ಮಗಳು ಯಾರೊಟ್ಟಿಗೋ ಲಿವ್-ಇನ್ ಸಂಬಂಧದಲ್ಲಿದ್ದಿದ್ದಕ್ಕೆ ಆಕೆಯ ಕೊಂದು, ಆತ್ಮಹತ್ಯೆಯ ಕಥೆ ಕಟ್ಟಿದ ತಂದೆ
ಮಗಳು ಯಾರೊಂದಿಗೋ ಲಿವ್-ಇನ್ ಸಂಬಂಧ(Live-in Relationship)ದಲ್ಲಿರುವುದನ್ನು ತಿಳಿದ ತಂದೆ ಕೋಪಕ್ಕೆ ಆಕೆಯನ್ನು ಕೊಲೆ ಮಾಡಿ, ಆತ್ಮಹತ್ಯೆಯ ಕಥೆ ಕಟ್ಟಿರುವ ಘಟನೆ ಗುಜರಾತ್ನಲ್ಲಿ ನಡೆದಿದೆ. ಮಗಳನ್ನು ಕೊಂದು ರಾತ್ರೋ ರಾತ್ರಿ ತನ್ನ ಸಹೋದರನ ಜತೆ ಸೇರಿ ಅಂತ್ಯಕ್ರಿಯೆಯನ್ನೂ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಎರಡು ತಿಂಗಳ ಹಿಂದಷ್ಟೇ ಆ ಯುವತಿಯದ್ದು ಆತ್ಮಹತ್ಯೆ ಎಂದು ಘೋಷಿಸಲಾಗಿತ್ತು

ಅಹಮದಾಬಾದ್ ಆಗಸ್ಟ್ 14: ಮಗಳು ಯಾರೊಂದಿಗೋ ಲಿವ್-ಇನ್ ಸಂಬಂಧ(Live-in Relationship)ದಲ್ಲಿರುವುದನ್ನು ತಿಳಿದ ತಂದೆ ಕೋಪಕ್ಕೆ ಆಕೆಯನ್ನು ಕೊಲೆ ಮಾಡಿ, ಆತ್ಮಹತ್ಯೆಯ ಕಥೆ ಕಟ್ಟಿರುವ ಘಟನೆ ಗುಜರಾತ್ನಲ್ಲಿ ನಡೆದಿದೆ. ಮಗಳನ್ನು ಕೊಂದು ರಾತ್ರೋ ರಾತ್ರಿ ತನ್ನ ಸಹೋದರನ ಜತೆ ಸೇರಿ ಅಂತ್ಯಕ್ರಿಯೆಯನ್ನೂ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಎರಡು ತಿಂಗಳ ಹಿಂದಷ್ಟೇ ಆ ಯುವತಿಯದ್ದು ಆತ್ಮಹತ್ಯೆ ಎಂದು ಘೋಷಿಸಲಾಗಿತ್ತು, ಆದರೆ ಆಕೆಯ ಪ್ರಿಯಕರ ಗುಜರಾತ್ ಹೈಕೋರ್ಟ್ ಮೊರೆ ಹೋದಾಗ ಘಟನೆ ಬೆಳಕಿಗೆ ಬಂದಿದೆ. ಗುಜರಾತ್‌ನ ಬನಸ್ಕಾಂತ ಜಿಲ್ಲೆಯಲ್ಲಿ ಈ ಕೊಲೆ ನಡೆದಿದೆ ಎಂದು ಹೇಳಲಾಗಿದೆ.
ಹರೀಶ್ ಎಂಬುವವರು ಈ ವರ್ಷದ ಫೆಬ್ರವರಿಯಲ್ಲಿ ಪಾಲನ್‌ಪುರದಲ್ಲಿ ಚಂದ್ರಿಕಾಳನ್ನು ಭೇಟಿಯಾದರು ಇಬ್ಬರ ನಡುವೆ ಪ್ರೀತಿ ಚಿಗುರಿತ್ತು. ಒಮ್ಮೆ ಚಂದ್ರಿಕಾ ಮನೆಗೆ ಮರಳಿದಾಗ ಮತ್ತೆ ಕುಟುಂಬವು ಆಕೆಯನ್ನು ಪಾಲನ್ಪುರಕ್ಕೆ ಹಿಂದಿರುಗಲು ಅವಕಾಶ ನೀಡಲಿಲ್ಲ. ಇದರಿಂದ ಬಯಗೊಂಡ ಚಂದ್ರಿಕಾ ಹರೀಶ್ಗೆ ಸಂದೇಶ ಕಳುಹಿಸಿ, ಅವಳನ್ನು ಕರೆದುಕೊಂಡು ಹೋಗುವಂತೆ ಕೇಳಿಕೊಂಡಿದ್ದಳು.ಆಕೆಯ ಕುಟುಂಬವು ಆಕೆಯ ಮದುವೆಯನ್ನು ಬೇರೆ ವ್ಯಕ್ತಿಯ ಜತೆ ಮಾಡಬಹುದು ಎನ್ನುವ ಭಯವನ್ನೂ ವ್ಯಕ್ತಪಡಿಸಿದ್ದಳು. ಜೂನ್ 4ರಂದು ಹರೀಶ್ ಚಂದ್ರಿಕಾರನ್ನು ಅಹಮದಾಬಾದ್ಗೆ ಕರೆದೊಯ್ದಿದ್ದರು.
ಅಲ್ಲಿ ಅವರು ಲಿವ್-ಇನ್ ಸಂಬಂಧ ಒಪ್ಪಂದಕ್ಕೆ ಸಹಿ ಹಾಕಿದರು ಮತ್ತು ನಂತರ ಮಧ್ಯಪ್ರದೇಶ ಮತ್ತು ರಾಜಸ್ಥಾನದ ಮೂಲಕ ಪ್ರಯಾಣಿಸಿದ್ದರು. ಬಳಿಕ ಚಂದ್ರಿಕಾ ಕುಟುಂಬ ತನ್ನ ಮಗಳು ಕಾಣೆಯಾಗಿದ್ದಾಳೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಜೂನ್ 12ರಂದು ಪೊಲೀಸರು ಅವರಿಬ್ಬರನ್ನು ಪತ್ತೆ ಮಾಡಿದ್ದರು, ಆಕೆಯನ್ನು ಕುಟುಂಬಕ್ಕೆ ಒಪ್ಪಿಸಿದ್ದರು.ಹರೀಶ್ನನ್ನು ಬಂಧಿಸಲಾಗಿತ್ತು.
ಮತ್ತಷ್ಟು ಓದಿ: 16 ವರ್ಷಗಳ ಕಾಲ ಲಿವ್-ಇನ್ ಸಂಬಂಧದಲ್ಲಿದ್ದರೆ ಮಹಿಳೆ ಅತ್ಯಾಚಾರ ಆರೋಪ ಹೊರಿಸುವಂತಿಲ್ಲ
ಜೂನ್ 21 ರಂದು ಜೈಲಿನಿಂದ ಬಿಡುಗಡೆಯಾದಾಗ, ಅವರ ಫೋನ್ ಡೇಟಾ ಅಳಿಸಿಹೋಗಿರುವುದು ಕಂಡುಬಂದಿದೆ.ಅವರ ಇನ್‌ಸ್ಟಾಗ್ರಾಮ್ ಖಾತೆಯನ್ನು ಪರಿಶೀಲಿಸಿದಾಗ, ಚಂದ್ರಿಕಾ ಅವರ ಹಲವಾರು ಸಂದೇಶಗಳು ಕಂಡುಬಂದಿದ್ದವು. ಅದರಲ್ಲಿ ಚಂದ್ರಿಕಾ ಮೆಸೇಜ್ ಇತ್ತು. ಬೇರೆ ಮದುವೆಗೆ ಪೋಷಕರು ಒತ್ತಾಯಿಸುತ್ತಿದ್ದಾರೆ ಎಂದು ಬರೆಯಲಾಗಿತ್ತು.
ನಂತರ ಹರೀಶ್ ಗುಜರಾತ್ ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದರು. ಜೂನ್ 24 ರಂದು ವಿಚಾರಣೆ ನಡೆಯುವ ಮೊದಲು, ಚಂದ್ರಿಕಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಹೊರಬಿತ್ತು.ಆಕೆಯ ತಂದೆ ಹಾಗೂ ಚಿಕ್ಕಪ್ಪ ಆಕೆಯದ್ದು ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸಿದ್ದರು. ಹರೀಶ್ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




