ದೇಶದಲ್ಲಿ ಏರಿಕೆಯಾಗುತ್ತಿರುವ ಒಮಿಕ್ರಾನ್​ ಸೋಂಕಿತರ ಸಂಖ್ಯೆ; ಇಂದು ಪ್ರಧಾನಿ ಮೋದಿಯವರಿಂದ ಪರಿಶೀಲನಾ ಸಭೆ

ದೇಶದಲ್ಲಿ ಒಟ್ಟಾರೆ ಕೊವಿಡ್​ 19 ಪ್ರಕರಣಗಳ ಸಂಖ್ಯೆ  34,758,481 ಆಗಿದ್ದು, ಇಲ್ಲಿಯವರೆಗೆ 478,325 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಸದ್ಯ 78,190 ಕೊರೊನಾ ಸಕ್ರಿಯ ಪ್ರಕರಣಗಳು ಇವೆ. ಕಳೆದ 575 ದಿನಗಳಲ್ಲೇ ಇದು ಅತ್ಯಂತ ಕಡಿಮೆ ಸಕ್ರಿಯ ಕೇಸ್​ ಆಗಿದೆ.

ದೇಶದಲ್ಲಿ ಏರಿಕೆಯಾಗುತ್ತಿರುವ ಒಮಿಕ್ರಾನ್​ ಸೋಂಕಿತರ ಸಂಖ್ಯೆ; ಇಂದು ಪ್ರಧಾನಿ ಮೋದಿಯವರಿಂದ ಪರಿಶೀಲನಾ ಸಭೆ
ಪ್ರಧಾನಿ ನರೇಂದ್ರ ಮೋದಿ
Follow us
TV9 Web
| Updated By: Lakshmi Hegde

Updated on:Dec 23, 2021 | 10:15 AM

ದೇಶದಲ್ಲಿ ಕೊವಿಡ್​ 19 ಹೊಸ ತಳಿ ಒಮಿಕ್ರಾನ್​ ರೂಪಾಂತರ (Omicron Variant) ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi)ಯವರು ಇಂದು ಸಂಜೆ 6ಗಂಟೆಗೆ ಪರಿಶೀಲನಾ ಸಭೆ ನಡೆಸಲಿದ್ದಾರೆ. ದೇಶದಲ್ಲಿ ಕೊವಿಡ್​ 19, ಒಮಿಕ್ರಾನ್​ ಪರಿಸ್ಥಿತಿ ಬಗ್ಗೆ ಅವರು ಉನ್ನತ ಅಧಿಕಾರಿಗಳಿಂದ ಮಾಹಿತಿ ಪಡೆಯಲಿದ್ದಾರೆ. ಭಾರತದಲ್ಲಿ ಸದ್ಯ 200ಕ್ಕೂ ಹೆಚ್ಚು ಒಮಿಕ್ರಾನ್​ ಪ್ರಕರಣಗಳು ದಾಖಲಾಗಿವೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅತಿಹೆಚ್ಚು ಅಂದರೆ 57 ಒಮಿಕ್ರಾನ್​ ಸೋಂಕಿತರಿದ್ದಾರೆ. ಮಹಾರಾಷ್ಟ್ರದಲ್ಲಿ 54, ತೆಲಂಗಾಣದಲ್ಲಿ 24, ಕರ್ನಾಟಕದಲ್ಲಿ 19, ರಾಜಸ್ಥಾನ 18, ಕೇರಳದಲ್ಲಿ 15, ಗುಜರಾತ್​ನಲ್ಲಿ 14, ಜಮ್ಮು-ಕಾಶ್ಮೀರದಲ್ಲಿ 3, ಒಡಿಶಾ, ಆಂಧ್ರಪ್ರದೇಶ, ಹೈದರಾಬಾದ್​, ತಮಿಳುನಾಡು, ಉತ್ತರಪ್ರದೇಶ, ಕೇರಳ ರಾಜ್ಯಗಳಲ್ಲೂ ಕೂಡ ಒಮಿಕ್ರಾನ್​ ದಾಖಲಾಗಿದೆ.  ಒಮಿಕ್ರಾನ್​ ಪ್ರಸರಣದಿಂದಾಗಿ ದೇಶದಲ್ಲಿ ಫೆಬ್ರವರಿ ಹೊತ್ತಿಗೆ ಕೊವಿಡ್​ 19 ಮೂರನೆ ಅಲೆ ಉತ್ತುಂಗಕ್ಕೆ ಏರಬಹುದು ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ. 

ದೇಶದಲ್ಲಿ ಒಟ್ಟಾರೆ ಕೊವಿಡ್​ 19 ಪ್ರಕರಣಗಳ ಸಂಖ್ಯೆ  34,758,481 ಆಗಿದ್ದು, ಇಲ್ಲಿಯವರೆಗೆ 478,325 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಸದ್ಯ 78,190 ಕೊರೊನಾ ಸಕ್ರಿಯ ಪ್ರಕರಣಗಳು ಇವೆ. ಕಳೆದ 575 ದಿನಗಳಲ್ಲೇ ಇದು ಅತ್ಯಂತ ಕಡಿಮೆ ಸಕ್ರಿಯ ಕೇಸ್​ ಆಗಿದೆ. ಆದರೆ ಇದೀಗ ಒಮಿಕ್ರಾನ್​ ಸೋಂಕು ಏರುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳಿಗೆ ಪತ್ರ ಬರೆದಿದ್ದು, ಮತ್ತೆ ವಾರ್​ ರೂಂಗಳನ್ನು ಸಕ್ರಿಯ ಗೊಳಿಸಿ, ರಾತ್ರಿ ಕರ್ಫ್ಯೂ, ಗುಂಪುಗೂಡುವಿಕೆ ನಿಷೇಧದಂತ ಕ್ರಮಗಳನ್ನು ಕೈಗೊಳ್ಳಲು ಪ್ರಾರಂಭಿಸಿ ಎಂದು ಸೂಚಿಸಿದ್ದಾರೆ. ಈ ಮಧ್ಯೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರೂ ಕೂಡ ಸ್ವತಃ ಸಭೆ ನಡೆಸಿ, ಪರಿಸ್ಥಿತಿ ಪರಿಶೀಲನೆ ಮಾಡಲಿದ್ದಾರೆ.

ಒಮಿಕ್ರಾನ್​ ಬಗ್ಗೆ ಆರೋಗ್ಯ ತಜ್ಞರಂತೂ ಪದೇಪದೆ ಎಚ್ಚರಿಕೆ ನೀಡುತ್ತಿದ್ದಾರೆ. ಇದು ಡೆಲ್ಟಾದಷ್ಟು ಮಾರಣಾಂತಿಕವಲ್ಲದೆ ಇದ್ದರೂ, ಅದಕ್ಕಿಂತ ಮೂರು ಪಟ್ಟು ವೇಗವಾಗಿ ಹರಡುತ್ತದೆ ಎಂದು ಹೇಳುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯೂ ಕೂಡ ಇದನ್ನೇ ಒತ್ತಿ ಹೇಳಿದೆ. ಕೊವಿಡ್​ 19 ಮುನ್ನೆಚ್ಚರಿಕಾ ಕ್ರಮಗಳನ್ನು ಜನರು ನಿರ್ಲಕ್ಷಿಸಬಾರದು. ಇನ್ನೂ ಲಸಿಕೆ ತೆಗೆದುಕೊಳ್ಳದೆ ಇರುವರು ಕೂಡಲೇ ಹೋಗಿ ಲಸಿಕೆ ತೆಗೆದುಕೊಳ್ಳಬೇಕು ಎಂದು ಏಮ್ಸ್​ ನಿರ್ದೇಶಕ ಡಾ. ರಣದೀಪ್​ ಗುಲೇರಿಯಾ ಹೇಳಿದ್ದಾರೆ.

ಇದನ್ನೂ ಓದಿ: ನಿವೇದಿತಾ ಗೌಡ ಅವರನ್ನೇ ಮಣಿಸಿದ ಮಾತಿನ ಮಲ್ಲಿ ವಂಶಿಕಾ; ಮಾಸ್ಟರ್​ ಆನಂದ್​ ಪುತ್ರಿಯ ಮಸ್ತ್​ ಮಾತುಕತೆ

Published On - 9:34 am, Thu, 23 December 21

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್