷರು ನೀವು ಒಳಗೆ ಕೋಪಗೊಂಡಿದ್ದೀರಿ, ನೀವದನ್ನು ತೋರಿಸುತ್ತಿಲ್ಲ ಎಂದಿದ್ದಾರೆ. ಇದನ್ನು ಕೇಳಿ ಸದನದಲ್ಲಿ ಅಧ್ಯಕ್ಷರೂ ಸೇರಿ ಎಲ್ಲರೂ ನಗಲು ಶುರು ಮಾಡಿದರು.
ನಿಯಮ 267ರ ಅಡಿಯಲ್ಲಿ ಚರ್ಚೆ ನಡೆಸುವುದು ಏಕೆ ಎಂಬ ಬಗ್ಗೆ ಪ್ರತಿಪಕ್ಷಗಳ ವಾದಗಳ ಹೊರತಾಗಿಯೂ, ಈ ನಿಯಮದಡಿಯಲ್ಲಿ ಚರ್ಚೆ ನಡೆಸಲು ಯಾವುದೇ ಕಾರಣವಿಲ್ಲ ಎಂದು ಅಧ್ಯಕ್ಷರು ಹೇಳಿದ್ದಾರೆ ಎಂದು ಖರ್ಗೆ ಪುನರುಚ್ಚರಿಸಿದರು.
ಇದು ಈಗ ಪ್ರತಿಷ್ಠೆಯ ವಿಷಯವಾಗಿದೆ. ನಾವು ಇದನ್ನು ಪ್ರತಿನಿತ್ಯ ಹೇಳುತ್ತಿದ್ದೇವೆ. ಅವರು ಇದನ್ನು ವಿರೋಧಿಸುತ್ತಿದ್ದಾರೆ. ನನ್ನ ಸಲಹೆ ಏನೆಂದರೆ ಮಧ್ಯಾಹ್ನ 1 ಗಂಟೆಗೆ ನಿಮ್ಮ ಚೇಂಬರ್‌ನಲ್ಲಿ ಸಭೆ ಕರೆಯಿರಿ. ಅಲ್ಲಿಯವರೆಗೆ ಸದನವನ್ನು ಮುಂದೂಡಬಹುದು. ನಾವು ಸಮಸ್ಯೆ ಪರಿಹರಿಸಿ ನಂತರ ಮಧ್ಯಾಹ್ನ 2 ಗಂಟೆಗೆ ಹಿಂತಿರುಗುತ್ತೇವೆ ಎಂದು ಖರ್ಗೆ ಹೇಳಿದ್ದಾರೆ.
ಆಗ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಖರ್ಗೆ, ಧನ್ಖರ್ ಮೇಲೆ ವಾಗ್ದಾಳಿ ನಡೆಸಿದ್ದಾರೆ. ನೀವು ಒಂದು ಸಣ್ಣ ಸಲಹೆಯನ್ನು ಸಹ ಸ್ವೀಕರಿಸುವುದಿಲ್ಲ, ನಾವು ಪ್ರಧಾನಿಯವರು ಮಾತನಾಡಬೇಕು ಎಂದು ಒತ್ತಾಯಿಸಿದ್ದೇವೆ, ನೀವು ಅದನ್ನು ಸ್ವೀಕರಿಸಲಿಲ್ಲ. ನೀವು ಪ್ರಧಾನಿಯನ್ನು ಸಮರ್ಥಿಸುತ್ತಿದ್ದೀರಿ” ಎಂದು ಅವರು ಹೇಳಿದಾಗ ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಮುಖ್ಯಸ್ಥರ ಟೀಕೆಗಳಿಗೆ ಪ್ರತಿಕ್ರಿಯಿಸಿದ ಅಧ್ಯಕ್ಷರು, “ನಾವು 1.3 ಶತಕೋಟಿಗೂ ಹೆಚ್ಚು ಜನಸಂಖ್ಯೆಯ ರಾಷ್ಟ್ರವಾಗಿರುವ ನಮ್ಮ ಪರಿಸ್ಥಿತಿ ಬಗ್ಗೆ ಗಮನ ಹರಿಸಬೇಕು.ನಾವು ಪ್ರಜಾಪ್ರಭುತ್ವ, ಕ್ರಿಯಾತ್ಮಕ, ವೈವಿಧ್ಯತೆ ಮತ್ತು ಜಾಗತಿಕವಾಗಿ ಗುರುತಿಸಲ್ಪಟ್ಟಿದ್ದೇವೆ. ಭಾರತವು ಏಕೈಕ ಪ್ರಜಾಪ್ರಭುತ್ವವಾಗಿದೆ. ಗ್ರಾಮ ಮಟ್ಟದಲ್ಲಿ ಸಾಂವಿಧಾನಿಕ ಪ್ರಜಾಪ್ರಭುತ್ವವನ್ನು ಹೊಂದಿರುವ ದೇಶ ನಮ್ಮದು. ನಾನು ನಮ್ಮ ಪ್ರಧಾನಿಯನ್ನು ರಕ್ಷಿಸುವ ಅಗತ್ಯವಿಲ್ಲ, ಅವರು ಜಾಗತಿಕ ವೇದಿಕೆಗಳಲ್ಲಿ ಗುರುತಿಸಲ್ಪಟ್ಟಿದ್ದಾರೆ, ಪ್ರತಿಯೊಬ್ಬ ಭಾರತೀಯರು ಹೆಮ್ಮೆಪಡಬೇಕು ಎಂದಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:56 pm, Thu, 3 August 23