ಹೋಳಿಯ ಬಣ್ಣ ಸೋಕೀತು ಎಂದು ಮುಸ್ಲಿಂ ಬಾಂಧವರು ಇಡೀ ಮಸೀದಿಯನ್ನು ಟಾರ್ಪಲಿನ್ನಿಂದ ಮುಚ್ಚಿರುವ ಘಟನೆ ಉತ್ತರ ಪ್ರದೇಶದ ಅಲಿಗಢದಲ್ಲಿ ನಡೆದಿದೆ. ಹೋಳಿ ದಿನದಂದು ಪೊಲೀಸ್ ಆಡಳಿತದ ಸೂಚನೆಯ ಮೇರೆಗೆ, ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ, ಅಲಿಗಢದ ಅತ್ಯಂತ ಸೂಕ್ಷ್ಮ ಪ್ರದೇಶದಲ್ಲಿರುವ ಅಬ್ದುಲ್ ಕರೀಂ ಮಸೀದಿಯನ್ನು ಹೋಳಿ ಸಮಯದಲ್ಲಿ ಬಣ್ಣಗಳಿಂದ ಕಾಪಾಡಲು ಕಪ್ಪು ಟಾರ್ಪಲಿನ್ನಿಂದ ಮುಚ್ಚಲಾಗಿದೆ.
ವಿಶೇಷವೆಂದರೆ, ಕಳೆದ ಕೆಲವು ವರ್ಷಗಳಿಂದ ಹೋಳಿಯಂದು ಸೂಕ್ಷ್ಮ ಪ್ರದೇಶದಲ್ಲಿರುವ ಮಸೀದಿಯನ್ನು ರಾತ್ರಿಯಿಡೀ ಟಾರ್ಪಾಲಿನ್‌ನಿಂದ ಮುಚ್ಚಲಾಗುತ್ತಿದೆ, ಹಾಗಾಗಿ ಹೋಳಿ ನಿಮಿತ್ತ ಯಾರೂ ಮಸೀದಿಯ ಮೇಲೆ ಬಣ್ಣ ಎರಚುವುದಿಲ್ಲ.
ಮತ್ತಷ್ಟು ಓದಿ: ಹೋಳಿ ಹಬ್ಬವನ್ನು ಆಚರಣೆ ಮಾಡುವ ಉದ್ದೇಶ ಏನು ಗೊತ್ತಾ ?
ಮಸೀದಿಯ ಆಡಳಿತ ಮಂಡಳಿಯ ಹಾಜಿ ಮೊಹಮ್ಮದ್ ಇಕ್ಬಾಲ್ ಮಾತನಾಡಿ, ಆಡಳಿತದ ಸೂಚನೆಯ ಮೇರೆಗೆ ನಾವು ಮಸೀದಿಗೆ ಟಾರ್ಪಾಲಿನ್‌ನಿಂದ ಮುಚ್ಚಿದ್ದೇವೆ, ಆದ್ದರಿಂದ ಯಾರೂ ಮಸೀದಿಗೆ ಬಣ್ಣ ಅಥವಾ ಕೊಳಕು ಎಸೆಯಲು ಸಾಧ್ಯವಾಗುವುದಿಲ್ಲ ಎಂದಿದ್ದಾರೆ.
ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಬಂದಾಗಿನಿಂದ ಸುಮಾರು 6 ರಿಂದ 7 ವರ್ಷಗಳಿಂದ ಮಸೀದಿಯನ್ನು ಮುಚ್ಚಲಾಗುತ್ತಿದೆ, ಆಡಳಿತದ ಸಹಾಯದಿಂದ ಯಾರೂ ಬಣ್ಣ ಎರಚದಂತೆ ನಾವು ಮಸೀದಿಯನ್ನು ಮುಚ್ಚುತ್ತೇವೆ ಎಂದು ನಿವಾಸಿ ಅಖೀಲ್ ಪಹಲ್ವಾನ್ ಹೇಳಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ