AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವಸೇನೆಯ ನಾಯಕರನ್ನು ಕರೆತರಲು ಹೊರಟಿದ್ದ ಹೆಲಿಕಾಪ್ಟರ್​ ಪತನ

ಶಿವಸೇನೆಯ ಶಿಂಧೆ ಬಣದ ನಾಯಕಿಯನ್ನು ಕರೆತರಲು ಹೊರಟಿದ್ದ ಹೆಲಿಕಾಪ್ಟರ್ ಪತನಗೊಂಡಿದೆ. ಹೆಲಿಕಾಪ್ಟರ್​ ಲ್ಯಾಂಡಿಂಗ್ ವೇಳೆ ಸಮಸ್ಯೆ ಎದುರಿಸಿತು.

ಶಿವಸೇನೆಯ ನಾಯಕರನ್ನು ಕರೆತರಲು ಹೊರಟಿದ್ದ ಹೆಲಿಕಾಪ್ಟರ್​ ಪತನ
Follow us
ನಯನಾ ರಾಜೀವ್
|

Updated on: May 03, 2024 | 2:09 PM

ಶಿವಸೇನೆ(Shiv Sena)ಯ ನಾಯಕರನ್ನು ಕರೆತರಲು ಹೊರಟಿದ್ದ ಹೆಲಿಕಾಪ್ಟರ್​ ಪತನ(Helicopter Crash)ಗೊಂಡಿರುವ ಘಟನೆ ಮಹಾರಾಷ್ಟ್ರದ ರಾಯಗಢದಲ್ಲಿ ಶುಕ್ರವಾರ ನಡೆದಿದೆ. ಹೆಲಿಕಾಪ್ಟರ್‌ ಲ್ಯಾಂಡಿಂಗ್‌ ವೇಳೆ ವಾಲಿದ ಪರಿಣಾಮ ಇಬ್ಬರು ಪೈಲಟ್‌ಗಳು ಗಾಯಗೊಂಡಿದ್ದಾರೆ.

ಘಟನೆ ಸಂಭವಿಸಿದಾಗ ಚಾಪರ್ ಶಿವಸೇನೆಯ ಶಿಂಧೆ ಬಣದ (ಯುಬಿಟಿ) ನಾಯಕಿ ಸುಷ್ಮಾ ಅಂಧಾರೆಯನ್ನು ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ ಸಾರ್ವಜನಿಕ ರ್ಯಾಲಿಗಾಗಿ ಕರೆದೊಯ್ಯಲು ಹೋಗುತ್ತಿತ್ತು.

ಬೆಳಗ್ಗೆ 9.30ರ ಸುಮಾರಿಗೆ ಹೆಲಿಕಾಪ್ಟರ್‌ನ ಪೈಲಟ್‌ಗಳು ಅದನ್ನು ಮಹುಹಾದ್‌ನಲ್ಲಿರುವ ತಾತ್ಕಾಲಿಕ ಹೆಲಿಪ್ಯಾಡ್‌ನಲ್ಲಿ ಇಳಿಸಲು ಪ್ರಯತ್ನಿಸಿದಾಗ ಈ ದುರ್ಘಟನೆ ಸಂಭವಿಸಿದೆ. ಹೆಲಿಕಾಪ್ಟರ್ ವಾಲಿದ್ದು, ಪೈಲಟ್‌ಗಳಿಗೆ ಗಾಯಗಳಾಗಿವೆ.

ಲ್ಯಾಂಡಿಂಗ್ ಸಮಯದಲ್ಲಿ ಹೆಲಿಕಾಪ್ಟರ್ ತನ್ನ ನಿಯಂತ್ರಣವನ್ನು ಕಳೆದುಕೊಂಡಿತ್ತು, ಹೆಲಿಪ್ಯಾಡ್​ನಲ್ಲಿ ಧೂಳೆಬ್ಬಿಸುತ್ತಿತ್ತು, ದೊಡ್ಡದಾಗಿ ಶಬ್ದ ಮಾಡುತ್ತಾ ಸಮತೋಲನವನ್ನು ಕಳೆದುಕೊಂಡಿತ್ತು. ಘಟನೆಯಲ್ಲಿ ಹೆಲಿಕಾಪ್ಟರ್‌ನ ರೋಟರ್ ಬ್ಲೇಡ್‌ಗಳಿಗೂ ಹಾನಿಯಾಗಿದೆ.

ಮತ್ತಷ್ಟು ಓದಿ: ಕೀನ್ಯಾದಲ್ಲಿ ಮಿಲಿಟರಿ ಹೆಲಿಕಾಪ್ಟರ್ ಪತನ; ಸೇನಾ ಮುಖ್ಯಸ್ಥ ಸೇರಿ 9 ಯೋಧರು ಸಾವು

ಘಟನೆಯ ನಂತರ, ಪೊಲೀಸರು ಮತ್ತು ತುರ್ತು ತಂಡದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಪೈಲಟ್‌ಗಳನ್ನು ರಕ್ಷಿಸಿದರು ಮತ್ತು ಅವರಿಗೆ ಪ್ರಥಮ ಚಿಕಿತ್ಸೆ ನೀಡಿದರು.

ಮೈದಾನವು ಸಮತಟ್ಟಾಗಿರದ ಕಾರಣ ಘಟನೆ ಸಂಭವಿಸಿದೆ ಎನ್ನಲಾಗಿದೆ. ರಾಯಗಢ ಲೋಕಸಭಾ ಕ್ಷೇತ್ರಕ್ಕೆ ಮೇ 7 ರಂದು ಮೂರನೇ ಹಂತದಲ್ಲಿ ಮತದಾನ ನಡೆಯಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ