ನವದೆಹಲಿ: ಹೊಸ ವರ್ಷದ ಮೊದಲ ದಿನವೇ ಭಾರತದಲ್ಲಿ ಸಾಲು ಸಾಲು ದುರಂತಗಳು ಸಂಭವಿಸಿವೆ. ಇಂದು ಬೆಳಗ್ಗೆ ಜಮ್ಮು ಕಾಶ್ಮೀರದ ವೈಷ್ಣೋದೇವಿ ಮಂದಿರದಲ್ಲಿ ಭಕ್ತರ ಕಾಲ್ತುಳಿತವಾಗಿ 12 ಭಕ್ತರು ಸಾವನ್ನಪ್ಪಿದ್ದರು. ಅದರ ಬೆನ್ನಲ್ಲೇ ಶಿವಕಾಶಿ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿ 4 ಜನರು ಸಾವನ್ನಪ್ಪಿದ್ದರು. ಇದೀಗ ಮೂರನೇ ದುರಂತ ಸಂಭವಿಸಿದ್ದು, ಹರಿಯಾಣದಲ್ಲಿ ಭೂಕುಸಿತವಾಗಿ 10ರಿಂದ 15 ಜನರು ಮಣ್ಣಿನಡಿ ಹೂತುಹೋಗಿದ್ದಾರೆ. ಹಲವು ವಾಹನಗಳು ಕೂಡ ಮಣ್ಣಿನಡಿ ಸೇರಿವೆ.
ಹರಿಯಾಣದ ಭಿವಾನಿ ಜಿಲ್ಲೆಯ ತೋಷಮ್ ಬ್ಲಾಕ್‌ನ ದಡಮ್ ಗಣಿಗಾರಿಕೆ ವಲಯದಲ್ಲಿ ಇಂದು (ಶನಿವಾರ) ಸಂಭವಿಸಿದ ಭೂಕುಸಿತದಲ್ಲಿ ಗಣಿಗಾರಿಕೆಯಲ್ಲಿ ತೊಡಗಿದ್ದ ಸುಮಾರು 12ಕ್ಕೂ ಹೆಚ್ಚು ವಾಹನಗಳು ಹೂತು ಹೋಗಿವೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ಸುಮಾರು 15ರಿಂದ 20 ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದಾರೆ. ಅಧಿಕಾರಿಗಳು ಸ್ಥಳದಲ್ಲಿದ್ದು, ಪ್ರಸ್ತುತ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
Saddened by the unfortunate landslide accident in Dadam mining zone at Bhiwani. I am in constant touch with the local administration to ensure swift rescue operations and immediate assistance to the injured.
— Manohar Lal (@mlkhattar) January 1, 2022
ಹರಿಯಾಣದ ಭಿವಾನಿ ಜಿಲ್ಲೆಯ ಗಣಿಗಾರಿಕೆ ವಲಯದಲ್ಲಿ ಶನಿವಾರ ಸಂಭವಿಸಿದ ಭೂಕುಸಿತದ ನಂತರ ಸುಮಾರು 15ರಿಂದ 20 ಜನರು ಸಿಲುಕಿರುವ ಶಂಕೆ ಇದೆ. ಜಿಲ್ಲಾಡಳಿತವು ತೋಷಮ್ ಬ್ಲಾಕ್‌ನ ದಡಮ್ ಗಣಿಗಾರಿಕೆ ವಲಯದಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದೆ. ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಕ್ಷಿಪ್ರ ರಕ್ಷಣಾ ಕಾರ್ಯಾಚರಣೆ ನಡೆಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಹಾಗೇ, ಮಣ್ಣಿನಡಿ ಸಿಲುಕಿರುವವರನ್ನು ಹೊರಗೆ ತೆಗೆಯುವ ಕಾರ್ಯಾಚರಣೆ ನಡೆಯುತ್ತಿದೆ.
Incident of a landslide in a mining quarry took place in Haryana’s Bhiwani pic.twitter.com/d7d382RxrC
— ANI (@ANI) January 1, 2022
ಭೂಕುಸಿತ ಸಂಭವಿಸಿದಾಗ ಕಾರ್ಮಿಕರು ಬೇರೆ ಸ್ಥಳಕ್ಕೆ ಪ್ರಯಾಣಿಸುತ್ತಿದ್ದರು. ಆಗ ಅವರ ವಾಹನಗಳು ಮಣ್ಣಿನಡಿ ಸಿಲುಕಿದೆ ಎಂದು ವರದಿಯಾಗಿದೆ. ಹರಿಯಾಣದ ಕೃಷಿ ಸಚಿವ ಜೆಪಿ ದಲಾಲ್ ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆಗಾಗಿ ಸ್ಥಳಕ್ಕೆ ತಲುಪಿದ್ದಾರೆ. “ಮೂವರನ್ನು ರಕ್ಷಿಸಿ ಆಸ್ಪತ್ರೆಗೆ ಕಳುಹಿಸಲಾಗಿದೆ. ನಾವು ಜೀವ ಉಳಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇವೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Vaishno Devi Temple Stampede: ವೈಷ್ಣೋದೇವಿ ಮಂದಿರದಲ್ಲಿ ಕಾಲ್ತುಳಿತ, 12 ಭಕ್ತರ ಸಾವು
ಶಿವಕಾಶಿ ಪಟಾಕಿ ಕಾರ್ಖಾನೆಯೊಂದರಲ್ಲಿ ಸ್ಫೋಟ; 4 ಮಂದಿ ಸಾವು, ಹಲವರಿಗೆ ಗಾಯ
Published On - 2:28 pm, Sat, 1 January 22