AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ: ಪಾಂಡೋಹ್ ಬಳಿ ಕುಲು-ಮಂಡಿ ಹೆದ್ದಾರಿ ಸಂಚಾರ ರದ್ದು; ರಸ್ತೆಯಲ್ಲಿ ಸಿಲುಕಿಕೊಂಡಿವೆ 700 ವಾಹನಗಳು

ಮಂಡಿ ಜಿಲ್ಲಾಧಿಕಾರಿ ಅರಿಂದಮ್ ಚೌಧರಿ ಅವರು ಮಂಡಿ-ಕುಲು ಹೆದ್ದಾರಿಯನ್ನು ದುರಸ್ತಿ ಮಾಡಲು ಪ್ರತಿದಿನ ಮೂರು ಗಂಟೆಗಳ ಕಾಲ ಸಂಚಾರಕ್ಕೆ ಸ್ಥಗಿತಗೊಳಿಸುವಂತೆ ಆದೇಶಿಸಿದ್ದಾರೆ. ಈ ಮಾನ್ಸೂನ್ ಪ್ರದೇಶದಲ್ಲಿ ಮೇಘಸ್ಫೋಟ ಮತ್ತು ಭೂಕುಸಿತದಿಂದಾಗಿ ಮಂಡಿ-ಕುಲ್ಲು ಹೆದ್ದಾರಿಯು 6-ಮೈಲ್ ಮತ್ತು 9-ಮೈಲುಗಳ ನಡುವೆ ಕೆಟ್ಟದಾಗಿ ಹಾನಿಗೊಳಗಾಗಿದೆ. ಈ ಹೆದ್ದಾರಿಯನ್ನು ದುರಸ್ತಿಗಾಗಿ ಪ್ರತಿದಿನ ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ರವರೆಗೆ ಮುಚ್ಚಲಾಗುವುದು ಎಂದು ಅವರು ಹೇಳಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ: ಪಾಂಡೋಹ್ ಬಳಿ ಕುಲು-ಮಂಡಿ ಹೆದ್ದಾರಿ ಸಂಚಾರ ರದ್ದು; ರಸ್ತೆಯಲ್ಲಿ ಸಿಲುಕಿಕೊಂಡಿವೆ 700 ವಾಹನಗಳು
ರಸ್ತೆಯಲ್ಲಿ ಸಿಕ್ಕಿಹಾಕಿಕೊಂಡ ವಾಹನಗಳುImage Credit source: Twitter
Follow us
ರಶ್ಮಿ ಕಲ್ಲಕಟ್ಟ
|

Updated on:Aug 22, 2023 | 1:57 PM

ದೆಹಲಿ ಆಗಸ್ಟ್ 22: ಹಿಮಾಚಲ ಪ್ರದೇಶದಲ್ಲಿ (Himachal Pradesh) ರಾತ್ರಿ ಸುರಿದ ಭಾರೀ ಮಳೆಯ ನಂತರ ಮಂಗಳವಾರ ಕುಲು-ಮಂಡಿ ರಾಷ್ಟ್ರೀಯ ಹೆದ್ದಾರಿಯನ್ನು (Kullu-Mandi national highway)  ಪಾಂಡೋಹ್ ಅಣೆಕಟ್ಟಿನ ಬಳಿ ರಸ್ತೆ ನಿರ್ಬಂಧಿಸಲಾಗಿದ್ದು, ಸುಮಾರು 700 ವಾಹನಗಳು ಸಿಲುಕಿಕೊಂಡಿವೆ. ಇತ್ತೀಚಿನ ಭೂಕುಸಿತದಲ್ಲಿ ಮುಖ್ಯ ಹೆದ್ದಾರಿ ಹಾನಿಗೊಳಗಾದ ನಂತರ ತಾತ್ಕಾಲಿಕ ಸಂಪರ್ಕ ರಸ್ತೆ ನಿರ್ಮಿಸಲಾಗಿದೆ. ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಪೊಲೀಸರು ಪಾಂಡೋ ಮತ್ತು 9 ಮೈಲ್‌ಗಳ ನಡುವೆ ವಾಹನಗಳನ್ನು ನಿಲ್ಲಿಸಿದರು. ಕಮಂದ್-ಬಜೌರಾ ರಸ್ತೆ ಮೂಲಕ ವಾಹನ ಸಂಚಾರವನ್ನು ಬದಲಾಯಿಸಲಾಗಿತ್ತು ಎಂದು ಮಂಡಿ ಪೊಲೀಸ್ ವರಿಷ್ಠಾಧಿಕಾರಿ ಸೌಮ್ಯ ಸಾಂಬಶಿವನ್ ಹೇಳಿದ್ದಾರೆ.

ಹೆದ್ದಾರಿಗೆ ಪರ್ಯಾಯ ಮಾರ್ಗದಲ್ಲಿ ಸಂಚಾರವನ್ನು ಪುನಃಸ್ಥಾಪಿಸುವುದು ಹವಾಮಾನ ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ ಎಂದು ಅವರು ಹೇಳಿದರು.

ಮಂಡಿ ಜಿಲ್ಲಾಧಿಕಾರಿ ಅರಿಂದಮ್ ಚೌಧರಿ ಅವರು ಮಂಡಿ-ಕುಲು ಹೆದ್ದಾರಿಯನ್ನು ದುರಸ್ತಿ ಮಾಡಲು ಪ್ರತಿದಿನ ಮೂರು ಗಂಟೆಗಳ ಕಾಲ ಸಂಚಾರಕ್ಕೆ ಸ್ಥಗಿತಗೊಳಿಸುವಂತೆ ಆದೇಶಿಸಿದ್ದಾರೆ. ಈ ಮಾನ್ಸೂನ್ ಪ್ರದೇಶದಲ್ಲಿ ಮೇಘಸ್ಫೋಟ ಮತ್ತು ಭೂಕುಸಿತದಿಂದಾಗಿ ಮಂಡಿ-ಕುಲ್ಲು ಹೆದ್ದಾರಿಯು 6-ಮೈಲ್ ಮತ್ತು 9-ಮೈಲುಗಳ ನಡುವೆ ಕೆಟ್ಟದಾಗಿ ಹಾನಿಗೊಳಗಾಗಿದೆ. ಈ ಹೆದ್ದಾರಿಯನ್ನು ದುರಸ್ತಿಗಾಗಿ ಪ್ರತಿದಿನ ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ರವರೆಗೆ ಮುಚ್ಚಲಾಗುವುದು ಎಂದು ಅವರು ಹೇಳಿದ್ದಾರೆ.

ವಿಪತ್ತು ನಿರ್ವಹಣಾ ಪ್ರಾಧಿಕಾರದ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದ ಪ್ರಕಾರ, ರಾಜ್ಯದಲ್ಲಿ ಮೂರು ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ 280 ಕ್ಕೂ ಹೆಚ್ಚು ರಸ್ತೆಗಳನ್ನು ನಿರ್ಬಂಧಿಸಲಾಗಿದೆ. ಮಂಡಿಯಲ್ಲಿ ಗರಿಷ್ಠ 162, ಶಿಮ್ಲಾದಲ್ಲಿ 31 ಮತ್ತು ಕುಲುವಿನಲ್ಲಿ 25 ರಸ್ತೆಗಳನ್ನು ನಿರ್ಬಂಧಿಸಲಾಗಿದೆ.

ಸೋಲನ್‌ನ ಬರೋಟಿವಾಲಾದ ಮನೆಗಳಲ್ಲಿ ಬಿರುಕು

ಸೋಲನ್ ಜಿಲ್ಲೆಯ ಬರೋತಿವಾಲಾ ಪ್ರದೇಶದಲ್ಲಿ, ಮಜ್ರಿ ಗ್ರಾಮದಲ್ಲಿ ಅವರ ಮನೆಗಳಲ್ಲಿ ಬಿರುಕು ಕಾಣಿಸಿಕೊಂಡ ನಂತರ 17 ಕುಟುಂಬಗಳು ನಿರಾಶ್ರಿತರಾಗಿದ್ದಾರೆ. ಕತಲ್ ಪಕೋಟಿ ಗ್ರಾಮದ ಮನೆಗಳಲ್ಲೂ ಬಿರುಕು ಕಾಣಿಸಿಕೊಂಡಿದೆ. ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದ್ದು, ಆಡಳಿತವು ಪರಿಸ್ಥಿತಿಯನ್ನು ಗಮನಿಸುತ್ತಿದೆ.

ಮುಂದಿನ ಮೂರು ದಿನಗಳಲ್ಲಿ ರಾಜ್ಯದಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮಂಗಳವಾರ ರಾಜ್ಯದಾದ್ಯಂತ ಯೆಲ್ಲೋ ಅಲರ್ಟ್‌ ಘೋಷಿಸಲಾಗಿದ್ದು, ಬುಧವಾರ ಮತ್ತು ಗುರುವಾರ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ ಎಂದು ಶಿಮ್ಲಾ ಮೆಟ್‌ ಸೆಂಟರ್‌ನ ನಿರ್ದೇಶಕ ಸುರೇಂದರ್‌ ಪಾಲ್‌ ತಿಳಿಸಿದ್ದಾರೆ.

ಇದನ್ನೂ ಓದಿಬ್ರಿಕ್ಸ್ ಶೃಂಗಸಭೆ: ದಕ್ಷಿಣ ಆಫ್ರಿಕಾದಲ್ಲಿ ಜಾಗತಿಕ ನಾಯಕರ ಭೇಟಿ, ಯಾವೆಲ್ಲ ವಿಷಯಗಳು ಚರ್ಚೆಯಾಗಲಿವೆ?

ಭಾರೀ ಮಳೆಯಿಂದಾಗಿ ಭೂಕುಸಿತಗಳು ಮತ್ತು ಹಠಾತ್ ಪ್ರವಾಹ ಉಂಟಾಗಬಹುದು. ಇದರಿಂದಾಗಿ ರಸ್ತೆಗಳ ದಿಗ್ಬಂಧನ ಮತ್ತು ಅಗತ್ಯ ಸೇವೆಗಳ ಅಡಚಣೆ ಉಂಟಾಗುತ್ತದೆ. ಭೂಕುಸಿತ ಪೀಡಿತ ಪ್ರದೇಶಗಳಿಂದ ದೂರವಿರಲು ಮತ್ತು ಅನಗತ್ಯ ಪ್ರಯಾಣವನ್ನು ತಪ್ಪಿಸಲು ಜನರಿಗೆ ಸೂಚಿಸಲಾಗಿದೆ.

ಈ ಬಾರಿಯ ಮುಂಗಾರು ಮಳೆಯಲ್ಲಿ ರಾಜ್ಯವು ₹ 8,099.46 ಕೋಟಿ ನಷ್ಟವನ್ನು ಅನುಭವಿಸಿದೆ ಮತ್ತು ರಾಜ್ಯ ಲೋಕೋಪಯೋಗಿ ಇಲಾಖೆಯು ₹ 2,712 ಕೋಟಿ ನಷ್ಟವನ್ನು ಅನುಭವಿಸಿದೆ. ಜಲಶಕ್ತಿ ಇಲಾಖೆ ₹1,860.52 ಕೋಟಿ ಹಾಗೂ ರಾಜ್ಯ ವಿದ್ಯುತ್ ಮಂಡಳಿ ₹1,707 ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಿದೆ. ಸಾವಿನ ಸಂಖ್ಯೆ 346 ಕ್ಕೆ ಏರಿದ್ದು, 2,216 ಮನೆಗಳು ಹಾನಿಗೊಳಗಾಗಿವೆ ಮತ್ತು 9,819 ಮನೆಗಳು ಭಾಗಶಃ ಹಾನಿಗೊಳಗಾಗಿವೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:56 pm, Tue, 22 August 23

KCET Result 2025: ಕರ್ನಾಟಕ ಸಿಇಟಿ ಫಲಿತಾಂಶ ಪ್ರಕಟ, ನೇರ ಪ್ರಸಾರ
KCET Result 2025: ಕರ್ನಾಟಕ ಸಿಇಟಿ ಫಲಿತಾಂಶ ಪ್ರಕಟ, ನೇರ ಪ್ರಸಾರ
ಸಿನಿಮಾ ರಿಲೀಸ್ ಎಂದು ಕನಸು ಕಂಡಿದ್ದರು, ಆದರೆ, ಮೊದಲ ದಿನ ಅವರೇ ಇಲ್ಲ
ಸಿನಿಮಾ ರಿಲೀಸ್ ಎಂದು ಕನಸು ಕಂಡಿದ್ದರು, ಆದರೆ, ಮೊದಲ ದಿನ ಅವರೇ ಇಲ್ಲ
ಆತಂಕಕ್ಕೊಳಗಾಗುವ ಅಗತ್ಯವಿಲ್ಲ, ಅದರೆ ಜನ ಎಚ್ಚರವಹಿಸುವ ಜರೂರತ್ತಿದೆ
ಆತಂಕಕ್ಕೊಳಗಾಗುವ ಅಗತ್ಯವಿಲ್ಲ, ಅದರೆ ಜನ ಎಚ್ಚರವಹಿಸುವ ಜರೂರತ್ತಿದೆ
ಲೋಕಕ್ಕೆ ಜಲ ವಾಯು ಗಂಡಾಂತರ, ಯುದ್ಧ ಭೀತಿ: ಕೋಡಿ ಶ್ರೀ ಸ್ಫೋಟಕ ಭವಿಷ್ಯ
ಲೋಕಕ್ಕೆ ಜಲ ವಾಯು ಗಂಡಾಂತರ, ಯುದ್ಧ ಭೀತಿ: ಕೋಡಿ ಶ್ರೀ ಸ್ಫೋಟಕ ಭವಿಷ್ಯ
ದಕ್ಷಿಣದ ನಳಂದ ವಿಶ್ವವಿದ್ಯಾಲಯ ಸ್ಥಾಪಿಸಲು ಒಂದೆಕರೆ ಜಮೀನು ನೀಡುವೆ: ಸುರೇಶ್
ದಕ್ಷಿಣದ ನಳಂದ ವಿಶ್ವವಿದ್ಯಾಲಯ ಸ್ಥಾಪಿಸಲು ಒಂದೆಕರೆ ಜಮೀನು ನೀಡುವೆ: ಸುರೇಶ್
ತಾಳಿ ಕಟ್ಟುವಾಗ ಮದುವೆ ಬೇಡವೆಂದ್ಲು, ಅದೇ ದಿನ ಪ್ರಿಯಕರನ ವಿವಾಹವಾದ್ಲು!
ತಾಳಿ ಕಟ್ಟುವಾಗ ಮದುವೆ ಬೇಡವೆಂದ್ಲು, ಅದೇ ದಿನ ಪ್ರಿಯಕರನ ವಿವಾಹವಾದ್ಲು!
IPL 2025: ಇದೇ ಕಾರಣಕ್ಕೆ ಟಿಮ್​ ಡೇವಿಡ್​ಗೆ ರನ್ನರ್ ನೀಡಲಾಗಿಲ್ಲ..!
IPL 2025: ಇದೇ ಕಾರಣಕ್ಕೆ ಟಿಮ್​ ಡೇವಿಡ್​ಗೆ ರನ್ನರ್ ನೀಡಲಾಗಿಲ್ಲ..!
Daily Devotional: ಕುಟುಂಬ ಕಲಹಕ್ಕೆ ಈ ಮಂತ್ರವೇ ಪರಿಹಾರ
Daily Devotional: ಕುಟುಂಬ ಕಲಹಕ್ಕೆ ಈ ಮಂತ್ರವೇ ಪರಿಹಾರ
ಸಮಾಜದಲ್ಲಿ ಈ ರಾಶಿಯವರ ಗೌರವ ಹೆಚ್ಚಾಗುತ್ತದೆ, ಸಹೋದ್ಯೋಗಿಗಳ ಬೆಂಬಲ
ಸಮಾಜದಲ್ಲಿ ಈ ರಾಶಿಯವರ ಗೌರವ ಹೆಚ್ಚಾಗುತ್ತದೆ, ಸಹೋದ್ಯೋಗಿಗಳ ಬೆಂಬಲ
ಅವಳೇ ನನ್ನ ಹೆಂಡತಿ, ತಾಳೆ ಕಟ್ಟಿದ್ದೇನೆ: ಮಡೆನೂರು ಮನು ಶಾಕಿಂಗ್ ಆಡಿಯೋ
ಅವಳೇ ನನ್ನ ಹೆಂಡತಿ, ತಾಳೆ ಕಟ್ಟಿದ್ದೇನೆ: ಮಡೆನೂರು ಮನು ಶಾಕಿಂಗ್ ಆಡಿಯೋ