ಸ್ನೇಹಿತನನ್ನೇ ಕೊಂದು, ಆತನ ಮನೆಯನ್ನೇ ಲೂಟಿ ಮಾಡಿದ ಇವನೆಂಥಾ ಗೆಳೆಯ

ಹರಿಯಾಣದ ಸೋನಿಪತ್‌ನಲ್ಲಿ ಆಘಾತಕಾರಿ ಘಟನೆ ನಡೆದಿದ್ದು, ವ್ಯಕ್ತಿಯೊಬ್ಬ ಸ್ನೇಹಿತನನ್ನೇ ಕೊಂದು ಆತನ ಮನೆಯನ್ನು ಲೂಟಿ ಮಾಡಿದ್ದಾನೆ. ಜನವರಿ 8ರಂದು ಈ ಕೃತ್ಯ ನಡೆದಿದ್ದು, ಲೂಟಿಗೆ ಪ್ರತಿರೋಧ ಒಡ್ಡಿದಾಗ ಸ್ನೇಹಿತ ಸಾಹಿಲ್‌ಗೆ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿತ್ತು. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು, ಪ್ರಮುಖ ಆರೋಪಿ ಶೇಖರ್ ಹಾಗೂ ಶಫೀಕ್‌ನನ್ನು ಎನ್‌ಕೌಂಟರ್ ಮೂಲಕ ಬಂಧಿಸಿದ್ದು, ಇತರರಿಗಾಗಿ ಹುಡುಕಾಟ ಮುಂದುವರಿದಿದೆ.

ಸ್ನೇಹಿತನನ್ನೇ ಕೊಂದು, ಆತನ ಮನೆಯನ್ನೇ ಲೂಟಿ ಮಾಡಿದ ಇವನೆಂಥಾ ಗೆಳೆಯ
ದರೋಡೆ
Image Credit source: IndiaToday

Updated on: Jan 14, 2026 | 9:03 AM

ಹರಿಯಾಣ, ಜನವರಿ 14: ವ್ಯಕ್ತಿಯೊಬ್ಬ ಸ್ನೇಹಿತನನ್ನೇ ಕೊಂದು ಆತನ ಮನೆಯನ್ನೇ ಲೂಟಿ ಮಾಡಿರುವ ಘಟನೆ ಹರಿಯಾಣದ ಸೋನಿಪತ್​ನಲ್ಲಿ ನಡೆದಿದೆ. ಶೇಖರ್ ಹಾಗೂ ಸಾಹಿಲ್ ಆತ್ಮೀಯ ಸ್ನೇಹಿತರಾಗಿದ್ದರು. ಜನವರಿ 8ರಂದು ರಾತ್ರಿ ಶೇಖರ್​ ಗ್ಯಾಂಗ್ ಸಾಹಿಲ್ ಮನೆಗೆ ನುಗ್ಗಿತ್ತು, ದರೋಡೆ ಮಾಡಲು ಮುಂದಾಗಿತ್ತು ಆಗ ಸಾಹಿಲ್ ತಡೆದಿದ್ದಕ್ಕೆ ಆತನನ್ನು ಚಾಕುವಿನಿಂದ ಇರಿದು ಕೊಲೆ(Murder) ಮಾಡಿ ಬಳಿಕ ಆಭರಣವನ್ನು ದೋಚಿದ್ದರು.

ಪೊಲೀಸರು ಎನ್​ಕೌಂಟರ್​ ನಡೆಸಿ ಗ್ಯಾಂಗ್​ನ ನಾಯಕ ಶೇಖರ್ ಹಾಗೂ ಶಫೀಕ್ ಎಂಬಾತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶೇಖರ್ ಮತ್ತು ಶಫೀಕ್ ನಿನ್ನೆ ತಡರಾತ್ರಿ ಮಲ್ಹಾ ಮಜ್ರಾ ಗ್ರಾಮಕ್ಕೆ ಮರಳಿದ್ದರು. ಎನ್‌ಕೌಂಟರ್ ಸಮಯದಲ್ಲಿ, ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದರು, ಆಗ ಪೊಲೀಸರು ಶೇಖರ್ ಮತ್ತು ಶಫೀಕ್ ಅವರ ಕಾಲಿಗೆ ಗುಂಡು ಹಾರಿಸಲಾಯಿತು. ಇಬ್ಬರೂ ಪ್ರಸ್ತುತ ಸೋನಿಪತ್ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಾಹಿತಿಯ ಪ್ರಕಾರ, ಶೇಖರ್ ಸಾಹಿಲ್ ಮನೆಯಲ್ಲಿ ದರೋಡೆಗೆ ಯೋಜನೆ ರೂಪಿಸಿದ್ದ. ಸಾಹಿಲ್ aದನ್ನು ವಿರೋಧಿಸಿದಾಗ, ಆತನನ್ನು ಇರಿದು ಕೊಂದಿದ್ದಾರೆ. ಆರೋಪಿ ಶೇಖರ್ ಅಕ್ಕಸಾಲಿಗನಾಗಿ ಕೆಲಸ ಮಾಡುತ್ತಿದ್ದು, ಸಾಹಿಲ್ ಮದುವೆಗೆ ಆಭರಣಗಳನ್ನು ಆತನೇ ಮಾಡಿಕೊಟ್ಟಿದ್ದ, ಮಾಹಿತಿಯ ಪ್ರಕಾರ, ಆರೋಪಿ ಶೇಖರ್ ಮತ್ತು ಮೃತ ಸಾಹಿಲ್ ಒಂದು ಕಾಲದಲ್ಲಿ ಬಹಳ ಆಪ್ತರಾಗಿದ್ದರು.

ಮತ್ತಷ್ಟು ಓದಿ: ಸರ್ಕಾರಿ ಆಸ್ಪತ್ರೆಗೆ ಹೆಂಡತಿಯನ್ನು ನೋಡಲು ಬಂದಿದ್ದ ರೌಡಿಯ ಕೊಲೆ

ಈ ಪ್ರಕರಣದಲ್ಲಿ ಸೋನಿಪತ್ ಅಪರಾಧ ವಿಭಾಗದ ತಂಡಗಳು ನಿನ್ನೆ ಮತ್ತೊಬ್ಬ ಆರೋಪಿ ಶಹನವಾಜ್‌ನನ್ನು ಬಂಧಿಸಿವೆ. ಶಹನವಾಜ್ ಬಂಧನದ ನಂತರ, ಅಪರಾಧ ವಿಭಾಗದ ತಂಡಗಳು ಇತರ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದವು. ಹಿರಿಯ ಸೋನಿಪತ್ ಪೊಲೀಸ್ ಅಧಿಕಾರಿಗಳು ಎನ್‌ಕೌಂಟರ್ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದರು.

ಗಾಯಗೊಂಡ ಇಬ್ಬರು ಆರೋಪಿಗಳ ಬಳಿಯಿಂದ ಎರಡು ಅಕ್ರಮ ದೇಶೀಯ ಪಿಸ್ತೂಲ್‌ಗಳನ್ನು ಸಹ ಅಪರಾಧ ವಿಭಾಗದ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇತರ ಮೂವರು ಆರೋಪಿಗಳಿಗಾಗಿ ಪೊಲೀಸರು ಇನ್ನೂ ದಾಳಿ ನಡೆಸುತ್ತಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ