2021ರಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚು ಭಾರತೀಯರು ಪೌರತ್ವ ತ್ಯಜಿಸಿದ್ದಾರೆ: ಕೇಂದ್ರ ಗೃಹ ಸಚಿವಾಲಯ

Parliament Monsoon Session ಹಣದುಬ್ಬರ, ಬೆಲೆ ಏರಿಕೆ ಸೇರಿದಂತೆ ದೇಶದಲ್ಲಿ ಸಾಮಾನ್ಯ ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ವಿಪಕ್ಷಗಳು ಸದನದಲ್ಲಿ ದನಿಯೆತ್ತಿ ಘೋಷಣೆ ಕೂಗಿದ್ದು, ರಾಜ್ಯಸಭೆ ಮತ್ತು ಲೋಕಸಭೆಯ ಕಲಾಪಗಳನ್ನು ನಾಳೆ 11ಗಂಟೆವರೆಗೆ ಮುಂದೂಡಲಾಗಿದೆ.

2021ರಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚು ಭಾರತೀಯರು ಪೌರತ್ವ ತ್ಯಜಿಸಿದ್ದಾರೆ: ಕೇಂದ್ರ ಗೃಹ ಸಚಿವಾಲಯ
ಮುಂಗಾರು ಅಧಿವೇಶನ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jul 19, 2022 | 6:39 PM

2021ರಲ್ಲಿ 1,63,370 ಮಂದಿ ಭಾರತೀಯ ಪೌರತ್ವ (Indian citizenship) ತ್ಯಜಿಸಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯ (home ministry) ಲೋಕಸಭೆಯಲ್ಲಿ ಹೇಳಿದೆ. 20210ರಲ್ಲಿ 85,256 ಮತ್ತು 2019ರಲ್ಲಿ 1,44,017 ಭಾರತೀಯರು ಪೌರತ್ವ ತ್ಯಜಿಸಿದ್ದಾರೆ. 3 ವರ್ಷಗಳಲ್ಲಿ ಒಟ್ಟು 3,92,643 ಜನರು ಭಾರತೀಯ ಪೌರತ್ವ ತ್ಯಜಿಸಿದ್ದಾರೆ ಎಂದು ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್ ಲೋಕಸಭೆಯಲ್ಲಿ ಮಾಹಿತಿ ನೀಡಿದ್ದಾರೆ. ಮುಂಗಾರು ಅಧಿವೇಶನದ ಎರಡನೇ ದಿನವಾದ ಇಂದು ಹಣದುಬ್ಬರ, ಬೆಲೆ ಏರಿಕೆ ಸೇರಿದಂತೆ ದೇಶದಲ್ಲಿ ಸಾಮಾನ್ಯ ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ವಿಪಕ್ಷಗಳು ಸದನದಲ್ಲಿ ದನಿಯೆತ್ತಿ ಘೋಷಣೆ ಕೂಗಿದ್ದು, ರಾಜ್ಯಸಭೆ ಮತ್ತು ಲೋಕಸಭೆಯ ಕಲಾಪಗಳನ್ನು ನಾಳೆ 11ಗಂಟೆವರೆಗೆ ಮುಂದೂಡಲಾಗಿದೆ.

ಹಣದುಬ್ಬರ, ಬೆಲೆ ಏರಿಕೆ  ಮೊದಲಾದ ಸಮಸ್ಯೆಗಳನ್ನು ಉಲ್ಲೇಖಿಸಿ ವಿಪಕ್ಷಗಳು  ಸಂಸತ್​​ನ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಿವೆ . ಈ ಪ್ರತಿಭಟನೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡಾ ಭಾಗಿಯಾಗಿದ್ದಾರೆ.

ಪ್ರಧಾನಿ ಮೋದಿ ಮತ್ತು ಬಿಜೆಪಿ ರೈತರ ಕಲ್ಯಾಣಕ್ಕೆ ಬದ್ಧವಾಗಿದೆ:  ಕೃಷಿ ಸಚಿವ

ವಿಪಕ್ಷಗಳು ರೈತರು ಮತ್ತು ಜನ ಸಾಮಾನ್ಯರ ಸಮಸ್ಯೆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಅವರು ಕೇವಲ ರಾಜಕೀಯ ಆಟದಲ್ಲಿ, ಅಭಿವೃದ್ಧಿ ತಡೆಯುವಲ್ಲಿ ಮತ್ತು ಸಾರ್ವಜನಿಕರ ಕಲ್ಯಾಣಕ್ಕೆ ಅಡಚಣೆ ಉಂಟು ಮಾಡುವಲ್ಲಿ ಆಸಕ್ತಿ ವಹಿಸಿದ್ದಾರೆ. ಪ್ರಧಾನಿ ಮೋದಿ ಮತ್ತು ಬಿಜೆಪಿ ರೈತರ ಕಲ್ಯಾಣಕ್ಕೆ ಬದ್ಧವಾಗಿದೆ ಎಂದು ಕೇಂದ್ರ ಕೃಷಿ ಸಚಿವ ಎನ್ಎಸ್ ತೋಮರ್ ಹೇಳಿದ್ದಾರೆ.

ಗೋಧಿ ರಫ್ತು ನಿಷೇಧ ಬಗ್ಗೆ ಉತ್ತರಿಸಿದ ಸರ್ಕಾರ

ಗೋಧಿ ರಫ್ತು ನಿಷೇಧದಿಂದಾಗಿ ರೈತರು ನಷ್ಟ ಅನುಭವಿಸಿಲ್ಲ ಎಂದು ಸರ್ಕಾರ ಸಂಸತ್ ನಲ್ಲಿ ಹೇಳಿದ್ದಾರೆ .

ಇದು ಅಸಂಸದೀಯ ಅಲ್ಲವೇ?: ರಾಹುಲ್ ಗಾಂಧಿ

ಬೆಲೆ ಏರಿಕೆ, ಜಿಎಸ್ ಟಿ ಏರಿಕೆ ಮತ್ತು ರೂಪಾಯಿಯ ಮೌಲ್ಯ ಕುಸಿತ ಬಗ್ಗೆ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಈ ಪ್ರಶ್ನೆಗಳಿಗೆ ಉತ್ತರಿಸಿದೆ ಸಂಸತ್​​ನ ಚರ್ಚೆಗಳಿಂದ ಪ್ರಧಾನಿ ಓಡಿ ಹೋಗುವುದು ಅಸಂಸದೀಯ ಅಲ್ಲವೇ ಎಂದು ಕೇಳಿದ್ದಾರೆ. ಹಲವು ಪದಗಳನ್ನು ಅಸಂಸದೀಯ ಎಂದು ಗುರುತಿಸಿ ವಿಪಕ್ಷಗಳ ಬಾಯ್ಮುಚ್ಚಿಸಲು ಪ್ರಧಾನಿ ಪ್ರಯತ್ನಿಸಿದರೂ ಅವರು ಈ ಪ್ರಶ್ನೆಗಳಿಗೆ ಉತ್ತರ ನೀಡಲೇ ಬೇಕು ಎಂದು ಹೇಳಿದ್ದಾರೆ.

ಅಗ್ನಿಪಥ್ ಯೋಜನೆಯಲ್ಲಿ ಜಾತಿ ಮತ್ತು ಧರ್ಮದ ಪ್ರಮಾಣಪತ್ರ ಕೇಳಲಾಗಿದೆ ಎಂಬುದು ಸುಳ್ಳು

ಅಗ್ನಿಪಥ್ ಯೋಜನೆಯಲ್ಲಿ ಜಾತಿ ಮತ್ತು ಧರ್ಮದ ಪ್ರಮಾಣಪತ್ರ ಕೇಳಲಾಗಿದೆ ಎಂಬುದು ವದಂತಿ. ಈ ಹಿಂದಿನ ವ್ಯವಸ್ಥೆಯಲ್ಲಿ, ಸ್ವಾತಂತ್ರ್ಯಕ್ಕಿಂತ ಮುಂಚೆ ಹೇಗಿತ್ತೋ ಹಾಗೆಯೇ ಇದೆ. ಯಾವುದೇ ಬದಲಾವಣೆಗಳನ್ನು ಮಾಡಿಲ್ಲ, ಹಳೇ ವ್ಯವಸ್ಥೆಯೇ ಮುಂದುವರಿಯುತ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಮೋದಿ ಸರ್ಕಾರ ವಿರುದ್ದ ಗುಡುಗಿದ ಶಶಿ ತರೂರ್

ರೂಪಾಯಿ ಮೌಲ್ಯ 80 ದಾಟಿದೆ. 2014ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಇದನ್ನೇ ಚುನಾವಣಾ ವಿಷಯ ಮಾಡಿಕೊಂಡಿದ್ದರು. ಅಧಿಕಾರಕ್ಕೆ ಬಂದರೆ ರೂಪಾಯಿ ಮೌಲ್ಯ ಹೆಚ್ಚಿಸುವುದಾಗಿ ಹೇಳಿದ್ದರು. ದುರ್ಬಲ ಸರ್ಕಾರವಾಗಿರುವುದರಿಂದು ರೂಪಾಯಿ ಮೌಲ್ಯವೂ ದುರ್ಬಲ ಎಂದು ಅವರು ಹೇಳಿದ್ದರು. ಆದರೆ ಈಗಿರುವ ಸುದೃಢ ಸರ್ಕಾರ ನಮಗೇನು ಕೊಟ್ಟಿದೆ? ಎಂದು ತರೂರ್ ಕೇಳಿದ್ದಾರೆ.

Published On - 5:35 pm, Tue, 19 July 22