ನೂರಾರು ವರ್ಷಗಳಿಂದ ಬಳಕೆಯಲ್ಲಿದ್ದ​ ‘ಗೋರಖ್​ ಧಂಧಾ’ ಪದವನ್ನು ಹರಿಯಾಣ ಸಿಎಂ ಖಟ್ಟರ್ ಬ್ಯಾನ್​ ಮಾಡಿದರು, ಯಾಕೆ?

Gorakh Dhanda: ‘ಗೋರಖ್​ ಧಂಧಾ’ ಪದವನ್ನು ಈ ಹಿಂದೆ ಸಕಾರಣವಾಗಿ ಯಥೇಚ್ಛವಾಗಿ ಬಳಸಲ್ಪಟ್ಟಿದೆ. ಸುವಿಖ್ಯಾತ ಗಝಲ್​ ಗಾಯಕ ನುಸ್ರತ್​ ಫತೇ ಅಲಿ ಖಾನ್​ ಅವರ ಸುಶ್ರಾವ್ಯ ಕಂಠದಿಂದ ‘ನೀನೊಬ್ಬ ಗೋರಖ್​ ಧಂಧಾ ವ್ಯಕ್ತಿ’ ಎಂದು ಗೌರವಪೂರ್ಣವಾಗಿ ಬಳಸಲ್ಪಟ್ಟ ಖವ್ವಾಲಿಯನ್ನು ಹಾಡಿದ್ದಾರೆ.

ನೂರಾರು ವರ್ಷಗಳಿಂದ ಬಳಕೆಯಲ್ಲಿದ್ದ​ ‘ಗೋರಖ್​ ಧಂಧಾ’ ಪದವನ್ನು ಹರಿಯಾಣ ಸಿಎಂ ಖಟ್ಟರ್ ಬ್ಯಾನ್​ ಮಾಡಿದರು, ಯಾಕೆ?
ನೂರಾರು ವರ್ಷಗಳಿಂದ ಬಳಕೆಯಲ್ಲಿದ್ದ​ ‘ಗೋರಖ್​ ಧಂಧಾ’ ಪದವನ್ನು ಹರಿಯಾಣ ಮುಖ್ಯಮಂತ್ರಿ ಖಟ್ಟರ್ ಬ್ಯಾನ್​ ಮಾಡಿದರು, ಯಾಕೆ?
Follow us
TV9 Web
| Updated By: ಸಾಧು ಶ್ರೀನಾಥ್​

Updated on:Aug 19, 2021 | 12:51 PM

ಹರಿಯಾಣ: ನೂರಾರು ವರ್ಷಗಳಿಂದ ಬಳಕೆಯಲ್ಲಿದ್ದ​ ‘ಗೋರಖ್​ ಧಂಧಾ’ ಪದವನ್ನು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ನಿಷೇಧಿಸಿದ್ದಾರೆ. ‘ಗೋರಖ್​ ಧಂಧಾ’ ಎಂಬುದು ಮೂಲತಃ ಉರ್ದು ಭಾಷೆಯಿಂದ ಬಂದಿದ್ದು. ಗೋರಖ್​ ಧಂಧಾ (Gorakh Dhanda) ಪದ ಬಳಕೆಯಿಂದ ಗುರು ಗೋರಖ್ ನಾಥರ ಅನುಯಾಯಿಗಳ ಭಾವನೆಗಳಿಗೆ ಧಕ್ಕೆಯುಂಟಾಗುತ್ತದೆ. ಹಾಗಾಗಿ ಅದನ್ನುಸಂಪೂರ್ಣವಾಗಿ ನಿಷೇಧಿಸಲಾಗಿದೆ. ಯಾವುದೇ ಸಂದರ್ಭದಲ್ಲಿಯೂ ಈ ಪದವನ್ನು ಬಳಸುವ ಹಾಗಿಲ್ಲ (ban) ಎಂದು ಹರಿಯಾಣ ಸರ್ಕಾರ ಕಟ್ಟುನಿಟ್ಟಿನ ಅದೇಶವನ್ನು ಬುಧವಾರ ಜಾರಿ ಮಾಡಿದೆ.

ಹಾಗೆ ನೋಡಿದರೆ ಸರ್ಕಾರವೊಂದು ಯಾವುದೇ ಭಾಷೆಯಲ್ಲಿ ಪದ ಬಳಕೆಯನ್ನು ಹೀಗೆ ನಿಷೇಧಿಸುವುದು ಅಪರೂಪ. ಬೇಕಿದ್ದರೆ ಕಾಲಕ್ಕೆ ತಕ್ಕಂತೆ ಹೊದ ಪದಗಳ ಬಳಕೆಗೆ ಮುಂದಾಗುತ್ತದೆ. ಆದರೆ ಹೀಗೆ ನಿಷೇಧಿಸುವ ಕ್ರಮಕ್ಕೆ ಮುಂದಾಗಿದ್ದು ಏಕೆ ಎಂದು ನೋಡಿದಾಗ… ಆದರೆ ಅದಕ್ಕೂ ಮುನ್ನ ‘ಗೋರಖ್​ ಧಂಧಾ’ ಎಂಬುದು ಕೆಟ್ಟ ಅರ್ಥ ಕೊಡುವ ಪದ ಅಲ್ಲ. ಅದು ಬಾಬಾ ಗೋರಖ್ ನಾಥ ಪಂಥದವರು ಸಕಾರಣವಾಗಿ ಒಳ್ಳೆಯದ್ದಕ್ಕೆ ಬಳಸುತ್ತಿದ್ದರು.

ಗೋರಖ್​ ಧಂಧಾ ಎಂದರೆ ಸಮಾಜಮುಖಿಯಾಗಿ ಒಳ್ಳೆಯ ಕೆಲಸಗಳನ್ನು ಮಾಡುವುದಕ್ಕೆ ಬಳಕೆಯಾಗುತ್ತಿದ್ದ ಪದ ಪ್ರಯೋಗ. ಆದರೆ ಇಂದಿನ ಕಾಲ ಧರ್ಮದಲ್ಲಿ ಅದು ಅನಾಚಾರ, ಕುಕೃತ್ಯ ಮಾಡಿದಾಗ ಬಳಸಲ್ಪಡುತ್ತಿದೆ. ಯಾರಾದರೂ ಮೋಸ, ವಂಚನೆ, ಕೆಟ್ಟದನ್ನು ಮಾಡಿದಾಗ ‘ಓ ಅದು ಗೋರಖ್​ ಧಂಧಾ’ ಎಂದು ಜನ ಸಲೀಸಾಗಿ ಹೇಳಿಬಿಡುತ್ತಿದ್ದಾರೆ. ಸತ್ಕಾರ್ಯಕ್ಕೆ ಬಳಸಲ್ಪಡುತ್ತಿದ್ದ ಇಂತಹ ಪದಪುಂಜವನ್ನು ಕೆಟ್ಟದ್ದಕ್ಕೆ ಸಮೀಕರಿಸಲಾಗುತ್ತಿದೆ ಎಂದು ಬೇಸರಗೊಂಡ ಗುರು ಗೋರಖ್ ನಾಥರ ಅನುಯಾಯಿಗಳು (Guru Gorkahnath) ತಮ್ಮ ಭಾವನೆಗಳಿಗೆ ಧಕ್ಕೆಯಾಗುತ್ತಿದೆ. ಮೊದಲು ಆ ಪದ ಬಳಕೆಯನ್ನೇ ನಿಲ್ಲಿಸಿಬಿಡಿ ಎಂದು ಸೀದಾ ಮುಖ್ಯಮಂತ್ರಿ ಬಳಿ ಭಿನ್ನವತ್ತಳೆಯಿಟ್ಟಿದ್ದರು. ಹಾಗಾಗಿ ಸಿಎಂ ಖಟ್ಟರ್ ಈ ಖಟ್ಟರ್​ ಆದೇಶವನ್ನು ಹೊರಡಿಸಿದರು. ಇದರಿಂದ ಅನೇಕರು ಸಂತುಷ್ಟರಾಗಿದ್ದು, ಸಮಾಧಾನಗೊಂಡಿದ್ದಾರೆ.

ಗುರು ಗೋರಖ್ ನಾಥರು 11 ನೇ ಶತಮಾನದ ಹಿಂದೂ ಯೋಗಿ. ಭಾರತದಲ್ಲಿ ನಾಥ ಪಂಥ ಚಳವಳಿಯನ್ನು ಹುಟ್ಟುಹಾಕಿದವರು. ಉತ್ತರ ಪ್ರದೇಶದಲ್ಲಿ ಗೋರಖ್ ಪುರ ಹೆಸರಿನ ಜಿಲ್ಲೆ ಮತ್ತು ಗೋರಖ್ ನಾಥ ಮಠ ಇದೆ.

‘ಗೋರಖ್​ ಧಂಧಾ’ ಪದವನ್ನು ಈ ಹಿಂದೆ ಸಕಾರಣವಾಗಿ ಯಥೇಚ್ಛವಾಗಿ ಬಳಸಲ್ಪಟ್ಟಿದೆ. ಸುವಿಖ್ಯಾತ ಗಝಲ್​ ಗಾಯಕ ನುಸ್ರತ್​ ಫತೇ ಅಲಿ ಖಾನ್​ (Nusrat Fateh Ali Khan) ಅವರ ಸುಶ್ರಾವ್ಯ ಕಂಠದಿಂದ ‘ನೀನೊಬ್ಬ ಗೋರಖ್​ ಧಂಧಾ ವ್ಯಕ್ತಿ’ ಎಂದು ಗೌರವಪೂರ್ಣವಾಗಿ ಬಳಸಲ್ಪಟ್ಟ ಖವ್ವಾಲಿಯನ್ನು (Qawwali) ಹಾಡಿದ್ದಾರೆ.

(Haryana Government banned use of word Gorakh Dhanda)

Published On - 9:00 am, Thu, 19 August 21