Omicron Variant: ಒಮಿಕ್ರಾನ್​ ಹರಡುವಿಕೆ ಆತಂಕದ ನಡುವೆಯೇ ಗುಡ್​ ನ್ಯೂಸ್ ಕೊಟ್ಟ ಎರಡು ಅಧ್ಯಯನಗಳು !

| Updated By: Lakshmi Hegde

Updated on: Dec 23, 2021 | 12:07 PM

ಇಂಗ್ಲೆಂಡ್​​ನಲ್ಲಿ ನಡೆದ ಎರಡನೇ ಅಧ್ಯಯನವೂ ಕೂಡ ಇದನ್ನೇ ತೋರಿಸಿದೆ. ಡೆಲ್ಟಾಕ್ಕೆ ಹೋಲಿಸಿದರೆ ಒಮಿಕ್ರಾನ್​ ಸೋಂಕಿತರು ಆಸ್ಪತ್ರೆಗೆ ಭೇಟಿ ಕೊಡುವ ಪ್ರಮಾಣ ಶೇ.20-25ರಷ್ಟು ಕಡಿಮೆ ಮತ್ತು ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುವ ಪ್ರಮಾಣ ಶೇ.40-45ರಷ್ಟು ಕಡಿಮೆ ಎಂದು ಹೇಳಲಾಗಿದೆ. 

Omicron Variant: ಒಮಿಕ್ರಾನ್​ ಹರಡುವಿಕೆ ಆತಂಕದ ನಡುವೆಯೇ ಗುಡ್​ ನ್ಯೂಸ್ ಕೊಟ್ಟ ಎರಡು ಅಧ್ಯಯನಗಳು !
ಸಾಂಕೇತಿಕ ಚಿತ್ರ
Follow us on

ವಾಷಿಂಗ್ಟನ್​: ಕೊರೊನಾ ವೈರಸ್(Coronavirus)​ನ ಹೊಸ ರೂಪಾಂತರ ಒಮಿಕ್ರಾನ್​ (Omicron) ಬಗ್ಗೆ ಸದ್ಯ ಹಲವು ವಿಧದ ಅಧ್ಯಯನಗಳು ನಡೆಯುತ್ತಿವೆ. ಬಹುತೇಕ ಅಧ್ಯಯನಗಳು ಹೇಳುವುದೆಂದರೆ, ಒಮಿಕ್ರಾನ್​ ತುಂಬ ಮಾರಣಾಂತಿಕವಲ್ಲ, ಆದರೆ ಕೊವಿಡ್​ 19 ನ ಹಿಂದಿನ ರೂಪಾಂತರ ಡೆಲ್ಟಾಕ್ಕಿಂತ ಮೂರುಪಟ್ಟು ವೇಗವಾಗಿ ಪ್ರಸರಣಗೊಳ್ಳುತ್ತದೆ ಎಂದು. ಅದಕ್ಕೆ ತಕ್ಕಂತೆ ಒಮಿಕ್ರಾನ್​ ಪ್ರಸರಣ ಈಗಾಗಲೇ ಶುರುವಾಗಿದೆ. ಭಾರತದಲ್ಲೂ 230ಕ್ಕೂ ಹೆಚ್ಚು ಕೇಸ್​ಗಳು ದಾಖಲಾಗಿವೆ. ದೇಶದಲ್ಲಿ ಮೂರನೇ ಅಲೆಗೆ ಕಾರಣವಾಗಬಹದು ಎಂಬ ಆತಂಕದ ಮಧ್ಯೆಯೇ ಬ್ರಿಟನ್​ನಲ್ಲಿ ಪಬ್ಲಿಶ್​ ಆದ ಎರಡು ಅಧ್ಯಯನ ವರದಿಗಳು ಒಂದು ಗುಡ್​ನ್ಯೂಸ್​ ಕೊಟ್ಟಿವೆ. 

ಡೆಲ್ಟಾ ವೈರಾಣುವಿಗೆ ಹೋಲಿಸಿದರೆ ಒಮಿಕ್ರಾನ್​ ಸೋಂಕಿಗೆ ಒಳಗಾದವರು ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ತೀರ ಕಡಿಮೆ ಎಂದು ಎರಡೂ ಅಧ್ಯಯನಗಳು ಸ್ಪಷ್ಟಪಡಿಸಿವೆ. ಈ ಅಧ್ಯಯನಗಳಲ್ಲಿ ಒಂದು ಸ್ಕಾಟ್ಲೆಂಡ್​​ನಲ್ಲಿ ನಡೆದಿದ್ದರೆ ಇನ್ನೊಂದು ಇಂಗ್ಲೆಂಡ್​ನಲ್ಲಿ ನಡೆದದ್ದು.  ಅದರಲ್ಲಿ ಸ್ಕಾಟ್ಲೆಂಡ್​ನಲ್ಲಿ ನಡೆದ ಸಂಶೋಧನೆಯ ಸಹ ಸಂಶೋಧಕ ಜಿಮ್ ಮೆಕ್ಮೆನಾಮಿನ್ ಪ್ರತಿಕ್ರಿಯೆ ನೀಡಿ, ಕೊವಿಡ್​ 19 ಸೋಂಕಿನೊಂದಿಗೆ ಅದರ ಡೆಲ್ಟಾ ರೂಪಾಂತರ ವೈರಸ್ ತಗುಲಿದಾಗ ಅಪಾಯ ಜಾಸ್ತಿ. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುವ ಪ್ರಮಾಣವೂ ಹೆಚ್ಚು. ಆದರೆ ಇದಕ್ಕೆ ಹೋಲಿಸಿದರೆ, ಕೊವಿಡ್​ 19 ಸೋಂಕಿನೊಂದಿಗೆ ಒಮಿಕ್ರಾನ್​ ತಗುಲಿದರೆ ಗಂಭೀರ ಸ್ವರೂಪಕ್ಕೆ ತಿರುಗುವ ಪ್ರಮಾಣ ಕಡಿಮೆ. ಹೀಗಾಗಿ ಆಸ್ಪತ್ರೆಗೆ ದಾಖಲಾಗುವ ದರವೂ ಇದರಲ್ಲಿ ಕಡಿಮೆ ಇದೆ. ಇದನ್ನೊಂದು ಗುಡ್​ ನ್ಯೂಸ್​ ಎಂದೇ ನಾವು ಪರಿಗಣಿಸುತ್ತೇವೆ ಎಂದು ಜಿಮ್​ ಹೇಳಿದ್ದಾರೆ.  ಹಾಗೇ, ಡೆಲ್ಟಾಕ್ಕೆ ಹೋಲಿಸಿದರೆ ಒಮಿಕ್ರಾನ್​ ಸೋಂಕಿತರು ಆಸ್ಪತ್ರೆಗೆ ಸೇರುವ ಅಪಾಯ ಮೂರನೇ ಎರಡರಷ್ಟು ಕಡಿಮೆ ಮತ್ತು ಕೊವಿಡ್​ 19 ಬೂಸ್ಟರ್​ ಲಸಿಕೆ ತೆಗೆದುಕೊಳ್ಳುವುದರಿಂದ ಒಮಿಕ್ರಾನ್​ ವಿರುದ್ಧ ಹೆಚ್ಚುವರಿ ರಕ್ಷಣೆ ಪಡೆಯಬಹುದು ಎಂಬುದನ್ನು ಅಧ್ಯಯನ ತೋರಿಸಿದ್ದಾಗಿ ಹೇಳಿದ್ದಾರೆ. ಸ್ಕಾಟ್ಲೆಂಡ್​​ನಲ್ಲಿ ನಡೆದ ಮೊದಲ ಅಧ್ಯಯನ ಸಣ್ಣಪ್ರಮಾಣದಲ್ಲಿ ನಡೆದಿತ್ತು. 60 ವರ್ಷದ ಯಾರೂ ಆಸ್ಪತ್ರೆಗೆ ದಾಖಲಾಗಲಿಲ್ಲ ಎಂದು ಹೇಳಲಾಗಿದೆ.

ಇಂಗ್ಲೆಂಡ್​​ನಲ್ಲಿ ನಡೆದ ಎರಡನೇ ಅಧ್ಯಯನವೂ ಕೂಡ ಇದನ್ನೇ ತೋರಿಸಿದೆ. ಡೆಲ್ಟಾಕ್ಕೆ ಹೋಲಿಸಿದರೆ ಒಮಿಕ್ರಾನ್​ ಸೋಂಕಿತರು ಆಸ್ಪತ್ರೆಗೆ ಭೇಟಿ ಕೊಡುವ ಪ್ರಮಾಣ ಶೇ.20-25ರಷ್ಟು ಕಡಿಮೆ ಮತ್ತು ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುವ ಪ್ರಮಾಣ ಶೇ.40-45ರಷ್ಟು ಕಡಿಮೆ ಎಂದು ಹೇಳಲಾಗಿದೆ.  ಆದರೆ ಎಷ್ಟೇ ಅಧ್ಯಯನಗಳು ಇದು ಮಾರಣಾಂತಿಕವಲ್ಲ ಎಂದು ಹೇಳುತ್ತಿದ್ದರೂ, ಎಚ್ಚರಿಕೆಯಿಂದ ಇರಬೇಕು, ಹರಡುವಿಕೆ ತಡೆಯಲು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ, ಆರೋಗ್ಯ ತಜ್ಞರು ಎಚ್ಚರಿಕೆ ನೀಡುತ್ತಲೇ ಇದ್ದಾರೆ.

ಇದನ್ನೂ ಓದಿ: ಒಮಿಕ್ರಾನ್ ಕೊರೊನಾವೈರಸ್​​ನ ಅಂತಿಮ ಅಲೆಯೇ? ಏನಂತಾರೆ ತಜ್ಞರು?

Published On - 12:06 pm, Thu, 23 December 21