Haryana election: ಕಾಂಗ್ರೆಸ್ ಅಭ್ಯರ್ಥಿಗಳಾಗಿ ವಿನೇಶ್ ಫೋಗಟ್ ಜುಲಾನಾ, ಬಜರಂಗ್ ಪುನಿಯಾ ಬದ್ಲಿಯಿಂದ ಸ್ಪರ್ಧೆ ಸಾಧ್ಯತೆ

ಬುಧವಾರ ಅಥವಾ ಗುರುವಾರದಂದು ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿಯು ಅಭ್ಯರ್ಥಿಗಳ ಹೆಸರು ಪ್ರಕಟಿಸಲಿದೆ. ವಿನೇಶ್ ಫೋಗಟ್ ಜುಲಾನಾ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದರು, ಆದರೆ ಕಾಂಗ್ರೆಸ್ ಆರಂಭದಲ್ಲಿ ಅವರನ್ನು ಗುರುಗ್ರಾಮ್ ಬಳಿಯ ಮತ್ತೊಂದು ಸ್ಥಾನದಿಂದ ಸ್ಪರ್ಧಿಸಲು ಬಯಸಿತ್ತು ಎಂದು ಮೂಲಗಳು ತಿಳಿಸಿವೆ.

Haryana election: ಕಾಂಗ್ರೆಸ್ ಅಭ್ಯರ್ಥಿಗಳಾಗಿ ವಿನೇಶ್ ಫೋಗಟ್ ಜುಲಾನಾ, ಬಜರಂಗ್ ಪುನಿಯಾ ಬದ್ಲಿಯಿಂದ ಸ್ಪರ್ಧೆ ಸಾಧ್ಯತೆ
ವಿನೇಶ್ ಫೋಗಟ್- ಬಜರಂಗ್ ಪುನಿಯಾ
Follow us
|

Updated on:Sep 04, 2024 | 2:18 PM

ದೆಹಲಿ ಸೆಪ್ಟೆಂಬರ್ 04: ಕುಸ್ತಿಪಟುಗಳಾದ ವಿನೇಶ್ ಫೋಗಟ್ (Vinesh Phogat) ಮತ್ತು ಬಜರಂಗ್ ಪುನಿಯಾ (Bajrang Punia) ಅವರು ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ (Haryana Assembly election) ಕ್ರಮವಾಗಿ ಜುಲಾನಾ ಮತ್ತು ಬದ್ಲಿ ಕ್ಷೇತ್ರಗಳಿಂದ ಕಾಂಗ್ರೆಸ್ ಅಭ್ಯರ್ಥಿಗಳಾಗಿ ಸ್ಪರ್ಧಿಸುವ ಸಾಧ್ಯತೆಯಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಬುಧವಾರ ಅಥವಾ ಗುರುವಾರದಂದು ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿಯು ಅಭ್ಯರ್ಥಿಗಳ ಹೆಸರು ಪ್ರಕಟಿಸಲಿದೆ. ವಿನೇಶ್ ಫೋಗಟ್ ಜುಲಾನಾ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದರು, ಆದರೆ ಕಾಂಗ್ರೆಸ್ ಆರಂಭದಲ್ಲಿ ಅವರನ್ನು ಗುರುಗ್ರಾಮ್ ಬಳಿಯ ಮತ್ತೊಂದು ಸ್ಥಾನದಿಂದ ಸ್ಪರ್ಧಿಸಲು ಬಯಸಿತ್ತು ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್ ಸಿಇಸಿ ಇದುವರೆಗೆ 90 ಸ್ಥಾನಗಳ ಪೈಕಿ 66 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಅನುಮೋದಿಸಿದೆ. ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ ಅವರ ಹೆಸರು ಈ 66 ರ ಪಟ್ಟಿಯಲ್ಲಿಲ್ಲ.

ಬಜರಂಗ್ ಪುನಿಯಾ ಮತ್ತು ವಿನೇಶ್ ಫೋಗಟ್ ಅವರು ಬುಧವಾರ ನವದೆಹಲಿಯಲ್ಲಿ ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿಯಾದ ಬೆನ್ನಲ್ಲೇ, ಪಕ್ಷವು ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಸಬಹುದು ಎಂಬ ಊಹಾಪೋಹಗಳ ನಡುವೆಯೇ ಈ ಬೆಳವಣಿಗೆ ನಡೆದಿದೆ.

ಬಜರಂಗ್ ಪೂನಿಯಾ ಮತ್ತು ವಿನೇಶ್ ಫೋಗಟ್ ಅವರನ್ನು ಕಣಕ್ಕಿಳಿಸಲು ಸಾಧ್ಯವೇ ಎಂಬ ಬಗ್ಗೆ ಕಾಂಗ್ರೆಸ್ ಇನ್ನೂ ಏನೂ ಹೇಳಿಲ್ಲ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಹರ್ಯಾಣ ಉಸ್ತುವಾರಿ ದೀಪಕ್ ಬಬಾರಿಯಾ ಈ ಬಗ್ಗೆ ಗುರುವಾರ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಟ್ವೀಟ್

ಕಾಂಗ್ರೆಸ್ ತನ್ನ ಅಧಿಕೃತ ಎಕ್ಸ್ ಹ್ಯಾಂಡಲ್‌ನಲ್ಲಿ ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ ಅವರೊಂದಿಗೆ ರಾಹುಲ್ ಗಾಂಧಿಯವರ ಫೋಟೋವನ್ನು ಶೇರ್ ಮಾಡಿದೆ.

ಇದನ್ನೂ ಓದಿ: Vinesh Phogat: ಹರ್ಯಾಣ ವಿಧಾನಸಭಾ ಚುನಾವಣೆಗೆ ಮುನ್ನ ರಾಹುಲ್ ಗಾಂಧಿಯನ್ನು ಭೇಟಿ ಮಾಡಿದ ವಿನೇಶ್ ಫೋಗಟ್, ಬಜರಂಗ್ ಪುನಿಯಾ

ಬಜರಂಗ್ ಪುನಿಯಾ ಮತ್ತು ವಿನೇಶ್ ಫೋಗಟ್ ಅವರು 2023 ರಲ್ಲಿ  ಬಿಜೆಪಿಯ ಮಾಜಿ  ಸಂಸದ ಮತ್ತು ಆಗಿನ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಆರೋಪದ ಮೇಲೆ ಪ್ರತಿಭಟನೆಯ ಭಾಗವಾಗಿದ್ದರು.

ಹರ್ಯಾಣದ 90 ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 5 ರಂದು ಮತದಾನ ನಡೆಯಲಿದ್ದು, ಅಕ್ಟೋಬರ್ 8 ರಂದು ಮತ ಎಣಿಕೆ ನಡೆಯಲಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:01 pm, Wed, 4 September 24