AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನ್ನ ಕೈ ಬಂಧಿಯಾಗಿದೆ ಎಂದು ಸರಣಿ ಟ್ವೀಟ್; ಪಕ್ಷದಲ್ಲಿ ಏನಾಗಿದೆ ಎಂದು ಕೇಳಿದ್ದಕ್ಕೆ ಮಜಾ ಮಾಡಿ ಎಂದು ಪ್ರತಿಕ್ರಿಯಿಸಿದ ಹರೀಶ್ ರಾವತ್

Harish Rawat ಈ ಬಗ್ಗೆ ಇಂದು ಮಾಧ್ಯಮದವರು ಕೇಳಿದಾಗ ಹರೀಶ್ ರಾವತ್ ಸಿಡಿಮಿಡಿಗೊಂಡರು. ಸಮಯ ಬಂದಾಗ ಎಲ್ಲವನ್ನೂ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ನಿಮ್ಮೊಂದಿಗೆ ಮಾತನಾಡದಿದ್ದರೆ ನಾನು ಬೇರೆ ಯಾರೊಂದಿಗೆ ಮಾತನಾಡುತ್ತೇನೆ? ನಾನು ನಿಮಗೆ ಕರೆ ಮಾಡುತ್ತೇನೆ. ಸದ್ಯಕ್ಕೆ ಜಸ್ಟ್ ಹ್ಯಾವ್ ಫನ್ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ನನ್ನ ಕೈ ಬಂಧಿಯಾಗಿದೆ ಎಂದು ಸರಣಿ ಟ್ವೀಟ್; ಪಕ್ಷದಲ್ಲಿ ಏನಾಗಿದೆ ಎಂದು ಕೇಳಿದ್ದಕ್ಕೆ ಮಜಾ ಮಾಡಿ ಎಂದು ಪ್ರತಿಕ್ರಿಯಿಸಿದ ಹರೀಶ್ ರಾವತ್
ಹರೀಶ್ ರಾವತ್
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Dec 23, 2021 | 1:17 PM

Share

ದೆಹಲಿ: ಉತ್ತರಾಖಂಡದ (Uttarakhand) ಕಾಂಗ್ರೆಸ್ (Congress) ನಾಯಕ ಹರೀಶ್ ರಾವತ್ (Harish Rawat) ಇಂದು ತಮ್ಮ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಸೂಚನೆ ನೀಡಿದ್ದಾರೆ. ಬುಧವಾರ ಪಕ್ಷದ ನೇತೃಕ್ವನ್ನು ಗುರಿಯಾಗಿಸಿಕೊಂಡು ಮಾಡಿದ ಟ್ವೀಟ್‌ಗಳಿಗೆ ಯಾವುದೇ ವಿವರಣೆಯನ್ನು ನೀಡಲಿಲ್ಲ. ಈ ಬಗ್ಗೆ ಮಾಧ್ಯಮದವರು ಕೇಳಿದಾಗ ಸಮಯ ಬಂದಾಗ ಮಾತನಾಡುತ್ತೇನೆ ಎಂದು ಹೇಳಿದ್ದಾರೆ. ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಉತ್ತರಾಖಂಡ್ ಚುನಾವಣೆಗೆ ಕಾಂಗ್ರೆಸ್‌ನ ಮುಖವಾಗಿ ಕಾಣುವ ಹರೀಶ್ ರಾವತ್ ಅವರು ನಿನ್ನೆ ತಮ್ಮ ಟ್ವೀಟ್‌ಗಳಲ್ಲಿ ತಮ್ಮ ಕೈಗಳನ್ನು ಕಟ್ಟಲಾಗಿದೆ ಎಂದು ಭಾವಿಸಿದ್ದೇನೆ, ನಾನು ವಿಶ್ರಾಂತಿ ಪಡೆಯಲು ಬಯಸುತ್ತೇನೆ.ಯಾವ ಮಾರ್ಗದ ಆಯ್ದುಕೊಳ್ಳಬೇಕು ಎಂಬುದಕ್ಕೆ ಕೇದಾರನಾಥ ಭಗವಂತನ ಮಾರ್ಗದರ್ಶನವನ್ನು ನಿರೀಕ್ಷಿಸುತ್ತೇನೆ ಎಂದು ಹೇಳಿದ್ದಾರೆ. ಈ ಬಗ್ಗೆ ಇಂದು ಮಾಧ್ಯಮದವರು ಕೇಳಿದಾಗ ಅವರು ಸಿಡಿಮಿಡಿಗೊಂಡರು. ಸಮಯ ಬಂದಾಗ ಎಲ್ಲವನ್ನೂ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ನಿಮ್ಮೊಂದಿಗೆ ಮಾತನಾಡದಿದ್ದರೆ ನಾನು ಬೇರೆ ಯಾರೊಂದಿಗೆ ಮಾತನಾಡುತ್ತೇನೆ? ನಾನು ನಿಮಗೆ ಕರೆ ಮಾಡುತ್ತೇನೆ. ಸದ್ಯಕ್ಕೆ ಜಸ್ಟ್ ಹ್ಯಾವ್ ಫನ್” ಎಂದು ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಪ್ರತಿಕ್ರಿಯಿಸಿದ್ದಾರೆ. ಅವರ ಈ ಪ್ರತಿಕ್ರಿಯೆ ಕಾಂಗ್ರೆಸ್​​ನ್ನು ಮತ್ತಷ್ಟು ಚಿಂತೆಗೀಡು ಮಾಡಬಹುದು.

ಟ್ವಿಟರ್​​ನಲ್ಲಿ ರಾವತ್ ಅವರ ವಾಗ್ದಾಳಿಯನ್ನು 23 ಕಾಂಗ್ರೆಸ್ “ಭಿನ್ನಮತೀಯರ” ಗುಂಪು “G-23” ನ ನಾಯಕರು ಕೈಗೆತ್ತಿಕೊಂಡಿದ್ದಾರೆ. ಈ ನಾಯಕರುರು ಕಳೆದ ವರ್ಷ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ “ಗೋಚರ, ಪೂರ್ಣ ಸಮಯದ ನಾಯಕತ್ವ ಸೇರಿದಂತೆ ವ್ಯಾಪಕವಾದ ಸುಧಾರಣೆಗಳನ್ನು ಕೇಳುವ ಪತ್ರದಲ್ಲಿ ಅಭೂತಪೂರ್ವ ಹೆಜ್ಜೆಯನ್ನು ತೆಗೆದುಕೊಂಡಿದ್ದರು.  ಪ್ರಮುಖ G-23 ಸದಸ್ಯರಾದ ಮನೀಶ್ ತಿವಾರಿ ಅವರು ತಮ್ಮ ಪಕ್ಷವನ್ನು ಟ್ವೀಟ್ ಮೂಲಕ ಸೂಕ್ಷ್ಮವಾಗಿ ಚಾಟಿ ಬೀಸಿದ್ದಾರೆ.

“ಮೊದಲು ಅಸ್ಸಾಂ, ನಂತರ ಪಂಜಾಬ್, ಈಗ ಉತ್ತರಾಖಂಡ. ಭೋಗ್ ಪೂರಾ ಹೈ ಪೌನ್ ಗಯೇ ಕಸರ್ ನಾ ರಹೇ ಜಾವೇ ಕೋಯಿ (ಪಕ್ಷವನ್ನು ನಾಶಮಾಡುವುದಕ್ಕೆ ಯಾವುದೇ ಪ್ರಯತ್ನಗಳನ್ನು ಬಿಡಬೇಡಿ) ಎಂದು ಕಾಂಗ್ರೆಸ್ ನಾಯಕ ಬರೆದಿದ್ದಾರೆ.

ಪಂಜಾಬ್‌ನಲ್ಲಿ ಅಮರಿಂದರ್ ಸಿಂಗ್ ಮತ್ತು ನವಜೋತ್ ಸಿಂಗ್ ಸಿಧು ನಡುವಿನ ವೈಷಮ್ಯವು ಚುನಾವಣೆಗೆ ಮುಂಚಿತವಾಗಿ ಪಕ್ಷವನ್ನು ವಿಭಜಿಸುವ ಬೆದರಿಕೆ ಹಾಕಿದಾಗ ಕೆಲವೇ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರಾದ ರಾವತ್ ಅಲ್ಲಿ ಮಾತಿನಿಂದಲೇ ಅದನ್ನು ನಿಭಾಯಿಸಿದ್ದರು. ಉತ್ತರಾಖಂಡ ಮತ್ತು ಪಂಜಾಬ್ ಮುಂದಿನ ವರ್ಷದ ಆರಂಭದಲ್ಲಿ ಹೊಸ ಸರ್ಕಾರಗಳಿಗೆ ಮತ ಹಾಕಲು ನಿರ್ಧರಿಸಿರುವ ಐದು ರಾಜ್ಯಗಳಲ್ಲಿ ಸೇರಿವೆ.

“ಇದು ವಿಚಿತ್ರವಲ್ಲವೇ? ನಾವು ಈ ಚುನಾವಣಾ ಸಮುದ್ರದಲ್ಲಿ ಈಜಬೇಕು, ಆದರೆ ನನ್ನನ್ನು ಬೆಂಬಲಿಸುವ ಬದಲು, ಸಂಘಟನೆಯು ನನಗೆ ಬೆನ್ನು ತಿರುಗಿಸಿದೆ ಅಥವಾ ನಕಾರಾತ್ಮಕ ಪಾತ್ರವನ್ನು ವಹಿಸುತ್ತಿದೆ” ಎಂದು ರಾವತ್ ಟ್ವೀಟ್ ಮಾಡಿದ್ದಾರೆ.

ಫೇಸ್‌ಬುಕ್ ಪೋಸ್ಟ್‌ ಮತ್ತು ತಮ್ಮ ಅಧಿಕೃತ ಟ್ವಿಟರ್ ಖಾತೆಯಿಂದ ಮಾಡಿದ ಸರಣಿ ಟ್ವೀಟ್‌ಗಳಲ್ಲಿ ರಾವತ್ ಅವರು  ಅಧಿಕಾರವು ಚುನಾವಣಾ ಸಾಗರದಲ್ಲಿ ಹಲವಾರು ಮೊಸಳೆಗಳನ್ನು ಬಿಟ್ಟದೆ. ನಾನು ಈಜಲೇ ಬೇಕು. ಪ್ರತಿನಿಧಿಗಳ ಆದೇಶದ ಮೇರೆಗೆ ನಾನು ಈಜುತ್ತಿದ್ದು ನನ್ನ ಕೈಕಟ್ಟಿ ಹಾಕಲಾಗಿದೆ ಎಂದಿದ್ದಾರೆ.  ನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ತಮ್ಮ ಪೋಸ್ಟ್‌ಗಳ ಬಗ್ಗೆ ವಿವರಣೆ ನೀಡಲು ನಿರಾಕರಿಸಿದರು. ಚುನಾವಣೆಯ ಸಾಗರದಲ್ಲಿ ನಾನು ಹೇಗೆ ಈಜಬೇಕು ಎಂಬುದು ವಿಚಿತ್ರವಾಗಿದೆ. ಸಹಾಯಕ್ಕಾಗಿ ತನ್ನ ತೋಳುಗಳನ್ನು ಚಾಚುವ ಬದಲು, ಸಂಘಟನೆಯು ನನ್ನನ್ನು ನಿರ್ಲಕ್ಷಿಸುತ್ತಿದೆ ಅಥವಾ ನಕಾರಾತ್ಮಕ ಪಾತ್ರವನ್ನು ವಹಿಸುತ್ತಿದೆ. ನಾಯಕತ್ವವು ನಾನು ಈಜಬೇಕಾದ ಸಾಗರದಲ್ಲಿ ಹಲವಾರು ಮೊಸಳೆಗಳನ್ನು ಬಿಟ್ಟಿದೆ ಎಂದು ರಾವತ್ ಟ್ವೀಟ್ ಮಾಡಿದ್ದಾರೆ.

ಯಾರ ಆದೇಶದ ಮೇರೆಗೆ ನಾನು ಈಜಬೇಕೋ ಆ ಪ್ರತಿನಿಧಿಗಳು ನನ್ನ ಕೈ-ಕಾಲುಗಳನ್ನು ಕಟ್ಟುತ್ತಿದ್ದಾರೆ. ಹಲವಾರು ಸಂದರ್ಭಗಳಲ್ಲಿ, ನಾನು ಸಾಕಷ್ಟು ಈಜಿದ್ದೇನೆ ಮತ್ತು ಇದು ವಿಶ್ರಾಂತಿ ಸಮಯ ಎಂದು ನನ್ನ ಮನಸ್ಸಿಗೆ ಅನಿಸಿತ್ತದೆ. ಆಗ ಇನ್ನೊಂದು ಧ್ವನಿ ಏಳುತ್ತದೆ,  ನೀನು ಎಂದಿಗೂ ಅಸಹಾಯಕನಾಗಿರಬೇಡ ಮತ್ತು ಓಡಿಹೋಗಬೇಡ ಎಂದು ಕೇಳುತ್ತದೆ. ನಾನು ಸಂದಿಗ್ಧ ಪರಿಸ್ಥಿತಿಯಲ್ಲಿದ್ದೇನೆ. ಹೊಸ ವರ್ಷ ನನ್ನ ದಾರಿಯನ್ನು ತೋರಿಸಲಿ. ಭಗವಾನ್ ಕೇದಾರನಾಥ ನನಗೆ ದಾರಿ ತೋರಿಸುತ್ತಾನೆ ಎಂದು ನನಗೆ ಖಾತ್ರಿಯಿದೆ ಎಂದು ಅವರು ಇನ್ನೊಂದು ಟ್ವೀಟ್ ಮಾಡಿದ್ದಾರೆ.

ರಾವತ್ ಅವರು “ನೋವಿನಿಂದ” ಕಾಣಿಸಿಕೊಂಡಿದ್ದಾರೆ ಮತ್ತು ವಿಶ್ರಾಂತಿ ಪಡೆಯಬೇಕು ಎಂದು ಬಿಜೆಪಿಯ ತೀರತ್ ಸಿಂಗ್ ರಾವತ್ ಹೇಳಿದ್ದಾರೆ. “ಹರೀಶ್ ರಾವತ್ ಏನಾದರೂ ಹೇಳಿದರೆ, ಖಂಡಿತವಾಗಿಯೂ ತಪ್ಪಾಗಿದೆ. ಇದು ಕಾಂಗ್ರೆಸ್ ಆಂತರಿಕ ವಿಷಯ. ಪಕ್ಷದಲ್ಲಿ ಬಿರುಕು ಇದೆ” ಎಂದು ಮಾಜಿ ಮುಖ್ಯಮಂತ್ರಿ ತೀರತ್ ರಾವತ್ ಸುದ್ದಿಗಾರರಿಗೆ ತಿಳಿಸಿದರು. ಈ ಭಿನ್ನಾಭಿಪ್ರಾಯದಿಂದ ಬಿಜೆಪಿಗೆ ಲಾಭವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಚುನಾವಣೆಯಲ್ಲಿ ಇದು ಕಾಂಗ್ರೆಸ್ ಮೇಲೆ ಪರಿಣಾಮ ಬೀರುತ್ತದೆ ಸಹಜವಾಗಿ ಬಿಜೆಪಿಗೆ ಲಾಭವಾಗುತ್ತದೆ. ಅವರು ದೊಡ್ಡ ನಾಯಕ ಮತ್ತು ಸಾಕಷ್ಟು ಅನುಭವ ಹೊಂದಿದ್ದಾರೆ. ಅವರು ಹೇಳುತ್ತಿರುವಂತೆ ಅವರು ಈಗ ವಿಶ್ರಾಂತಿ ತೆಗೆದುಕೊಳ್ಳಬೇಕು ಎಂದಿದ್ದಾರೆ.

ಇದನ್ನೂ ಓದಿ: ಕೈ ಬಂಧಿಯಾಗಿದೆ, ನಾನು ಸಂದಿಗ್ಧ ಪರಿಸ್ಥಿತಿಯಲ್ಲಿದ್ದೇನೆ ಎಂದ ಹರೀಶ್ ರಾವತ್; ಉತ್ತರಾಖಂಡ ಕಾಂಗ್ರೆಸ್​​ನಲ್ಲಿ ಎದುರಾಯಿತೇ ಸಂಕಷ್ಟ?

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ