ಬೆಲೆ ಕುಸಿತ; ಕೊಯಂಬತ್ತೂರ್​​ನಲ್ಲಿ ಟನ್​​ಗಟ್ಟಲೆ ಟೊಮ್ಯಾಟೊ ರಸ್ತೆಗೆ ಸುರಿದ ರೈತರು

| Updated By: ರಶ್ಮಿ ಕಲ್ಲಕಟ್ಟ

Updated on: Jul 19, 2022 | 2:12 PM

1 ಎಕರೆ ಜಮೀನಲ್ಲಿ ಟೊಮ್ಯಾಟೊ ಬೆಳೆ ಬೆಳೆಯಲು75,000 ರೂ ಖರ್ಚಾಗುತ್ತದೆ ಎಂದು ರೈತ ಆರ್ ಪೆರಿಯಸ್ವಾಮಿ ಹೇಳಿದ್ದಾರೆ. ಹೀಗಿರುವಾಗ 1 ಕೆಜಿಗೆ 15ರೂ ಮಾರಾಟವಾದರೆ ಏನು ಸಿಗುತ್ತದೆ?

ಬೆಲೆ ಕುಸಿತ; ಕೊಯಂಬತ್ತೂರ್​​ನಲ್ಲಿ ಟನ್​​ಗಟ್ಟಲೆ ಟೊಮ್ಯಾಟೊ ರಸ್ತೆಗೆ ಸುರಿದ ರೈತರು
ಟೊಮ್ಯಾಟೊ
Follow us on

15 ಕೆಜಿ ಟೊಮ್ಯಾಟೊ (tomatoes) ಬಾಕ್ಸ್ ಬೆಲೆ ರೂ 50 ಆಗಿ ಇಳಿದಿದ್ದು, ಭಾರಿ ನಷ್ಟ ಅನುಭವಿಸುತ್ತಿರುವ ಕೊಯಂಬತ್ತೂರ್​​ನ  (Coimbatore) ರೈತರು ಸೋಮವಾರ ಟನ್​​ಗಟ್ಟಲೆ ಟೊಮ್ಯಾಟೊವನ್ನು ರಸ್ತೆಗೆ ಸುರಿದಿದ್ದಾರೆ. ಟೊಮ್ಯಾಟೊ ಖರೀದಿ ಮಾಡಲು ಯಾರೂ ಇಲ್ಲ, ಹೀಗಾಗಿ ಟೊಮ್ಯಾಟೊ ದರ ಕೂಡಾ ಕೆಳಕ್ಕೆ ಇಳಿದಿದ.  ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಪ್ರಕಾರ, 1 ಎಕರೆ ಜಮೀನಲ್ಲಿ ಟೊಮ್ಯಾಟೊ ಬೆಳೆ ಬೆಳೆಯಲು75,000 ರೂ ಖರ್ಚಾಗುತ್ತದೆ ಎಂದು ರೈತ ಆರ್ ಪೆರಿಯಸ್ವಾಮಿ ಹೇಳಿದ್ದಾರೆ. ಹೀಗಿರುವಾಗ 1 ಕೆಜಿಗೆ 15ರೂ ಮಾರಾಟವಾದರೆ ಏನು ಸಿಗುತ್ತದೆ. ಖರೀದಿದಾರರು ಬರುತ್ತಿಲ್ಲ ಹೀಗಿರುವಾಗ ರಸ್ತೆಗೆ ಸುರಿಯುವುದು ಬಿಟ್ಟರೆ ನಮಗೆ ಬೇರೆ ಆಯ್ಕೆ ಇಲ್ಲ ಎಂದಿದ್ದಾರೆ.

ಪ್ರಸ್ತುತ ಪ್ರದೇಶದಲ್ಲಿ ಟೊಮ್ಯಾಟೊ ಬೆಳೆ ಬೆಳೆಯಲು ಸೂಕ್ತವಾದ ಹವಾಮಾನ ಇದ್ದ ಕಾರಣ ಈ ಬಾರಿ ಫಸಲು ಚೆನ್ನಾಗಿತ್ತು. ಆದರೆ ಬೆಲೆ ಇಳಿಕೆಯಿಂದಾಗಿ ರೈತರು ಗ್ರಾಹಕರಿಗೆ ಕೆಜಿಗೆ 10 ರೂನಂತೆ ಮಾರಬೇಕಾಯಿತು. ಬೆಲೆ ಇಳಿಕೆಯಿಂದಾಗಿ ರೈತರು ಮಧ್ಯವರ್ತಿ ಅಥವಾ ಮಾರುಕಟ್ಟೆ ಏಜೆಂಟ್ ಗಳನ್ನು ಬಳಸದೆ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಿದ್ದಾರೆ. ಟೊಮ್ಯಾಟೊ ಕೊಳೆಯುವ ಮುನ್ನ ಅದನ್ನು ಖಾಲಿ ಮಾಡುವುದಕ್ಕಾಗಿ ರೈತರೇ ಗ್ರಾಹಕರ ಮನೆ ಬಾಗಿಲಿಗೆ  ಹೋಗಿ ಮಾರಿದ್ದಾರೆ.

ಪ್ರತೀ  ವರ್ಷ ಕೊಯಂಬತ್ತೂರ್​​ ನ ಧರ್ಮಪುರಿ ಪ್ರದೇಶದಲ್ಲಿ 60 ಟನ್​​ಗಳಿಗಿಂತಲ ಹೆಚ್ಚು  ಟೊಮ್ಯಾಟೊ ಬೆಳೆಯಲಾಗುತ್ತದೆ. ಈ ವರ್ಷದ ಆರಂಭದಲ್ಲಿ  ಟೊಮ್ಯಾಟೊ ಬೆಲೆ ಏರಿಕೆಯಾಗಿದ್ದು ಇದು ರೈತರಲ್ಲಿ  ಹುರುಪು ಹುಟ್ಟಿಸಿತ್ತು. ಇದೀಗ ಬೆಲೆ ಇಳಿಕೆಯಿಂದಾಗಿ ರೈತರ ಸಮಸ್ಯೆ ಎದುರಿಸುತ್ತಿದ್ದಾರೆ.

 

Published On - 1:53 pm, Tue, 19 July 22