AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಲ್ಹಾದ ಜೋಶಿ ‘ಕರ್ನಾಟಕದ ಮೋದಿ’: ಜೋಶಿ ಕಾರ್ಯವೈಖರಿಗೆ ಅನಿವಾಸಿ ಭಾರತೀಯರ ಭರ್ಜರಿ ಮೆಚ್ಚುಗೆ

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರನ್ನು ಯುಎಇ ಕನ್ನಡ ಪಾಠಶಾಲೆಯ ಶಶಿಧರ್ ನಾಗರಾಜಪ್ಪ 'ಕರ್ನಾಟಕದ ಮೋದಿ' ಎಂದು ಬಣ್ಣಿಸಿದ್ದಾರೆ. ರಾಜ್ಯದ ಅಭಿವೃದ್ಧಿ, ಜನಪರ ಕಾಳಜಿ, ಹಾಗೂ ಅನಿವಾಸಿ ಭಾರತೀಯರ ಸಮಸ್ಯೆಗಳಿಗೆ ಸ್ಪಂದಿಸುವ ಜೋಶಿಯವರನ್ನು ಶಶಿಧರ್ ಪ್ರಶಂಸಿಸಿದ್ದಾರೆ. ವಿದೇಶದಲ್ಲಿ ಕನ್ನಡ ಭಾಷೆ-ಸಂಸ್ಕೃತಿ ಸಂರಕ್ಷಣೆಗೂ ಜೋಶಿ ಬೆಂಬಲ ನೀಡುತ್ತಿದ್ದಾರೆ ಎಂದು ಹೊಗಳಿದ್ದಾರೆ.

ಪ್ರಲ್ಹಾದ ಜೋಶಿ 'ಕರ್ನಾಟಕದ ಮೋದಿ': ಜೋಶಿ ಕಾರ್ಯವೈಖರಿಗೆ ಅನಿವಾಸಿ ಭಾರತೀಯರ ಭರ್ಜರಿ ಮೆಚ್ಚುಗೆ
ಪ್ರಲ್ಹಾದ ಜೋಶಿ 'ಕರ್ನಾಟಕದ ಮೋದಿ': ಜೋಶಿ ಕಾರ್ಯವೈಖರಿಗೆ ಅನಿವಾಸಿ ಭಾರತೀಯರ ಭರ್ಜರಿ ಮೆಚ್ಚು
ಭಾವನಾ ಹೆಗಡೆ
|

Updated on: Jan 14, 2026 | 11:09 AM

Share

ನವದೆಹಲಿ, ಜನವರಿ 14: ಕೇಂದ್ರ ಸಚಿವ ಪ್ರಲ್ಹಾದ ಜೋಶಿ (Pralhad Joshi) ಅವರು ಕರ್ನಾಟಕದ ಅಭಿವೃದ್ಧಿ ಮತ್ತು ಜನಪರ ಕಾಳಜಿ ತೋರುವಲ್ಲಿ ‘ ಕರ್ನಾಟಕದ ಮೋದಿ’ ಎಂದು UAE ನಲ್ಲಿರುವ ‘ಕನ್ನಡ ಪಾಠಶಾಲೆ’ಯ ಸಂಚಾಲಕ ಶಶಿಧರ್ ನಾಗರಾಜಪ್ಪ ಬಣ್ಣಿಸಿದ್ದಾರೆ. ಯುಎಇನಲ್ಲಿ ಏರ್ಪಡಿಸಿದ್ದ ಸಮಾರಂಭ ಉದ್ದೇಶಿಸಿ ಮಾತನಾಡುತ್ತ, ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಕಲ್ಯಾಣ ಕಾರ್ಯಕ್ಕೆ ಮಿಸಲಾದಂತೆ, ಕರ್ನಾಟಕದಲ್ಲಿ ಪ್ರಲ್ಹಾದ ಜೋಶಿ ಅವರು ಕನ್ನಡಿಗರ ಪಾಲಿನ ಮೋದಿ ಆಗಿದ್ದಾರೆ ಎಂದು ಹೊಗಳಿದರು.

ಅನಿವಾಸಿ ಭಾರತೀಯರಿಗೆ ಸ್ಫೂರ್ತಿ

ಕರ್ನಾಟಕದ ಅಭಿವೃದ್ಧಿ ಮತ್ತು ಜನಪರ ಕಾಳಜಿಯ ವಿಷಯದಲ್ಲಿ ‘ಕರ್ನಾಟಕದ ಮೋದಿ’ ಎಂದೇ ಗುರುತಿಸಿಕೊಳ್ಳುವಂತಹ ದಕ್ಷ ನಾಯಕರಾಗಿದ್ದಾರೆ ಸಚಿವ ಪ್ರಲ್ಹಾದ ಜೋಶಿ ಅವರೆಂದು ಅಭಿಮಾನ ವ್ಯಕ್ತಪಡಿಸಿದ ಶಶಿಧರ್, ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಯೋಜನೆಗಳನ್ನು ಕರ್ನಾಟಕದಲ್ಲಿ ಅತ್ಯಂತ ಯಶಸ್ವಿಯಾಗಿ ಅನುಷ್ಠಾನಗೊಳಿಸುವಲ್ಲಿ ಸಫಲರಾಗಿದ್ದಾರೆ ಎಂದು ಪ್ರಶಂಸಿಸಿದರು. ಅನಿವಾಸಿ ಭಾರತೀಯರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಸಚಿವ ಪ್ರಲ್ಹಾದ ಜೋಶಿ ಅವರ ಕಾರ್ಯವೈಖರಿ ಅಪ್ರತಿಮವಾದದ್ದು. ಸಾಗರೋತ್ತರ ಕನ್ನಡಿಗರ ಮತ್ತು ಅನಿವಾಸಿ ಭಾರತೀಯರ ಶ್ರೇಯೋಭಿವೃದ್ಧಿಗೆ ಸದಾ ಮಿಡಿಯುವ ಸಹೃದಯಿ ಎಂದು ಬಣ್ಣಿಸಿದರು. ಇದೇ ವೇಳೆ ವಿದೇಶದಲ್ಲಿ ಕನ್ನಡ ಪಸರಿಸುವ ಕೈಂಕರ್ಯದಲ್ಲಿ ಅಭೂತಪೂರ್ವ ಪ್ರಯತ್ನ ನಡೆಸಿದ ಯುಎಇ ಕನ್ನಡ ಪಾಠಶಾಲೆಯ ಆಡಳಿತ ಮಂಡಳಿ ಮತ್ತು ಶಿಕ್ಷಕರನ್ನು ಸನ್ಮಾನಿಸಲಾಯಿತು.

ಶಶಿಧರ್ ಹೇಳುವಂತೆ, ಯು.ಎ.ಇ ನಲ್ಲಿ ನಾವು ಕನ್ನಡ ಭಾಷೆ ಮತ್ತು ಸಂಸ್ಕೃತಿ ಉಳಿಸಲು ಹಮ್ಮಿಕೊಂಡಿರುವ ‘ಕನ್ನಡ ಪಾಠಶಾಲೆ’ಯಂತಹ ಪ್ರಯತ್ನಗಳಿಗೆ ಸಚಿವ ಜೋಶಿ ಅವರ ಬೆಂಬಲ, ಮಾರ್ಗದರ್ಶನ ನಮಗೆಲ್ಲಾ ಸ್ಫೂರ್ತಿದಾಯಕ. ಕೇಂದ್ರ ಸಚಿವರಾಗಿ ಅನಿವಾಸಿ ಭಾರತೀಯರ ಸಮಸ್ಯೆಗಳನ್ನು ಆಲಿಸಿ ಸ್ಪಂದಿಸುವ ಅವರ ಔದಾರ್ಯದ ಗುಣ ನಿಜಕ್ಕೂ ಶ್ಲಾಘನೀಯ. ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಯನ್ನು ಜಾಗತಿಕ ಮಟ್ಟದಲ್ಲಿ ಬೆಳೆಸುವ ನಿಟ್ಟಿನಲ್ಲಿ ಪ್ರಲ್ಹಾದ ಜೋಶಿ ಅವರ ದೂರದೃಷ್ಟಿ ಮತ್ತು ಕಾಳಜಿ ನಮಗೆ ಮತ್ತಷ್ಟು ಶಕ್ತಿ ನೀಡಿದೆ.

ಕನ್ನಡ – ಕನ್ನಡಿಗರ ಹಿರಿಮೆಯನ್ನು ಹೊಗಳಿದ ಜೋಶಿ

ಸಮಾರಂಭದಲ್ಲಿ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ಕನ್ನಡ ಭಾಷೆ- ಸಂಸ್ಕೃತಿ ಮತ್ತು ಕನ್ನಡದ ಅಸ್ಮಿತೆಯನ್ನು ಮೆರೆಯುತ್ತ, ವಿದೇಶಿ ನೆಲದಲ್ಲಿ ಕನ್ನಡ ಭಾಷಿಕರನ್ನು ಒಗ್ಗೂಡಿಸಿ, ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಪಸರಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಯುಎಇ ಕನ್ನಡ ಪಾಠಶಾಲೆ ಕೈಂಕರ್ಯಕ್ಕೆ ಅಭಿಮಾನ ವ್ಯಕ್ತಪಡಿಸಿದರು. ಯುಎಇಯಲ್ಲಿರುವ ಅನಿವಾಸಿ ಭಾರತೀಯರು ಕನ್ನಡ ಪಾಠಶಾಲೆಯನ್ನು ಆರಂಭಿಸಿ, ಭಾಷೆ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸುತ್ತ ಹೊರನಾಡ ಕನ್ನಡಿಗರಿಗೆ ಸೂರ್ತಿಯಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಮನ್ ಕೀ ಬಾತ್ ನಲ್ಲಿ ಈ ಬಗ್ಗೆ ಉಲ್ಲೇಖಿಸಿ ಕನ್ನಡ – ಕನ್ನಡಿಗರ ಹಿರಿಮೆಯನ್ನು ಎತ್ತಿ ಹಿಡಿದಿದ್ದಾರೆ ಎಂದು ಸ್ಮರಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ವೇಗವಾಗಿ ಬಂದು ಸಂಚಾರ ಗೃಹರಕ್ಷಕ ಸಿಬ್ಬಂದಿಗೆ ಡಿಕ್ಕಿ ಹೊಡೆದ ಬೈಕ್ ಸವಾರ
ವೇಗವಾಗಿ ಬಂದು ಸಂಚಾರ ಗೃಹರಕ್ಷಕ ಸಿಬ್ಬಂದಿಗೆ ಡಿಕ್ಕಿ ಹೊಡೆದ ಬೈಕ್ ಸವಾರ
ಸೀಸನ್ ಚಪ್ಪಾಳೆಯಲ್ಲಿ ಧ್ರುವಂತ್ ಹೆಸರನ್ನು ನಿರೀಕ್ಷಿಸಿರಲಿಲ್ಲ; ರಾಶಿಕಾ
ಸೀಸನ್ ಚಪ್ಪಾಳೆಯಲ್ಲಿ ಧ್ರುವಂತ್ ಹೆಸರನ್ನು ನಿರೀಕ್ಷಿಸಿರಲಿಲ್ಲ; ರಾಶಿಕಾ
ಮಿಡಲ್ ಫಿಂಗರ್ ತೋರಿಸಿ ವ್ಯಕ್ತಿಯೊಬ್ಬರಿಗೆ ಕೆಟ್ಟ ಶಬ್ದಗಳಲ್ಲಿ ಬೈದ ಟ್ರಂಪ್
ಮಿಡಲ್ ಫಿಂಗರ್ ತೋರಿಸಿ ವ್ಯಕ್ತಿಯೊಬ್ಬರಿಗೆ ಕೆಟ್ಟ ಶಬ್ದಗಳಲ್ಲಿ ಬೈದ ಟ್ರಂಪ್
ಗಿಲ್ಲಿ ಗೆಲ್ಲೋ ಸೂಚನೆ ಕೊಟ್ರಾ ಬಿಗ್ ಬಾಸ್? ಅಭಿಮಾನಿಗಳ ಮುಂದೆಯೇ ಘೋಷಣೆ
ಗಿಲ್ಲಿ ಗೆಲ್ಲೋ ಸೂಚನೆ ಕೊಟ್ರಾ ಬಿಗ್ ಬಾಸ್? ಅಭಿಮಾನಿಗಳ ಮುಂದೆಯೇ ಘೋಷಣೆ
WPLನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಹರ್ಮನ್​ಪ್ರೀತ್ ಕೌರ್
WPLನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಹರ್ಮನ್​ಪ್ರೀತ್ ಕೌರ್
ಮಹಿಳೆಯ ಮನೆಯ ಮೇಲೆ ದುಷ್ಕರ್ಮಿಗಳಿಂದ ಕಲ್ಲು ತೂರಾಟ, ಗುಂಡಿನ ದಾಳಿ
ಮಹಿಳೆಯ ಮನೆಯ ಮೇಲೆ ದುಷ್ಕರ್ಮಿಗಳಿಂದ ಕಲ್ಲು ತೂರಾಟ, ಗುಂಡಿನ ದಾಳಿ
ಸಂಕ್ರಾಂತಿ: ಕೆಆರ್​ ಮಾರ್ಕೆಟ್ ಸುತ್ತಮುತ್ತ ಮುಂಜಾನೆಯೇ ಭಾರಿ ಟ್ರಾಫಿಕ್ ಜಾಂ
ಸಂಕ್ರಾಂತಿ: ಕೆಆರ್​ ಮಾರ್ಕೆಟ್ ಸುತ್ತಮುತ್ತ ಮುಂಜಾನೆಯೇ ಭಾರಿ ಟ್ರಾಫಿಕ್ ಜಾಂ
ಶನಿಗ್ರಹ ಇತರ ಗ್ರಹದೊಂದಿಗೆ ಇದ್ರೆ ಯಾವ ಖಾಯಿಲೆ ಬರುತ್ತೆ ಗೊತ್ತಾ?
ಶನಿಗ್ರಹ ಇತರ ಗ್ರಹದೊಂದಿಗೆ ಇದ್ರೆ ಯಾವ ಖಾಯಿಲೆ ಬರುತ್ತೆ ಗೊತ್ತಾ?
ಇಂದು ಈ ರಾಶಿಯವರ ಖರ್ಚುಗಳಲ್ಲಿ ಇಳಿಕೆ
ಇಂದು ಈ ರಾಶಿಯವರ ಖರ್ಚುಗಳಲ್ಲಿ ಇಳಿಕೆ
ಮಕರ ಸಂಕ್ರಾಂತಿ: ಗವಿಗಂಗಾಧರೇಶ್ವರನಿಗೆ ಸೂರ್ಯರಶ್ಮಿ ಸ್ಪರ್ಷ ಎಷ್ಟು ಗಂಟೆಗೆ?
ಮಕರ ಸಂಕ್ರಾಂತಿ: ಗವಿಗಂಗಾಧರೇಶ್ವರನಿಗೆ ಸೂರ್ಯರಶ್ಮಿ ಸ್ಪರ್ಷ ಎಷ್ಟು ಗಂಟೆಗೆ?