AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಹಾರದಲ್ಲಿ ಚಿನ್ನದ ಸರ ಬೇಕೆಂದು ಅತ್ತೆ-ಮಾವನಿಂದ ಸೊಸೆಯ ಕೊಲೆ

ನೊಯ್ಡಾದಲ್ಲಿ ನಿಕ್ಕಿ ಎಂಬ ಮಹಿಳೆಯನ್ನು ವರದಕ್ಷಿಣೆಗಾಗಿ ಕೊಲೆ ಮಾಡಿರುವ ಘಟನೆ ಇಡೀ ದೇಶವನ್ನು ಬೆಚ್ಚಿ ಬೀಳಿಸಿದೆ. ಇದರ ಬೆನ್ನಲ್ಲೇ ಬಿಹಾರದಲ್ಲಿ ಅತ್ತೆ-ಮಾವ ಚಿನ್ನದ ಸರಕ್ಕಾಗಿ ತಮ್ಮ ಸೊಸೆಯನ್ನು ಕೊಲೆ ಮಾಡಿದ್ದಾರೆ. ಖಗಾರಿಯಾದ ಬರ್ಖಂಡಿ ಟೋಲಾದ 20 ವರ್ಷದ ಮಹಿಳೆ ಡಿ.ಸಿ ಕುಮಾರಿಯನ್ನು ವರದಕ್ಷಿಣೆಗಾಗಿ ಅತ್ತೆ-ಮಾವಂದಿರು ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ.

ಬಿಹಾರದಲ್ಲಿ ಚಿನ್ನದ ಸರ ಬೇಕೆಂದು ಅತ್ತೆ-ಮಾವನಿಂದ ಸೊಸೆಯ ಕೊಲೆ
Gold Chain
ಸುಷ್ಮಾ ಚಕ್ರೆ
|

Updated on:Aug 27, 2025 | 5:17 PM

Share

ನೊಯ್ಡಾ, ಆಗಸ್ಟ್ 27: ಉತ್ತರ ಪ್ರದೇಶದ ನೊಯ್ಡಾದಲ್ಲಿ (Noida) ನಿಕ್ಕಿ ಎಂಬ ಮಹಿಳೆಯನ್ನು ಆಕೆಯ ಗಂಡ ಹಾಗೂ ಅತ್ತೆ ಸೇರಿ ಬೆಂಕಿ ಹಚ್ಚಿ ಕೊಂದಿದ್ದರು. ವರದಕ್ಷಿಣೆಗಾಗಿ (Dowry) ನಡೆದಿದ್ದ ಈ ಕೊಲೆಯ ಬೆನ್ನಲ್ಲೇ ಅದೇ ರೀತಿಯ ಇನ್ನೊಂದು ಘಟನೆ ಬಿಹಾರದಲ್ಲಿ ನಡೆದಿದೆ. ಬಿಹಾರದ ಖಗಾರಿಯಾ ಜಿಲ್ಲೆಯಲ್ಲಿ 20 ವರ್ಷದ ಮಹಿಳೆಯಾದ ಡಿ.ಸಿ ಕುಮಾರಿಯನ್ನು ಅವರ ಅತ್ತೆ-ಮಾವಂದಿರು ವರದಕ್ಷಿಣೆಗಾಗಿ ಕೊಂದಿದ್ದಾರೆ. ಕುಮಾರಿಯನ್ನು ಮದುವೆ ಮಾಡಿಕೊಡುವಾಗ ಆಕೆಯ ತವರುಮನೆಯವರು ಭರವಸೆ ನೀಡಿದ್ದ ಚಿನ್ನದ ಸರವನ್ನು ಆಕೆಯ ಕುಟುಂಬದವರು ನೀಡಿಲ್ಲ ಎಂಬ ಕಾರಣಕ್ಕೆ ಆಕೆಯ ಕತ್ತು ಹಿಸುಕಿ ನಂತರ ನೇಣು ಹಾಕಲಾಗಿದೆ.

ಆ ಮಹಿಳೆ ಸುಮಾರು 1 ವರ್ಷದ ಹಿಂದೆ ವಿಭೀಷಣ್ ಯಾದವ್ ಅವರನ್ನು ವಿವಾಹವಾಗಿದ್ದರು. ಮುಂಗೇರ್ ನಿವಾಸಿಯಾಗಿರುವ ಆಕೆಯ ತಂದೆ ಜಾಗೋ ಯಾದವ್ ತಮ್ಮ ಮಗಳ ಪತಿ ಮತ್ತು ಆಕೆಯ ಅತ್ತೆ-ಮಾವಂದಿರು ವರದಕ್ಷಿಣೆಗಾಗಿ ಆಕೆಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿದ್ದಾರೆ. ಸ್ವಲ್ಪ ಸಮಯದ ನಂತರ ಅವರ ಬೇಡಿಕೆಗಳನ್ನು ಈಡೇರಿಸುವುದಾಗಿ ನಾನು ಆಕೆಯ ಅತ್ತೆ-ಮಾವಂದಿರಿಗೆ ಭರವಸೆ ನೀಡಿದ್ದೆ. ಆದರೆ ಅವರು ಒಪ್ಪಲಿಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ನೊಯ್ಡಾ ವರದಕ್ಷಿಣೆ ಕಿರುಕುಳ ಪ್ರಕರಣ; ನಿಕ್ಕಿಯನ್ನು ಸುಟ್ಟು ಕೊಲ್ಲಲು 1 ತಿಂಗಳಿಂದ ರೆಡಿಯಾಗಿತ್ತು ಪ್ಲಾನ್!

ಮೃತ ಮಹಿಳೆಯ ಪತಿ ಕೃಷಿ ಮಾಡುತ್ತಿದ್ದರು. ಆದರೆ, ನಂತರ ಗಾಂಜಾ ಮತ್ತು ಮದ್ಯ ಮಾರಾಟ ಮಾಡಲು ಪ್ರಾರಂಭಿಸಿದ್ದ ಎಂದು ಆರೋಪಿಸಲಾಗಿದೆ. ಆಕೆಯ ಸಹೋದರ ಸಂದೀಪ್ ಕುಮಾರ್, ತನ್ನ ಸಹೋದರಿಯನ್ನು ಆಕೆಯ ಅತ್ತೆ-ಮಾವಂದಿರು ಆಕೆಯ ದೇಹವನ್ನು ನೇಣು ಹಾಕುವ ಮೊದಲು ಕ್ರೂರವಾಗಿ ಥಳಿಸಿ ಕೊಂದಿದ್ದಾರೆ ಎಂದು ಆರೋಪಿಸಿದ್ದಾರೆ. ಆಕೆಯ ದೇಹದಾದ್ಯಂತ ಗಾಯದ ಗುರುತುಗಳಿತ್ತು ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:16 pm, Wed, 27 August 25

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ