ದೇವಸ್ಥಾನ, ನೀರು, ಸ್ಮಶಾನದ ನಡುವೆ ಯಾವ ವ್ಯತ್ಯಾಸವೂ ಇರಬಾರದು; ಆರ್​​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್

ಸ್ವಯಂ ಸೇವಕ ಸಂಘದಲ್ಲಿ ಯಾವುದೇ ದುರಾಸೆಗೆ ಜಾಗವಿಲ್ಲ. ಸಂಘಕ್ಕೆ ಸೇರಿದವರಿಗೆ ಏನೂ ಸಿಗುವುದಿಲ್ಲ. ಕೆಲವೊಮ್ಮೆ ನಮ್ಮ ಕೈಲಿದ್ದುದೇ ಹೋಗುತ್ತದೆ. ಆದರೂ ಸಂಘಕ್ಕೆ ಸೇರುವವರ ಸಂಖ್ಯೆ ಕಡಿಮೆಯಾಗಿಲ್ಲ. ಇದು ಅವರಿಗೆ ತೃಪ್ತಿ ಕೊಡುತ್ತದೆ. ಇದರಲ್ಲಿ ಸೇರುವವರು ತಮ್ಮ ಕೆಲಸವನ್ನು ಆನಂದಿಸುತ್ತಾರೆ ಎಂದು ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ದೇವಸ್ಥಾನ, ನೀರು, ಸ್ಮಶಾನದ ನಡುವೆ ಯಾವ ವ್ಯತ್ಯಾಸವೂ ಇರಬಾರದು; ಆರ್​​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್
Mohan Bhagwat

Updated on: Aug 27, 2025 | 7:24 PM

ನವದೆಹಲಿ, ಆಗಸ್ಟ್ 27: ದೆಹಲಿಯಲ್ಲಿ ನಡೆಯುತ್ತಿರುವ ಆರ್‌ಎಸ್‌ಎಸ್‌ನ (RSS) ಶತಮಾನೋತ್ಸವ ಆಚರಣೆಯಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಅವರು, ದೇವಾಲಯಗಳು, ನೀರು ಮತ್ತು ಸ್ಮಶಾನದ ನಡುವೆ ಯಾವುದೇ ವ್ಯತ್ಯಾಸ ಇರಬಾರದು. ಹಿಂದುತ್ವ ಎಂದರೇನು? ಎಂದು ಸಂಕ್ಷಿಪ್ತವಾಗಿ ಹೇಳುವುದಾದರೆ ಸತ್ಯ ಮತ್ತು ಪ್ರಾಮಾಣಿಕತೆ ಎಂದು ಹೇಳಬಹುದು. ನಮ್ಮ ಹಿಂದೂಸ್ಥಾನದ ಗುರಿ ಲೋಕ ಕಲ್ಯಾಣ ಎಂದು ಹೇಳಿದ್ದಾರೆ.

ಇತರ ಧರ್ಮಗಳ ಬಗ್ಗೆ ಕೆಟ್ಟದಾಗಿ ಮಾತನಾಡುವುದು ಧರ್ಮವಲ್ಲ. ಆರ್‌ಎಸ್‌ಎಸ್‌ನಂತೆ ಯಾರೂ ವಿರೋಧವನ್ನು ಎದುರಿಸಿಲ್ಲ ಎಂದು ಹೇಳಿದ್ದಾರೆ. ಆರ್‌ಎಸ್‌ಎಸ್ ಬಗ್ಗೆ ನಿಜವಾದ ಮತ್ತು ಸರಿಯಾದ ಮಾಹಿತಿಯನ್ನು ನೀಡುವುದು ಈ ಉಪನ್ಯಾಸ ಸರಣಿಯ ಉದ್ದೇಶವಾಗಿದೆ. ಆರ್​ಎಸ್​ಎಸ್​ ವಿಶ್ವದ ಅತಿದೊಡ್ಡ NGO ಆಗಿದೆ. ಇದು 100 ವರ್ಷಗಳ ಸಮರ್ಪಣೆಯ ಇತಿಹಾಸವನ್ನು ಹೊಂದಿದೆ ಎಂದು ಅವರು ಹೇಳಿದ್ದಾರೆ.


ಸಂಘದಲ್ಲಿ ಜನರಿಗೆ ಏನೂ ಸಿಗುವುದಿಲ್ಲ, ಅದರ ಬದಲಿಗೆ ಅವರ ಬಳಿ ಇರುವುದೂ ಹೋಗುತ್ತದೆ. ಸ್ವಯಂಸೇವಕರು ತಮ್ಮ ಕೆಲಸವನ್ನು ಆನಂದಿಸುತ್ತಾರೆ. ಏಕೆಂದರೆ ಅವರು ತಮ್ಮ ಕೆಲಸವನ್ನು ಇಷ್ಟಪಟ್ಟು ಮಾಡುತ್ತಾರೆ. ಅವರ ಕೆಲಸವು ಲೋಕ ಕಲ್ಯಾಣಕ್ಕೆ ಸಮರ್ಪಿತವಾಗಿದೆ ಎಂಬ ಕಾರಣದಿಂದ ಅವರು ಸಂಘಕ್ಕೆ ಸೇರಿ ಖುಷಿಯಿಂದ ಕೆಲಸ ಮಾಡುತ್ತಾರೆ. ಜಗತ್ತು ಒಪ್ಪಂದಗಳ ಮೇಲೆ ಅಲ್ಲ, ಸ್ವಾರ್ಥದ ಮೇಲೆ ನಡೆಯುತ್ತದೆ ಎಂದು ಮೋಹನ್ ಭಾಗವತ್ ಹೇಳಿದ್ದಾರೆ.


ಇದನ್ನೂ ಓದಿ: ಆರ್​ಎಸ್​ಎಸ್​ ಶತಮಾನೋತ್ಸವ: ಇಂದಿನ ಕಾರ್ಯಕ್ರಮದ ವಿವರ, ಲೈವ್ ಲಿಂಕ್ ಇಲ್ಲಿದೆ

ಆರ್‌ಎಸ್‌ಎಸ್ ಹಿಂದೂ ರಾಷ್ಟ್ರದ ಜೀವನ ಧ್ಯೇಯದ ಅಭಿವೃದ್ಧಿ. ಸತ್ಯ ಮತ್ತು ಪ್ರೀತಿಯೇ ಹಿಂದೂ ಧರ್ಮ. ಜಗತ್ತು ಅನ್ಯೋನ್ಯತೆಯ ಮೇಲೆ ನಡೆಯುತ್ತದೆಯೇ ವಿನಃ ಒಪ್ಪಂದಗಳ ಮೇಲೆ ಅಲ್ಲ. ಮಾನವನ ಸಂಬಂಧಗಳು ಒಪ್ಪಂದಗಳು ಮತ್ತು ವಹಿವಾಟುಗಳ ಮೇಲೆ ಆಧಾರಿತವಾಗಿರಬಾರದು, ಅದು ಅನ್ಯೋನ್ಯತೆಯ ಮೇಲೆ ಆಧಾರಿತವಾಗಿರಬೇಕು. ಗುರಿಗೆ ಸಮರ್ಪಿತವಾಗಿರುವುದು ಸಂಘದ ಕೆಲಸದ ಆಧಾರವಾಗಿದೆ ಎಂದು ಸರಸಂಘಚಾಲಕ್ ಮೋಹನ್ ಭಾಗವತ್ ಹೇಳಿದ್ದಾರೆ.


ಇದನ್ನೂ ಓದಿ: ಆರ್​ಎಸ್​ಎಸ್​ ಶತಮಾನೋತ್ಸವ ಪ್ರಯುಕ್ತ ನಾಳೆಯಿಂದ 3 ದಿನ ವಿಶೇಷ ಕಾರ್ಯಕ್ರಮ ಆಯೋಜನೆ

ಕಳೆದ 100 ವರ್ಷಗಳಲ್ಲಿ ಸಂಘದ ಪರಿಸ್ಥಿತಿ ಬದಲಾಗಿದೆ. ಇಂದು ಅನುಕೂಲಕರ ವಾತಾವರಣವಿದೆ. ಭಾರತ ಮತ್ತು ಸಂಘದ ವಿಶ್ವಾಸಾರ್ಹತೆ ಎಷ್ಟಿದೆಯೆಂದರೆ ಸಮಾಜವು ಅವರ ಮಾತನ್ನು ಕೇಳುತ್ತದೆ. ಇಂದು, ಸಮಾಜದಲ್ಲಿ ಕಂಡುಬರುವ ಕೆಟ್ಟದ್ದಕ್ಕಿಂತ 40 ಪಟ್ಟು ಹೆಚ್ಚು ಒಳ್ಳೆಯದು ಇದೆ. ಆರ್‌ಎಸ್‌ಎಸ್ ಸ್ಥಾಪನೆಯ ಉದ್ದೇಶ ಭಾರತಕ್ಕಾಗಿ, ಅದರ ಕಾರ್ಯನಿರ್ವಹಣೆ ಭಾರತಕ್ಕಾಗಿ, ಮತ್ತು ಅದರ ಮಹತ್ವ ಭಾರತ ‘ವಿಶ್ವಗುರು’ ಆಗುವುದರಲ್ಲಿದೆ. ಜಗತ್ತಿಗೆ ಭಾರತದ ಕೊಡುಗೆಯ ಸಮಯ ಬಂದಿದೆ ಎಂದು ಮೋಹನ್ ಭಾಗವತ್ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ