ಹಿಮಾಚಲ ಪ್ರದೇಶ(Himachal Pradesh)ದಲ್ಲಿ ಚೆನ್ನೈ(Chennai)ನ ಮಾಜಿ ಮೇಯರ್(Former Mayor) ಪುತ್ರನಿದ್ದ ಕಾರು(Car) ನಿಯಂತ್ರಣ ತಪ್ಪಿ ನದಿ(River)ಗೆ ಹಾರಿದ್ದು, ಘಟನೆ ಬಳಿಕ ಮಗ ನಾಪತ್ತೆಯಾಗಿದ್ದಾರೆ. ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿ ಚೆನ್ನೈನ ಮಾಜಿ ಮೇಯರ್ ಸೈದೈ ದುರೈಸಾಮಿ ಅವರ ಪುತ್ರ ಹಾಗೂ ಇತರೆ ಪ್ರಯಾಣಿಕರಿದ್ದ ಕಾರು ನದಿಗೆ ಹಾರಿತ್ತು.
ಭಾನುವಾರ (ಫೆಬ್ರವರಿ 4) ಈ ಘಟನೆ ನಡೆದಿದ್ದು, ವೆಟ್ರಿ ದುರೈಸಾಮಿ (45) ಅವರು ತಮ್ಮ ಸಹ ಪ್ರಯಾಣಿಕ ಗೋಪಿನಾಥ್ ಅವರೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಘಟನೆಯ ವೇಳೆ ಹಿಮಾಚಲ ಪ್ರದೇಶದ ಟಬೋ ನಿವಾಸಿ ತೆಂಜಿನ್ ಎಂಬಾತ ವಾಹನ ಚಲಾಯಿಸುತ್ತಿದ್ದ.
ದುರೈಸ್ವಾಮಿ ಮತ್ತು ಗೋಪಿನಾಥ್ ಸ್ಪಿತಿ ಕಣಿವೆಯಿಂದ ಹಿಂತಿರುಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಕಾರು ನದಿಗೆ ಬಿದ್ದಿದೆ.
ಅಧಿಕಾರಿಗಳು ಗೋಪಿನಾಥ್ ಅವರನ್ನು ರಕ್ಷಿಸಿದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದಲ್ಲಿ ಟೆಂಜಿನ್ ಸಾವನ್ನಪ್ಪಿದರೆ, ದುರೈಸಾಮಿಯನ್ನು ಹುಡುಕುವ ಪ್ರಯತ್ನಗಳು ನಡೆಯುತ್ತಿವೆ. ಹಿಮಾಚಲ ಪೊಲೀಸರಿಂದ ಪಡೆದ ಮಾಹಿತಿಯ ಪ್ರಕಾರ, ಇನ್ನೋವಾ ಕಾರು HP01AA-1111 NH-05 ನಲ್ಲಿ ಕಶಾಂಗ್ ಡ್ರೈನ್ ಬಳಿ ಸಟ್ಲೆಜ್ ನದಿಗೆ ಪಲ್ಟಿಯಾಗಿದೆ.
ಕಾರಿನಲ್ಲಿ ಪ್ರಯಾಣಿಸುತ್ತಿದ್ದ ತಿರುಪುರ ಮೂಲದ ಗೋಪಿನಾಥ್ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಚೆನ್ನೈ ಮೇಯರ್ ದುರೈಸಾಮಿ ಅವರ ಪುತ್ರ ವೆಟ್ರಿ ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಮಾಹಿತಿ ಪಡೆದ ಸೈದೈ ದುರೈಸಾಮಿ ಅವರು ತಮ್ಮ ಕುಟುಂಬದೊಂದಿಗೆ ಹಿಮಾಚಲಕ್ಕೆ ತೆರಳಿದ್ದಾರೆ. ವೆಟ್ರಿ ದುರೈಸಾಮಿ ಛಾಯಾಗ್ರಾಹಕ ಮತ್ತು ಚಲನಚಿತ್ರ ನಿರ್ದೇಶಕ. ಕಾರಿನ ಚಾಲಕನನ್ನು ಹಿಮಾಚಲ ಪ್ರದೇಶದ ಥಾಬೋ ಜಿಲ್ಲೆಯ ಲಾಹೌಲ್-ಸ್ಪಿಟಿ ಪ್ರದೇಶದ ನಿವಾಸಿ ಎಂದು ಗುರುತಿಸಲಾಗಿದೆ.
ಮತ್ತಷ್ಟು ಓದಿ: ಭುವನೇಶ್ವರ: ಬೈಕ್ಗೆ ಡಿಕ್ಕಿ ಹೊಡೆದು ಒಂದು ಕಿ.ಮೀವರೆಗೆ ಎಳೆದೊಯ್ದ ಕಾರು, ಎದೆ ಝಲ್ಲೆನಿಸುವ ವಿಡಿಯೋ
ಇದೀಗ ಚಾಲಕನ ಶವ ಪತ್ತೆಯಾಗಿದೆ. ಇದರೊಂದಿಗೆ, ಸೈದೈ ದುರೈಸಾಮಿ ಅವರ ಮಗನ ಸ್ಥಿತಿಯ ಬಗ್ಗೆ ಇನ್ನೂ ಖಚಿತವಾದ ಮಾಹಿತಿಯಿಲ್ಲ.
ಇನ್ನೋವಾ ಕಾರು ರಸ್ತೆಯಿಂದ ಸುಮಾರು 200 ಮೀಟರ್ ಕೆಳಗೆ ಸಟ್ಲೆಜ್ ನದಿಗೆ ಬಿದ್ದಿದೆ. ಈ ಕಾರು ನಿನ್ನೆ (ಫೆ.5) ಮಧ್ಯಾಹ್ನ ಹಿಮಾಚಲ ರಾಜ್ಯದ ಗಾಜಾದಿಂದ ಶಿಮ್ಲಾಕ್ಕೆ ತೆರಳಿದೆ ಎಂದು ವರದಿಯಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ