ಹೋಟೆಲ್​ಗೆ ಕರೆಸಿಕೊಂಡು 17 ವರ್ಷದ ಮಹಿಳಾ ಶೂಟರ್ ಮೇಲೆ ಅತ್ಯಾಚಾರ, ನ್ಯಾಷನಲ್ ಕೋಚ್ ಅಮಾನತು

ಫರೀದಾಬಾದ್‌ನಲ್ಲಿ ರಾಷ್ಟ್ರೀಯ ಕೋಚ್ ಅಂಕುಶ್ ಭಾರದ್ವಾಜ್ 17 ವರ್ಷದ ಮಹಿಳಾ ಶೂಟರ್ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಅಮಾನತುಗೊಂಡಿದ್ದಾರೆ. ಹೋಟೆಲ್‌ನಲ್ಲಿ ವೃತ್ತಿಜೀವನ ಹಾಳು ಮಾಡುವ ಬೆದರಿಕೆ ಹಾಕಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂದು ಎಫ್‌ಐಆರ್ ದಾಖಲಾಗಿದೆ. ದೆಹಲಿ ಶೂಟಿಂಗ್ ಸ್ಪರ್ಧೆ ನಂತರ ಘಟನೆ ನಡೆದಿದ್ದು, ಪೋಕ್ಸೊ ಅಡಿ ಕೇಸ್ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಹೋಟೆಲ್​ಗೆ ಕರೆಸಿಕೊಂಡು 17 ವರ್ಷದ ಮಹಿಳಾ ಶೂಟರ್ ಮೇಲೆ ಅತ್ಯಾಚಾರ, ನ್ಯಾಷನಲ್ ಕೋಚ್ ಅಮಾನತು
ಕೋಚ್ ಅಂಕುಶ್

Updated on: Jan 08, 2026 | 10:13 AM

ಫರೀದಾಬಾದ್, ಜನವರಿ 08: ಹೋಟೆಲ್​ಗೆ ಕರೆಸಿಕೊಂಡು ಹದಿನೇಳು ವರ್ಷದ ಮಹಿಳಾ ಶೂಟರ್(Shooter)​ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ರಾಷ್ಟ್ರೀಯ ತರಬೇತುದಾರ(National Coach) ಅಂಕುಶ್ ಭಾರದ್ವಾಜ್​ನನ್ನು ಅಮಾನತುಗೊಳಿಸಲಾಗಿದೆ. ಹೋಟೆಲ್​ಗೆ ಕರೆಸಿ, ಆಕೆಯ ಕೆರಿಯರ್ ಹಾಳು ಮಾಡುವುದಾಗಿ ಬೆದರಿಕೆ ಹಾಕಿ ಬಳಿಕ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ಈ ಕುರಿತು ಬಾಲಕಿಯ ಪೋಷಕರು ಎಫ್​ಐಆರ್ ದಾಖಲಿಸಿದ್ದಾರೆ. ದೂರಿನ ಪ್ರಕಾರ, ಕಳೆದ ವರ್ಷ ಡಿಸೆಂಬರ್ 16 ರಂದು, ದೆಹಲಿಯ ಡಾ. ಕರ್ಣಿ ಸಿಂಗ್ ಶೂಟಿಂಗ್ ಅಕಾಡೆಮಿಯಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಶೂಟಿಂಗ್ ಸ್ಪರ್ಧೆಯಿಂದ ಕ್ರೀಡಾಪಟು ಹಿಂದಿರುಗುವ ಒಂದು ದಿನ ಮೊದಲು ಈ ಘಟನೆ ನಡೆದಿದೆ.

ಆರೋಪಿ ತರಬೇತುದಾರ ರಾಷ್ಟ್ರೀಯ ರೈಫಲ್ ಅಸೋಸಿಯೇಷನ್ ​​ಆಫ್ ಇಂಡಿಯಾ (ಎನ್‌ಆರ್‌ಎಐ) ನೇಮಿಸಿಕೊಂಡಿರುವ 13 ರಾಷ್ಟ್ರೀಯ ಪಿಸ್ತೂಲ್ ತರಬೇತುದಾರರಲ್ಲಿ ಒಬ್ಬರು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ತರಬೇತುದಾರನನ್ನು ಅಮಾನತುಗೊಳಿಸಲಾಗಿದೆ. ಫರಿದಾಬಾದ್‌ನ ಸೂರಜ್‌ಕುಂಡ್‌ನಲ್ಲಿರುವ ಹೋಟೆಲ್‌ನ ಲಾಬಿಯಲ್ಲಿ ತರಬೇತುದಾರ ಶೂಟರ್‌ಳನ್ನು ಆಹ್ವಾನಿಸಿದ್ದ ಎಂದು ದೂರಿನಲ್ಲಿ ಆರೋಪಿಸಲಾಗಿದೆ .

ಮತ್ತಷ್ಟು ಓದಿ: ಬೆಂಗಳೂರಿನಲ್ಲಿ ಉದ್ಯಮಿ ಮೇಲೆ ಫೈರಿಂಗ್​: ಕೂದಲೆಳೆ ಅಂತರದಲ್ಲಿ ಬಚಾವ್​!

ಆಕೆಯ ಕಾರ್ಯಕ್ಷಮತೆಯನ್ನು ವಿಶ್ಲೇಷಿಸುವುದಾಗಿ ಮತ್ತು ಆಕೆಯ ಶೂಟಿಂಗ್ ಬಗ್ಗೆ ವಿವರವಾಗಿ ಚರ್ಚಿಸುವುದಾಗಿ ಅವರು ಹೇಳಿಕೊಂಡಿದ್ದಾರೆ. ಈ ನೆಪದಲ್ಲಿ ಅವರು ಕ್ರೀಡಾಪಟುವನ್ನು ತಮ್ಮ ಕೋಣೆಗೆ ಹೋಗುವಂತೆ ಒತ್ತಡ ಹೇರಿದ್ದರು. ಚರ್ಚೆ ಹೆಚ್ಚು ಆಳವಾಗಿರುತ್ತದೆ ಎಂದು ಹೇಳಿದ್ದರು. ಘಟನೆಯ ಬಗ್ಗೆ ಯಾರಿಗಾದರೂ ಹೇಳಿದರೆ, ಆಕೆಯ ವೃತ್ತಿಜೀವನವನ್ನು ಹಾಳು ಮಾಡುವುದಾಗಿ ಮತ್ತು ಆಕೆಯ ಕುಟುಂಬಕ್ಕೆ ಹಾನಿ ಮಾಡುವುದಾಗಿ ತರಬೇತುದಾರ ಬೆದರಿಕೆ ಹಾಕಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಘಟನೆಯ ನಂತರ ಸಂತ್ರಸ್ತೆ ಆಘಾತದಿಂದ ಹೋಟೆಲ್‌ನಿಂದ ಹೊರಬಂದಳು ಮತ್ತು ನಂತರ ತನ್ನ ಕುಟುಂಬದವರಿಗೆ ತನ್ನ ಅನುಭವವನ್ನು ವಿವರಿಸಿದಳು, ನಂತರ ಪೊಲೀಸರಿಗೆ ದೂರು ನೀಡಲಾಗಿದೆ. ಘಟನೆಯ ದಿನದ ಎಲ್ಲಾ ಸಿಸಿಟಿವಿ ದೃಶ್ಯಾವಳಿಗಳನ್ನು ತಕ್ಷಣ ಹಂಚಿಕೊಳ್ಳುವಂತೆ ಪೊಲೀಸರು ಹೋಟೆಲ್ ಸಿಬ್ಬಂದಿಯನ್ನು ಕೇಳಿಕೊಂಡಿದ್ದಾರೆ.

ಆರೋಪಿಯನ್ನು ಇನ್ನೂ ಬಂಧಿಸಲಾಗಿಲ್ಲ ಅಥವಾ ಅವನಿಗೆ ಯಾವುದೇ ನೋಟಿಸ್ ನೀಡಲಾಗಿಲ್ಲ. ದೂರಿನ ಆಧಾರದ ಮೇಲೆ, ಪೊಲೀಸರು ಪೋಕ್ಸೊ ಸೇರಿದಂತೆ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ .

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ