HMPV Cases: ನಾಗ್ಪುರದಲ್ಲಿ ಎರಡು ಎಚ್​ಎಂಪಿವಿ ಪ್ರಕರಣಗಳು ಪತ್ತೆ, ಒಟ್ಟು ಸಂಖ್ಯೆ 7ಕ್ಕೆ ಏರಿಕೆ

|

Updated on: Jan 07, 2025 | 11:50 AM

HMPV Cases in India: ಚೀನಾದ ಉತ್ತರ ಭಾಗದಲ್ಲಿ ಈ ಎಚ್‌ ಎಂಪಿವಿ ವೈರಸ್‌ ವೇಗವಾಗಿ ಹರಡುತ್ತಿದೆ. ಅಲ್ಲದೇ ಸಾವಿರಾರು ಸಂಖ್ಯೆಯ ಜನರು ಉಸಿರಾಟದ ತೊಂದರೆಗೆ ಸಿಲುಕಿ ಆಸ್ಪತ್ರೆಗೆ ದಾಖಲಾಗಿರುವುದಾಗಿ ತಿಳಿಸಿದೆ. ಈ ಮೈಕ್ರೋಪ್ಲಾಸ್ಮಾ ನ್ಯುಮೋನಿಯಾ ಎಲ್ಲಾ ವಯೋಮಾನದವರ ಮೇಲೂ ಪರಿಣಾಮ ಬೀರುತ್ತಿದ್ದು, ಮುಖ್ಯವಾಗಿ ಮಕ್ಕಳಿಗೆ ಹೆಚ್ಚು ಮಾರಕವಾಗಿರುವುದರಿಂದ ಸಾರ್ವಜನಿಕ ಆರೋಗ್ಯದ ಬಗ್ಗೆ ಚೀನಾ ಕಳವಳ ವ್ಯಕ್ತಪಡಿಸಿದೆ. ಅದು ಭಾರತದ ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರ ಸೇರಿ ಹಲವು ಭಾಗಗಳಲ್ಲಿ ಆತಂಕ ಹೆಚ್ಚಿಸಿದೆ.

HMPV Cases: ನಾಗ್ಪುರದಲ್ಲಿ ಎರಡು ಎಚ್​ಎಂಪಿವಿ ಪ್ರಕರಣಗಳು ಪತ್ತೆ, ಒಟ್ಟು ಸಂಖ್ಯೆ 7ಕ್ಕೆ ಏರಿಕೆ
ಎಚ್​ಎಂಪಿವಿ
Image Credit source: Mint
Follow us on

ಚೀನಾದಲ್ಲಿ ಹರಡುತ್ತಿರುವ ಎಚ್​ಎಂಪಿವಿ ವೈರಸ್ ಭಾರತದಲ್ಲೂ ವೇಗವನ್ನು ಪಡೆಯಲಾರಂಭಿಸಿದೆ. ನಾಗ್ಪುರದಲ್ಲಿ 2 ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸಂಖ್ಯೆ 7ಕ್ಕೆ ತಲುಪಿದೆ. ಇದಕ್ಕೂ ಮೊದಲು ಬೆಂಗಳೂರಿನಲ್ಲಿ ಎರಡು, ಚೈನ್ನೈನಲ್ಲಿ ಎರಡು, ಗುಜರಾತ್‌ನಲ್ಲಿ ಒಂದು ಮತ್ತು ಪಶ್ಚಿಮ ಬಂಗಾಳದಿಂದ ಒಂದು ಪ್ರಕರಣ ವರದಿಯಾಗಿತ್ತು.

7 ಹಾಗೂ 14 ವರ್ಷ ವಯಸ್ಸಿನ ಇಬ್ಬರು ಮಕ್ಕಳಿಗೆ ಸೋಂಕು ತಗುಲಿದೆ, ಇಬ್ಬರೂ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದಾರೆ.
ಜನವರಿ 3 ರಂದು ಜ್ವರ ಮತ್ತು ಕೆಮ್ಮು ಚಿಕಿತ್ಸೆಗಾಗಿ ಮಕ್ಕಳನ್ನು ನಗರದ ರಾಮದಾಸ್‌ಪೇಟ್‌ನಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.

ಪರೀಕ್ಷೆಗಳನ್ನು ನಡೆಸಿದ ನಂತರ, ಆಸ್ಪತ್ರೆಯ ಅಧಿಕಾರಿಗಳು ಇಬ್ಬರಿಗೆ HMPV ಸೋಂಕಿಗೆ ಒಳಗಾಗಿದ್ದಾರೆ ಎಂದು ದೃಢಪಡಿಸಿದರು. ಜ್ವರ, ಕೆಮ್ಮು, ಮೂಗು ಸ್ರವಿಸುವಿಕೆ ಮತ್ತು ಗಂಟಲು ನೋವು ಇದರ ಪ್ರಮುಖ ಲಕ್ಷಣವಾಗಿದೆ. ಇದು ಶ್ವಾಸಕೋಶದ ಮೇಲೂ ಪರಿಣಾಮ ಬೀರುತ್ತದೆ.

ಅಹಮದಾಬಾದ್‌ನ ಖಾಸಗಿ ಆಸ್ಪತ್ರೆಗೆ ದಾಖಲಾದ ಎರಡು ತಿಂಗಳ ಮಗುವಿಗೆ ವೈರಸ್ ಇರುವುದು ಪತ್ತೆಯಾಗಿದ್ದರೆ, ಬೆಂಗಳೂರಿನಲ್ಲಿ ಎರಡು ಸೋಂಕುಗಳು ವರದಿಯಾಗಿವೆ. ಗುಜರಾತ್ ಮತ್ತು ಕರ್ನಾಟಕ ಎರಡೂ ಮಹಾರಾಷ್ಟ್ರದೊಂದಿಗೆ ಗಡಿಯನ್ನು ಹಂಚಿಕೊಂಡಿವೆ.ಉಳಿದ ಎರಡು ಪ್ರಕರಣಗಳು ತಮಿಳುನಾಡಿನಲ್ಲಿ ವರದಿಯಾಗಿದೆ.

ಮತ್ತಷ್ಟು ಓದಿ: HMPV in India: ಬೆಂಗಳೂರಿನ ಬಳಿಕ ಗುಜರಾತ್​ನ ಅಹಮದಾಬಾದ್‌ನಲ್ಲಿ ದೇಶದ 3ನೇ ಎಚ್‌ಎಂಪಿವಿ ಪ್ರಕರಣ ಪತ್ತೆ

ಪ್ರಕರಣಗಳು ಕ್ರಮೇಣ ಹೆಚ್ಚಾಗುತ್ತಿದ್ದರೂ, ಎಚ್​ಎಂಪಿವಿ ಹೊಸ ವೈರಸ್ ಅಲ್ಲ ಮತ್ತು 2001 ರಲ್ಲಿ ಮೊದಲ ಬಾರಿಗೆ ಪತ್ತೆ ಮಾಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸೋಂಕು 2001ರಲ್ಲಿ ನೆದರ್​ಲ್ಯಾಂಡ್​ನಲ್ಲಿ ಪತ್ತೆಹಚ್ಚಲಾಗಿತ್ತು, ಹಲವು ಪ್ರಕರಣಗಳು ಭಾರತದಲ್ಲೂ ಪತ್ತೆಯಾಗಿದ್ದವು.

ಚೀನಾದಲ್ಲಿ ನಿಗೂಢ ಸೋಂಕಿನ ಪರಿಸ್ಥಿತಿ ಗಂಭೀರ ಸ್ವರೂಪ ತಾಳಿದ್ದು, ಈ ಬಗ್ಗೆ ಚೀನಾದ ಅಧಿಕಾರಿಗಳಾಗಲಿ ಅಥವಾ ವಿಶ್ವ ಆರೋಗ್ಯ ಸಂಸ್ಥೆಯಾಗಲಿ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸುವ ಸಾಧ್ಯತೆ ದಟ್ಟವಾಗಿರುವುದಾಗಿ ವಿವರಿಸಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:33 am, Tue, 7 January 25