ಈಗ ನಾವು ಏಪ್ರಿಲ್ ತಿಂಗಳ ಕೊನೆಯ ಭಾಗದಲ್ಲಿದ್ದೇವೆ, ಬಿಸಿಲ ಝಳ ನಿರಂತರವಾಗಿ ಹೆಚ್ಚುತ್ತಿದೆ. ದೇಶದ ಬಹುತೇಕ ರಾಜ್ಯಗಳಲ್ಲಿ ಇದೇ ಪರಿಸ್ಥಿತಿ ಇದೆ. ಹವಾಮಾನ ಇಲಾಖೆಯು ಇಂದು ಅಂದರೆ ಏಪ್ರಿಲ್ 19 ಕ್ಕೆ 9 ರಾಜ್ಯಗಳಲ್ಲಿ ಹೀಟ್ ವೇವ್(Heatwave) ಅಲರ್ಟ್ ನೀಡಿದೆ. ಇದರೊಂದಿಗೆ ದೇಶದ ನಗರಗಳ ತಾಪಮಾನದಲ್ಲೂ ಭಾರಿ ಏರಿಕೆ ದಾಖಲಾಗುತ್ತಿದೆ. ಹವಾಮಾನ ಇಲಾಖೆ ಪ್ರಕಾರ, ಪಶ್ಚಿಮ ಬಂಗಾಳ, ಸಿಕ್ಕಿಂ, ಒಡಿಶಾ, ಜಾರ್ಖಂಡ್, ಬಿಹಾರ, ಉತ್ತರ ಪ್ರದೇಶ, ಆಂಧ್ರಪ್ರದೇಶ ಮತ್ತು ಪುದುಚೇರಿಯ ಯಾನಂನಲ್ಲಿ ಹೀಟ್ವೇವ್ ಅಲರ್ಟ್ ನೀಡಲಾಗಿದೆ.
ಇದಲ್ಲದೇ ಹಲವು ನಗರಗಳಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಟಿದೆ. ಇದು ಮಹಾರಾಷ್ಟ್ರದ ಅನೇಕ ನಗರಗಳನ್ನು ಒಳಗೊಂಡಿದೆ.
ಮಂಗಳವಾರ (ಏಪ್ರಿಲ್ 18) ರಂದು ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಅತ್ಯಂತ ಗರಿಷ್ಠ ಉಷ್ಣಾಂಶ 44.2 ಡಿಗ್ರಿ ಸೆಲ್ಸಿಯಸ್ ತಾಖಲಾಗಿತ್ತು.
IMD ಹವಾಮಾನ ಮುನ್ಸೂಚನೆಯ ಪ್ರಕಾರ, ಏಪ್ರಿಲ್ 19 ರಂದು ದೆಹಲಿಯಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಇದರೊಂದಿಗೆ, ಏಪ್ರಿಲ್ 20 ರಂದು, ಮೋಡ ಕವಿದ ವಾತಾವರಣವಿರಲಿದೆ, ಲಘು ಮಳೆಯಾಗುವ ನಿರೀಕ್ಷೆಯಿದೆ. 22ರಿಂದ 24ರವರೆಗೆ ಆಕಾಶ ಶುಭ್ರವಾಗಿರುತ್ತದೆ. ಗರಿಷ್ಠ ತಾಪಮಾನ 37 ರಿಂದ 40 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 19 ರಿಂದ 22 ಡಿಗ್ರಿ ಸೆಲ್ಸಿಯಸ್ ಆಗುವ ಸಾಧ್ಯತೆಯಿದೆ.
Karnataka Weather: ಚಿಕ್ಕಮಗಳೂರು, ಕೊಡಗಿನಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆ ಸಾಧ್ಯತೆ
ಮತ್ತೊಂದೆಡೆ, ಉತ್ತರ ಭಾರತದ ಪ್ರದೇಶಗಳಲ್ಲಿ, ಬಿಹಾರ, ಜಾರ್ಖಂಡ್, ಉಪ-ಹಿಮಾಲಯ ಪಶ್ಚಿಮ ಬಂಗಾಳ, ಒಡಿಶಾ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಮುಂದಿನ 4 ದಿನಗಳವರೆಗೆ ತಾಪಮಾನ ಹೆಚ್ಚಳದ ನಿರೀಕ್ಷೆಯಿದೆ. ಆದಾಗ್ಯೂ, ಇದರ ನಂತರ ಶಾಖದ ಅಲೆಯಲ್ಲಿ ಇಳಿಕೆಯಾಗುವ ಸಾಧ್ಯತೆಯಿದೆ.
ಹವಾಮಾನ ಇಲಾಖೆಯ ಪ್ರಕಾರ ಹಲವು ರಾಜ್ಯಗಳಲ್ಲಿ ಗರಿಷ್ಠ ತಾಪಮಾನ 5 ಡಿಗ್ರಿಗಳಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಪಶ್ಚಿಮ ಬಂಗಾಳ, ಸಿಕ್ಕಿಂ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾ ಮತ್ತು ಬಿಹಾರದಲ್ಲಿ 5 ಡಿಗ್ರಿಗಳಷ್ಟು ಹೆಚ್ಚಿನ ತಾಪಮಾನ ದಾಖಲಾಗಿದೆ.
ಮತ್ತೊಂದೆಡೆ ಉತ್ತರ ಭಾರತದ ಹವಾಮಾನದ ಬಗ್ಗೆ ಮಾತನಾಡುವುದಾದರೆ ಪಂಜಾಬ್, ಉತ್ತರ ಪ್ರದೇಶ, ಹರ್ಯಾಣ, ಚಂಡೀಗಢ, ದೆಹಲಿ, ಛತ್ತೀಸ್ಗಢ, ಆಂಧ್ರಪ್ರದೇಶ, ಮಧ್ಯಪ್ರದೇಶಗಳಲ್ಲಿ ತಾಪಮಾನವು ಸಾಮಾನ್ಯಕ್ಕಿಂತ 3-5 ಡಿಗ್ರಿಗಳಷ್ಟು ಹೆಚ್ಚಾಗಲಿದೆ.
ಇದಲ್ಲದೆ ಗುಜರಾತ್, ತೆಲಂಗಾಣ, ರಾಯಲ್ಸೀಮಾ, ತಮಿಳುನಾಡು, ಪುದುಚೇರಿ, ರಾಜಸ್ಥಾನ, ವಿದರ್ಭಾ, ಅಂಡಮಾನ್, ನಿಕೋಬಾರ್ನಲ್ಲಿ ಸಾಮಾನ್ಯ ತಾಪಮಾನ 2-3 ಡಿಗ್ರಿಗಳಷ್ಟು ದಾಖಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ