H3N2 Virus: ಮಹಾರಾಷ್ಟ್ರದಲ್ಲಿ H3N2 ವೈರಸ್​ನಿಂದ ವೃದ್ಧ ಸಾವು

ನಯನಾ ರಾಜೀವ್

|

Updated on: Mar 17, 2023 | 8:08 AM

ಮಹಾರಾಷ್ಟ್ರದ ಪುಣೆಯಲ್ಲಿ ಹೆಚ್​​3ಎನ್​2 ವೈರಸ್​ನಿಂದ 73 ವರ್ಷದ ವೃದ್ಧರೊಬ್ಬರು ಮೃತಪಟ್ಟಿದ್ದಾರೆ. ಪುಣೆಯ ಪಿಂಪ್ರಿ-ಚಿಂಚ್​ವಾಡದಲ್ಲಿ ಘಟನೆ ನಡೆದಿದ್ದು, ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ವೃದ್ಧರೊಬ್ಬರು ಸಾವನ್ನಪ್ಪಿದ್ದಾರೆ.

H3N2 Virus: ಮಹಾರಾಷ್ಟ್ರದಲ್ಲಿ H3N2 ವೈರಸ್​ನಿಂದ ವೃದ್ಧ ಸಾವು
ಹೆಚ್​3ಎನ್​2 ವೈರಸ್
Image Credit source: NDTV

ಮಹಾರಾಷ್ಟ್ರದ ಪುಣೆಯಲ್ಲಿ ಹೆಚ್​​3ಎನ್​2 ವೈರಸ್​ನಿಂದ 73 ವರ್ಷದ ವೃದ್ಧರೊಬ್ಬರು ಮೃತಪಟ್ಟಿದ್ದಾರೆ. ಪುಣೆಯ ಪಿಂಪ್ರಿ-ಚಿಂಚ್​ವಾಡದಲ್ಲಿ ಘಟನೆ ನಡೆದಿದ್ದು, ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ವೃದ್ಧರೊಬ್ಬರು ಸಾವನ್ನಪ್ಪಿದ್ದಾರೆ. ವೃದ್ಧರು ಈ ಮೊದಲೇ ಕ್ರೋನಿಕ್ ಅಬ್​ಸ್ಟ್ರಕ್ಟೀವ್ ಪಲ್ಮನರಿ ಡಿಸೀಸ್ ಹಾಗೂ ಆರ್ಟ್ರಿಯಲ್ ಫಿಬ್ರಿಲೇಷನ್​ ಸಮಸ್ಯೆಯಿಂದ ಬಳಲುತ್ತಿದ್ದರು. ಆ ಸಮಯದಲ್ಲೇ ಹೆಚ್​3ಎನ್​2 ವೈರಸ್ ತಗುಲಿತ್ತು. ಮಹಾರಾಷ್ಟ್ರದಲ್ಲಿ ಹೆಚ್3ಎನ್2 ಇನ್ಫ್ಲುಯೆಂಜಾ ವೈರಸ್ ಪ್ರಕರಣಗಳ ಹೆಚ್ಚಳದ ಮಧ್ಯೆ, ಮುಂಬೈನಲ್ಲಿ 32 ರೋಗಿಗಳನ್ನು ದಾಖಲಿಸಲಾಗಿದೆ ಎಂದು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ತಿಳಿಸಿದೆ. ಅವರಲ್ಲಿ 4 ಜನರಿಗೆ ಹೆಚ್3ಎನ್2 ಮತ್ತು ಉಳಿದ 28 ಹೆಚ್1ಎನ್1 ಇದೆ ಎಂದು ಹೇಳಲಾಗಿದೆ.

ರಾಜ್ಯದಲ್ಲಿ ಇದುವರೆಗೆ 352 ರೋಗಿಗಳಿಗೆ ಹೆಚ್3ಎನ್2 ವೈರಸ್ ಇರುವುದು ಪತ್ತೆಯಾಗಿದೆ. ಇದುವರೆಗೆ ಒಟ್ಟು 352 ರೋಗಿಗಳು H3N2 ವೈರಸ್‌ನಿಂದ ಪೀಡಿತರಾಗಿದ್ದಾರೆ. ಅವರು ಪ್ರಸ್ತುತ ಚಿಕಿತ್ಸೆಯಲ್ಲಿದ್ದಾರೆ ಮತ್ತು ಎಲ್ಲಾ ಆಸ್ಪತ್ರೆಗಳಲ್ಲಿ ಅಲರ್ಟ್ ಮಾಡಲಾಗಿದೆ. H3N2 ಮಾರಣಾಂತಿಕವಾಗಿಲ್ಲ. ಸರಿಯಾದ ವೈದ್ಯಕೀಯ ಚಿಕಿತ್ಸೆಯಿಂದ ಇದನ್ನು ಗುಣಪಡಿಸಬಹುದು. ಭಯಪಡುವ ಅಗತ್ಯವಿಲ್ಲ ಎಂದು ಸಚಿವರು ಹೇಳಿದ್ದಾರೆ.

ಮತ್ತಷ್ಟು ಓದಿ: ರಾಜ್ಯದಲ್ಲಿ 115 ಹೆಚ್​3ಎನ್​2 ಪ್ರಕರಣ ಪತ್ತೆ, ಬೆಂಗಳೂರು ಒಂದರಲ್ಲೇ 30 ಸೋಂಕು ದೃಢ

ಏತನ್ಮಧ್ಯೆ, ಶಂಕಿತ H3N2 ಇನ್ಫ್ಲುಯೆನ್ಸ ವೈರಸ್ ಸೋಂಕಿನಿಂದ ಎರಡು ಸಾವುಗಳು ನಾಗ್ಪುರದಿಂದ ವರದಿಯಾಗಿದೆ ಮತ್ತು ಇನ್ನೊಂದು ಅಹಮದ್​ನಗರ ಜಿಲ್ಲೆಯಲ್ಲಿ ವರದಿಯಾಗಿದೆ.

ಹೆಚ್ಚಿನ ಸಂದರ್ಭಗಳಲ್ಲಿ, ಕೆಮ್ಮು ಮತ್ತು ನೆಗಡಿ, ದೇಹದ ನೋವು ಮತ್ತು ಜ್ವರ ಇತ್ಯಾದಿ ರೋಗಲಕ್ಷಣಗಳು ಇರಲಿವೆ. ಶಿಶುಗಳು, ಚಿಕ್ಕ ಮಕ್ಕಳು, ಗರ್ಭಿಣಿಯರು, 65 ವರ್ಷಕ್ಕಿಂತ ಮೇಲ್ಪಟ್ಟವರು ಅನೇಕ ಆರೋಗ್ಯ ಸಮಸ್ಯೆಗಳಿರುವವರು ಎಚ್ಚರಿಕೆಯಿಂದಿರಬೇಕು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada