ಗುವಾಹಟಿ: ಅಸ್ಸಾಂನ ನೂತನ ಮುಖ್ಯಮಂತ್ರಿಯಾಗಿ ಹಿಮಂತ ಬಿಸ್ವ ಶರ್ಮಾ ಅವರನ್ನು ಬಿಜೆಪಿ ಹೈಕಮಾಂಡ್ ಆಯ್ಕೆ ಮಾಡಿದೆ. ಭಾನುವಾರ ಮಧ್ಯಾಹ್ನ ಕೇಂದ್ರ ಸಚಿವ ನರೇಂದ್ರಸಿಂಗ್ ತೋಮರ್ ನೂತನ ಮುಖ್ಯಮಂತ್ರಿಯ ಹೆಸರು ಘೋಷಣೆ ಮಾಡಿದ್ದಾರೆ. ಇಂದು ಗುವಾಹಟಿಯಲ್ಲಿ ಶಾಸಕಾಂಗದ ಪಕ್ಷ ಸಭೆ ನಡೆದ ನಂತರ ಮುಖ್ಯಮಂತ್ರಿಯಾಗಿ ಶರ್ಮಾ ಅವರನ್ನು ಆಯ್ಕೆ ಮಾಡಲಾಗಿದೆ. ನಾಳೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ.
2014 ರ ಚುನಾನಣೆಗೆ ಮುನ್ನ ಬಿಜೆಪಿ ಸೇರಿದವರಾಗಿದ್ದಾರೆ ಶರ್ಮಾ. ಈಶಾನ್ಯ ಪ್ರದೇಶಗಳಲ್ಲಿ ಪಕ್ಷದ ಮುಖ್ಯ ಟ್ರಬಲ್ ಶೂಟರ್ ಆಗಿದ್ದಾರೆ ಇವರು. ಕಳೆದ ತಿಂಗಳು ಹಿಂದೂಸ್ತಾನ್ ಟೈಮ್ಸ್ ನಡೆಸಿದ ಸಂದರ್ಶನದಲ್ಲಿ ನೀವು ಮುಖ್ಯಮಂತ್ರಿಯಾಗುತ್ತಿದ್ದೀರಾ ಎಂದು ಕೇಳಿದಾಗ ಅಂತಿಮ ನಿರ್ಧಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವರದ್ದಾಗಿರುತ್ತದೆ ಎಂದು ಹೇಳಿದ್ದರು.
Himanta Biswa Sarma elected unanimously as leader of the BJP Legislature Party
— Press Trust of India (@PTI_News) May 9, 2021
ಅಸ್ಸಾಂನ ಮುಖ್ಯಮಂತ್ರಿಯಾಗಿದ್ದ ಸರ್ಬಾನಂದ ಸೋನೊವಾಲ್ ನಂತರ ಈಶಾನ್ಯ ರಾಜ್ಯದಲ್ಲಿ ಮುಖ್ಯಮಂತ್ರಿ ಗಾದಿಯೇರಿದ ಎರಡನೇ ಬಿಜೆಪಿ ನಾಯಕರಾಗಿದ್ದಾರೆ ಶರ್ಮಾ.
श्री हेमंत बिस्वा सरमा (@himantabiswa ) जी को असम भाजपा विधायक दल का नेता चुने जाने पर हार्दिक बधाई एवं शुभकामनाएं…@BJP4Assam pic.twitter.com/Sljc2zsgFp
— Narendra Singh Tomar (@nstomar) May 9, 2021
ಈ ಹಿಂದೆ ಕಾಂಗ್ರೆಸ್ ನಾಯಕರಾಗಿದ್ದ ಶರ್ಮಾ ಅಸ್ಸಾಂನಲ್ಲಿ ಬಿಜೆಪಿ ಎರಡನೇ ಬಾರಿ ಅಧಿಕಾರಕ್ಕೇರಲು ಶ್ರಮವಹಿಸಿದರು. ಚುನಾವಣಾ ಆಯೋಗದ ಮಾಹಿತಿ ಪ್ರಕಾರ ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 60 ಸೀಟುಗಳನ್ನು ಗಳಿಸಿದೆ. 126 ಸೀಟುಗಳಿರುವ ವಿಧಾನಸಭೆಯಲ್ಲಿ ಮೈತ್ರಿ ಪಕ್ಷಗೊಳೊಂದಿಗೆ ಬಿಜೆಪಿ 75 ಸೀಟುಗಳನ್ನು ಗಳಿಸಿ ಎರಡನೇ ಬಾರಿ ಅಧಿಕಾರಕ್ಕೇರಿದೆ. ಬಿಜೆಪಿ ಮೈತ್ರಿ ಪಕ್ಷಗಳಾದ ಅಸೋಮ್ ಗಣ ಪರಿಷತ್ (ಎಜಿಪಿ) ಮತ್ತು ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ (ಯುಪಿಪಿಎಲ್) ಕ್ರಮವಾಗಿ 9 ಮತ್ತು 6 ಸ್ಥಾನಗಳನ್ನು ಗೆದ್ದಿವೆ .
Assam | Himanta Biswa Sarma elected as the leader of the BJP legislative party in Assam: Union Minister & BJP leader Narendra Singh Tomar pic.twitter.com/Ati3guvJW3
— ANI (@ANI) May 9, 2021
ಶನಿವಾರ ಹಾಲಿ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಮತ್ತು ಹಿಮಂತ ಬಿಸ್ವ ಶರ್ಮಾ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನು ಭೇಟಿ ಮಾಡಿದ್ದರು. ನಡ್ಡಾ ಅವರ ಮನೆಯಲ್ಲಿ ಎರಡು ಸುತ್ತಿನ ಸಭೆ ನಡೆದಿದೆ. ಸಭೆ ಮುಗಿದ ನಂತರ ಸೋನೊವಾಲ್ ಮತ್ತು ಶರ್ಮಾ ವಿಶೇಷ ವಿಮಾನ ಮೂಲಕ ರಾತ್ರಿ ಗುವಾಹಟಿಗೆ ತಲುಪಿದ್ದರು.
(Himanta Biswa Sarma chosen as next chief minister of Assam announcement made by Union minister Narendra Singh Tomar)
ಇದನ್ನೂ ಓದಿ: ಸರ್ಬಾನಂದ ಸೋನೊವಾಲ್ ಅಥವಾ ಹಿಮಾಂತ ಬಿಸ್ವ ಶರ್ಮಾ: ಅಸ್ಸಾಂ ಮುಖ್ಯಮಂತ್ರಿ ಸ್ಥಾನ ಯಾರಿಗೆ?
Published On - 2:07 pm, Sun, 9 May 21