ಮಹಾರಾಷ್ಟ್ರದಲ್ಲಿ ಕ್ವೀನ್ ವಿರುದ್ಧ ಶಿವಸೇನೆ ಸಮರ, ಕಂಗನಾಗೆ ವೈ ಪ್ಲಸ್ ಭದ್ರತೆ

ದೆಹಲಿ: ಕಂಗನಾ ರಣಾವತ್‌ ವಿವಾದಗಳು ಒಂದೆರೆಡಲ್ಲ. ಮುಂಬೈಯನ್ನು ಪಿಓಕೆ, ತಾಲಿಬಾನ್ ಎಂದೆಲ್ಲಾ ಕರೆದ ಮೇಲೆ ತೀವ್ರ ಟೀಕೆ ಎದುರಾಗಿತ್ತು. ಹಾಗೇ ಶಿವಸೇನೆ ಹಾಗೂ ಎನ್‌ಸಿಪಿ ನಾಯಕರು ಕಂಗನಾ ಮೇಲೆ ಮುಗಿಬಿದ್ದಿದ್ದರು. ಮುಂಬೈಗೆ ಭೇಟಿ ನೀಡದಂತೆ ಬೆದರಿಕೆಯೊಡ್ಡಿದ್ದರು. ಇದರ ಇಂಪ್ಯಾಕ್ಟ್ ಎಂಬಂತೆ ಕಂಗನಾಗೆ ಕೇಂದ್ರದಿಂದ ವೈ ಕೆಟಗರಿ ಭದ್ರತೆ ನೀಡಲಾಗಿದ್ದು, ಕಂಗನಾ ಮೆಂಟಲ್ ಮಹಿಳೆ ಎಂದು ಶಿವಸೇನೆ ವಕ್ತಾರ ರಾವತ್ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ. ಕಂಗನಾ ಅಂದಮೇಲೆ ಕಾಂಟ್ರವರ್ಸಿ, ಕಾಂಟ್ರವರ್ಸಿ ಇರುವ ಜಾಗದಲ್ಲಿ ಕಂಗನಾ ಎಂಟ್ರಿ. ಇತ್ತೀಚೆಗೆ ಮುಂಬೈ […]

ಮಹಾರಾಷ್ಟ್ರದಲ್ಲಿ ಕ್ವೀನ್ ವಿರುದ್ಧ ಶಿವಸೇನೆ ಸಮರ, ಕಂಗನಾಗೆ ವೈ ಪ್ಲಸ್ ಭದ್ರತೆ
ಕಂಗನಾ ರಣಾವತ್​
Follow us
ಆಯೇಷಾ ಬಾನು
|

Updated on: Sep 08, 2020 | 7:22 AM

ದೆಹಲಿ: ಕಂಗನಾ ರಣಾವತ್‌ ವಿವಾದಗಳು ಒಂದೆರೆಡಲ್ಲ. ಮುಂಬೈಯನ್ನು ಪಿಓಕೆ, ತಾಲಿಬಾನ್ ಎಂದೆಲ್ಲಾ ಕರೆದ ಮೇಲೆ ತೀವ್ರ ಟೀಕೆ ಎದುರಾಗಿತ್ತು. ಹಾಗೇ ಶಿವಸೇನೆ ಹಾಗೂ ಎನ್‌ಸಿಪಿ ನಾಯಕರು ಕಂಗನಾ ಮೇಲೆ ಮುಗಿಬಿದ್ದಿದ್ದರು. ಮುಂಬೈಗೆ ಭೇಟಿ ನೀಡದಂತೆ ಬೆದರಿಕೆಯೊಡ್ಡಿದ್ದರು. ಇದರ ಇಂಪ್ಯಾಕ್ಟ್ ಎಂಬಂತೆ ಕಂಗನಾಗೆ ಕೇಂದ್ರದಿಂದ ವೈ ಕೆಟಗರಿ ಭದ್ರತೆ ನೀಡಲಾಗಿದ್ದು, ಕಂಗನಾ ಮೆಂಟಲ್ ಮಹಿಳೆ ಎಂದು ಶಿವಸೇನೆ ವಕ್ತಾರ ರಾವತ್ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ.

ಕಂಗನಾ ಅಂದಮೇಲೆ ಕಾಂಟ್ರವರ್ಸಿ, ಕಾಂಟ್ರವರ್ಸಿ ಇರುವ ಜಾಗದಲ್ಲಿ ಕಂಗನಾ ಎಂಟ್ರಿ. ಇತ್ತೀಚೆಗೆ ಮುಂಬೈ ನಗರವನ್ನ ಪಾಕ್‌ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿ ವಿವಾದವನ್ನ ಮೈಮೇಲೆ ಎಳೆದುಕೊಂಡಿದ್ದಾರೆ. ಈಗ ಅದು ಎಲ್ಲೆಲ್ಲಿಗೋ ಹೋಗಿ ಕಡೆಗೆ ಕಂಗನಾ ವರ್ಸಸ್ ಶಿವಸೇನೆ ಎಂಬಂತಾಗಿದೆ. ಇಂಥಾ ಹೊತ್ತಲ್ಲೇ ವಿವಾದದ ಕಿಡಿಗೆ ಪೆಟ್ರೋಲ್ ಸುರಿದಿದ್ದಾರೆ ಸಂಜಯ್ ರಾವತ್.

ಕಂಗನಾ ವಿರುದ್ಧ ರೊಚ್ಚಿಗೆದ್ದ ಮಹಾರಾಷ್ಟ್ರ ಸಿಎಂ! ತನಗನಿಸಿದ್ದನ್ನೆಲ್ಲಾ ನೇರವಾಗಿ ಹೇಳುವ ನಟಿ ಕಂಗನಾ ದಿಟ್ಟತನವೇ ಅನೇಕ ಸಮಸ್ಯೆ, ವಿವಾದಗಳಿಗೆ ಎಡೆ ಮಾಡಿಕೊಟ್ಟಿದೆ. ಕಂಗನಾರ ಪಾಕ್‌ ಆಕ್ರಮಿತ ಕಾಶ್ಮೀರ ಟ್ವೀಟ್‌ ನಂತ್ರ ಮುಂಬೈಗೆ ಬಂದ್ರೆ ಪ್ರತಿಭಟನೆ ನಡೆಸ್ತೀವಿ ಅಂತಾ ಶಿವಸೇನೆ ವಾರ್ನ್‌ ಮಾಡಿತ್ತು. ಆದ್ರೆ, ಇದಕ್ಕೆ ಸವಾಲೊಡ್ಡಿದ್ದ ಕಂಗನಾ ಸೆಪ್ಟಂಬರ್ 9ಕ್ಕೆ ಬರ್ತೀನಿ. ಧಮ್ ಇದ್ದರೆ, ತಡೆಯಿರಿ ಎಂದು ಪ್ರತ್ಯುತ್ತರ ನೀಡಿದ್ದರು. ಇದೀಗ ಕಂಗನಾ ಬಗ್ಗೆ ವಾಗ್ದಾಳಿ ನಡೆಸಲು ಖುದ್ದು ಮಹಾರಾಷ್ಟ್ರದ ಸಿಎಂ ಉದ್ಧವ್ ಠಾಕ್ರೆ ಎಂಟ್ರಿಯಾಗಿದ್ದು, ಕೆಲವರು ಮುಂಬೈನಲ್ಲಿ ತಮ್ಮ ಕೆರಿಯರ್ ಬೆಳವಣಿಗೆ ಮಾಡಿಕೊಳ್ಳುತ್ತಾರೆ. ಆದರೆ ಮುಂಬೈಗೆ ಋಣಿಯಾಗಿರಲ್ಲ ಎಂದು ಹೇಳುವ ಮೂಲಕ ಕಂಗನಾ ಮುಂಬೈಗೆ ಋಣಿಯಾಗಿಲ್ಲ ಎಂದು ಟೀಕಿಸಿದ್ದಾರೆ.

Y ಕೆಟಗರಿ ಭದ್ರತೆ ನೀಡಲು ಕೇಂದ್ರದ ನಿರ್ಧಾರ! ಅಂದಹಾಗೆ ಕಂಗನಾ ಬೆಂಬಲಕ್ಕೆ ಹಿಮಾಚಲ ಪ್ರದೇಶ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ನಿಂತಿದೆ. ಕಂಗನಾಗೆ ಶಿವಸೇನೆ ಬೆದರಿಕೆ ಹಾಕಿದ್ದ ಬಗ್ಗೆ ಪ್ರತಿಕ್ರಿಯಿಸಿದ್ದ ಹಿಮಾಚಲ ಸಿಎಂ ಜಯರಾಮ ಠಾಕೂರ್, ಕಂಗನಾ ಹಿಮಾಚಲದ ಹೆಣ್ಣು ಮಗಳು. ಹಿಮಾಚಲ ಪ್ರದೇಶದ ಪೊಲೀಸರು ಮುಂಬೈನಲ್ಲೂ ಕಂಗನಾಗೆ ರಕ್ಷಣೆ ನೀಡ್ತಾರೆ ಎಂದಿದ್ದರು. ನಂತರ ಹಿಮಾಚಲ ಸರ್ಕಾರದ ಶಿಫಾರಸ್ಸಿನ ಮೇರೆಗೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರೂ ಆಗಿರುವ ಕಂಗನಾಗೆ ವೈ ಕೆಟಗರಿ ಭದ್ರತೆ ನೀಡಲು ಕೇಂದ್ರ ಗೃಹಇಲಾಖೆ ನಿರ್ಧರಿಸಿದೆ.ವೈ ಕೆಟಗರಿ ಭದ್ರತೆ ಅಡಿ ಕಂಗನಾಗೆ ದಿನದ 24 ಗಂಟೆ ಪ್ಯಾರಾ ಮಿಲಿಟರಿ ಪಡೆಯ ರಕ್ಷಣೆ ಸಿಗಲಿದೆ. ವೈ ಕೆಟಗರಿ ಭದ್ರತೆಯಡಿ ಇಬ್ಬರು ಶಸ್ತ್ರಧಾರಿ ಭದ್ರತಾ ಸಿಬ್ಬಂದಿ ಸದಾ ರಕ್ಷಣೆ ನೀಡ್ತಾರೆ.

ಒಟ್ನಲ್ಲಿ ಕಂಗನಾ ವಿಚಾರ ರಾಜ್ಯ ರಾಜ್ಯಗಳ ನಡುವೆ ಕಿಚ್ಚು ಹೊತ್ತಿಸಿದೆ. ಅತ್ತ ಕೇಂದ್ರ ಸರ್ಕಾರ ಕೂಡ ಈ ವಿಚಾರವನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ನಾಳೆಯೇ ಕಂಗನಾ ರಣಾವತ್ ಮುಂಬೈಗೆ ಭೇಟಿ ನೀಡಲಿದ್ದು, ಮುಂದೆ ಏನಾಗಲಿದೆ..? ಅನ್ನೋದನ್ನ ಕಾದು ನೋಡಬೇಕಿದೆ.

ವಿಜಯೇಂದ್ರ ಸಭೆ ನಡೆಸಿದರೆ ನನಗ್ಯಾಕೆ ಹಿನ್ನಡೆಯಾದೀತು: ಬಸನಗೌಡ ಯತ್ನಾಳ್
ವಿಜಯೇಂದ್ರ ಸಭೆ ನಡೆಸಿದರೆ ನನಗ್ಯಾಕೆ ಹಿನ್ನಡೆಯಾದೀತು: ಬಸನಗೌಡ ಯತ್ನಾಳ್
ನಿಖಿಲ್ ರಾಜ್ಯಾಧ್ಯಕ್ಷನಾಗಲಿ ಅಂತ ನನ್ನ ಮಗ ಹೇಳಿದರೆ ತಪ್ಪೇನು? ಜಿಟಿಡಿ
ನಿಖಿಲ್ ರಾಜ್ಯಾಧ್ಯಕ್ಷನಾಗಲಿ ಅಂತ ನನ್ನ ಮಗ ಹೇಳಿದರೆ ತಪ್ಪೇನು? ಜಿಟಿಡಿ
ಜೆಡಿಎಸ್ ಸಭೆಗೂ ಹೋಗಲ್ಲ, ಸಂಘಟನೆಗೂ ಬರಲ್ಲ: ಜಿಟಿ ದೇವೇಗೌಡ ಖಡಕ್ ಮಾತು
ಜೆಡಿಎಸ್ ಸಭೆಗೂ ಹೋಗಲ್ಲ, ಸಂಘಟನೆಗೂ ಬರಲ್ಲ: ಜಿಟಿ ದೇವೇಗೌಡ ಖಡಕ್ ಮಾತು
ಸಿದ್ದರಾಮಯ್ಯ, ನಾನು ಪಕ್ಷ ಹೇಳಿದಂತೆ ಸರ್ಕಾರ ನಡೆಸುತ್ತೇವೆ: ಶಿವಕುಮಾರ್
ಸಿದ್ದರಾಮಯ್ಯ, ನಾನು ಪಕ್ಷ ಹೇಳಿದಂತೆ ಸರ್ಕಾರ ನಡೆಸುತ್ತೇವೆ: ಶಿವಕುಮಾರ್
ಕಾಂಗ್ರೆಸ್ ಮುಖಂಡರಿಗೆ ಹೈಕಮಾಂಡ್ ನೀಡುವ ಆದೇಶವೇ ಅಂತಿಮ: ಪರಮೇಶ್ವರ್
ಕಾಂಗ್ರೆಸ್ ಮುಖಂಡರಿಗೆ ಹೈಕಮಾಂಡ್ ನೀಡುವ ಆದೇಶವೇ ಅಂತಿಮ: ಪರಮೇಶ್ವರ್
ನಕ್ಸಲ್ ನಾಯಕ ವಿಕ್ರಂಗೌಡನ ಎನ್ಕೌಂಟರ್ ಸಹ ಸಂಶಯ ಹುಟ್ಟಿಸುತ್ತಿದೆ: ಅಣ್ಣಾಮಲೈ
ನಕ್ಸಲ್ ನಾಯಕ ವಿಕ್ರಂಗೌಡನ ಎನ್ಕೌಂಟರ್ ಸಹ ಸಂಶಯ ಹುಟ್ಟಿಸುತ್ತಿದೆ: ಅಣ್ಣಾಮಲೈ
ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ