Hathras Gangrape-Murder Case: ಆರೋಪಿ ಸಂದೀಪ್ ಸಿಸೋಡಿಯಾಗೆ ಜೀವಾವಧಿ ಶಿಕ್ಷೆ
ಹತ್ರಾಸ್ ಸಾಮೂಹಿಕ ಅತ್ಯಾಚಾರ-ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಸಂದೀಪ್ ಸಿಸೋಡಿಯಾಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಹತ್ರಾಸ್ ಸಾಮೂಹಿಕ ಅತ್ಯಾಚಾರ-ಕೊಲೆ ಪ್ರಕರಣಕ್ಕೆ (Hathras Gangrape-Murder Case) ಸಂಬಂಧಿಸಿದಂತೆ ಪ್ರಮುಖ ಆರೋಪಿ ಸಂದೀಪ್ ಸಿಸೋಡಿಯಾಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಉತ್ತರ ಪ್ರದೇಶದ ನ್ಯಾಯಾಲಯ ಗುರುವಾರ ಜೀವಾವಧಿ ಶಿಕ್ಷೆ ಆದೇಶವನ್ನು ನೀಡಿದೆ. ಕೊಲೆಗೆ ಸಂಬಂಧಿಸಿದ ಆರೋಪಗಳು ಮತ್ತು ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಸಂದೀಪ್ ವಿರುದ್ಧ ಇರುತ್ತದೆ. ಆದರೆ ಉಳಿದ ನಾಲ್ವರು ಆರೋಪಿಗಳ ವಿರುದ್ಧ ಸಾಮೂಹಿಕ ಅತ್ಯಾಚಾರದ ಆರೋಪಗಳನ್ನು ಕೈಬಿಡಲಾಗಿದೆ. 2020ರ ಹತ್ರಾಸ್ ಪ್ರಕರಣದಲ್ಲಿ ಆರೋಪಿಗಳಾದ ನಾಲ್ವರು ಪುರುಷರಲ್ಲಿ ಮೂವರನ್ನು ಉತ್ತರ ಪ್ರದೇಶದ ನ್ಯಾಯಾಲಯವು ಗುರುವಾರ ಬಿಡುಗಡೆ ಮಾಡಿದೆ. ದಲಿತ ಯುವತಿಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಮಾಡಿದ್ದಾರೆ. ನಾಲ್ಕನೆಯವನು ಸಂದೀಪ್ ಸಿಸೋಡಿಯಾ ಕೊಲೆಗೆ ಸಮಾನವಲ್ಲದ ಅಪರಾಧಿ ನರಹತ್ಯೆಯ ತಪ್ಪಿತಸ್ಥನೆಂದು ಕಂಡುಬಂದಿದೆ.
ಖುಲಾಸೆಗೊಂಡ ಮೂವರನ್ನು ರವಿ, ರಾಮು ಮತ್ತು ಲವ್ ಕುಶ್ ಎಂದು ಗುರುತಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ತಿಳಿಸಿದೆ. ಶಿಕ್ಷೆಯ ಪ್ರಮಾಣವನ್ನು ಇಂದಿನ ನಂತರ ಪ್ರಕಟಿಸಲಾಗುವುದು. ಮಹಿಳೆಯ ಕುಟುಂಬದ ಪರ ವಾದ ಮಂಡಿಸಿದ ವಕೀಲೆ ಸೀಮಾ ಖುಷ್ವಾಹಾ ಅವರು ತೀರ್ಪನ್ನು ಪ್ರಶ್ನಿಸುವುದಾಗಿ ಹೇಳಿದ್ದಾರೆ. ಅಂತಿಮ ಆದೇಶ ಇನ್ನೂ ಹೊರಬಿದ್ದಿಲ್ಲ.
ಈ ಭೀಕರ ಅಪರಾಧವು ಭಾರತದಾದ್ಯಂತ ಉಗ್ರ ಪ್ರತಿಭಟನೆಗಳನ್ನು ಹುಟ್ಟುಹಾಕಿತು ಮತ್ತು ಜಾಗತಿಕವಾಗಿ ಇದು ಭಾರಿ ಸುದ್ದಿಯನ್ನು ಮಾಡಿತ್ತು. ದೆಹಲಿಯಿಂದ ಸುಮಾರು 200 ಕಿ.ಮೀ ದೂರದಲ್ಲಿರುವ ತನ್ನ ಹಳ್ಳಿಯಲ್ಲಿ 20 ವರ್ಷದ ಮಹಿಳೆ ಮೇಲೆ ಹಲ್ಲೆ ನಡೆಸಲಾಗಿದೆ. ತಾನು ಕೆಲಸ ಮಾಡುತ್ತಿದ್ದ ಹೊಲದಿಂದ ಎಳೆದೊಯ್ದಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾಳೆ.
ಇದು 2012 ರ ದೆಹಲಿ ಗ್ಯಾಂಗ್ರೇಪ್‌ಗೆ ಸಮಾನವಾದದ್ದು ಎಂದು ಹೇಳಲಾಗಿತ್ತು. ನಂತರ ಈ ಘಟನೆಯಿಂದ ಆಕೆ ಪಾರ್ಶ್ವವಾಯುವಿಗೆ ಕಾರಣವಾಗಿತ್ತು. ಆಕೆ ಉಸಿರಾಡಲು ಹೆಣಗಾಡಿದ್ದಾಳೆ ಕೊನೆಗೆ ಸಾವನ್ನಪಿರುವುದಾಗಿ ಕಟುಟುಂಬದವರು ತಿಳಿಸಿದ್ದಾರೆ. ಆದರೆ ಆಕೆಯನ್ನು ಮಧ್ಯರಾತ್ರಿಯ ರಹಸ್ಯ ಅಂತ್ಯಕ್ರಿಯೆ ಮಾಡಲು ನಿರ್ಧಾರಿಸಲಾಗಿತ್ತು, ಆದರೆ ಅವಳ ಕುಟುಂಬವನ್ನು ನಿರ್ಬಂಧಿಸಿದ್ದರು.
Published On - 6:29 pm, Thu, 2 March 23