ಕೇಂದ್ರ ಸರ್ಕಾರದ ನಿರ್ಧಾರ ಸ್ವೀಕರಿಸಿದ್ದೇವೆ, ನಿಷೇಧದ ಕೆಲವೇ ಗಂಟೆಗಳಲ್ಲಿ ಸಂಘಟನೆಯನ್ನು ವಿಸರ್ಜಿಸಿದ ಪಿಎಫ್ಐ

| Updated By: ರಶ್ಮಿ ಕಲ್ಲಕಟ್ಟ

Updated on: Sep 28, 2022 | 7:02 PM

ಈ ಬಗ್ಗೆ ಹೇಳಿಕೆ ನೀಡಿದ ಪಿಎಫ್ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಎ.ಅಬ್ದುಲ್ ಸತ್ತಾರ್ ಕೇಂದ್ರ ಗೃಹ ಸಚಿವಾಲಯ ಸಂಘಟನೆಯನ್ನು ನಿಷೇಧಿಸುವ ಅಧಿಸೂಚನೆ ಹೊರಡಿಸಿದ್ದು, ನಮ್ಮ ಸಂಘಟನೆಯನ್ನು ವಿಸರ್ಜಿಸುತ್ತೇವೆ ಎಂದಿದ್ದಾರೆ.

ಕೇಂದ್ರ ಸರ್ಕಾರದ ನಿರ್ಧಾರ ಸ್ವೀಕರಿಸಿದ್ದೇವೆ,  ನಿಷೇಧದ ಕೆಲವೇ ಗಂಟೆಗಳಲ್ಲಿ ಸಂಘಟನೆಯನ್ನು ವಿಸರ್ಜಿಸಿದ ಪಿಎಫ್ಐ
ಪಿಎಫ್ಐ (ಸಂಗ್ರಹ ಚಿತ್ರ)
Follow us on

ಕೇಂದ್ರ ಸರ್ಕಾರ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (Popular Front of India) ಮತ್ತು ಅದರ ಸಹವರ್ತಿ ಸಂಘಟನೆಗಳನ್ನು ನಿಷೇಧಿಸಿದ ಕೆಲವೇ ಗಂಟೆಗಳ ನಂತರ ತಮ್ಮ ಸಂಘಟನೆಯನ್ನು ವಿಸರ್ಜಿಸಿರುವುದಾಗಿ ಪಿಎಫ್ಐ (PFI) ಬುಧವಾರ ಘೋಷಿಸಿದೆ. ಈ ಬಗ್ಗೆ ಹೇಳಿಕೆ ನೀಡಿದ ಪಿಎಫ್ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಎ.ಅಬ್ದುಲ್ ಸತ್ತಾರ್ ಕೇಂದ್ರ ಗೃಹ ಸಚಿವಾಲಯ ಸಂಘಟನೆಯನ್ನು ನಿಷೇಧಿಸುವ ಅಧಿಸೂಚನೆ ಹೊರಡಿಸಿದ್ದು, ನಮ್ಮ ಸಂಘಟನೆಯನ್ನು ವಿಸರ್ಜಿಸುತ್ತೇವೆ ಎಂದಿದ್ದಾರೆ. ದೇಶದ ಕಾನೂನಿಗೆ ತಲೆ ಬಾಗುವ ಪ್ರಜೆಯಾಗಿದ್ದು, ನಾವು ಕೇಂದ್ರ ಸಚಿವಾಲಯದ ನಿರ್ಧಾರ ಸ್ವೀಕರಿಸುತ್ತಿದ್ದೇವೆ ಎಂದಿದ್ದಾರೆ. ಪಿಎಫ್ಐ ಕಳೆದ ಮೂರು ದಶಕಗಳಿಂದ ಸಮಾಜದ ಕೆಳವರ್ಗದಲ್ಲಿರುವ, ಅಂಚಿನಲ್ಲಿರುವ, ದಮನಿತ ವರ್ಗದವರ ಸಾಮಾಜಿಕ-ಆರ್ಥಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿಗಾಗಿ ಸ್ಪಷ್ಟ ಗುರಿಯೊಂದಿಗೆ ಕೆಲಸ ಮಾಡುತ್ತಿದೆ. ಆದರೆ ಮಹಾನ್ ದೇಶದ ಕಾನೂನು ಪಾಲಿಸುವ ಪ್ರಜೆಯಾಗಿ ನಮ್ಮ ಸಂಘಟನೆ ಕೇಂದ್ರ ಗೃಹ ಸಚಿವಾಲಯದ ನಿರ್ಧಾರಗಳನ್ನು ಸ್ವೀಕರಿಸುತ್ತದೆ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವನ್ನು ವಿಸರ್ಜಿಸಲಾಗಿದೆ ಎಂದು ನಾವು ಸಂಘಟನೆಯ ಎಲ್ಲ ಸದಸ್ಯರಿಗೆ ಮತ್ತು ಸಾರ್ವಜನಿಕರಿಗೆ ಈ ಮೂಲಕ ತಿಳಿಸುತ್ತಿದ್ದೇವೆ. ಈ ಅಧಿಸೂಚನೆ ಪ್ರಕಟವಾದ ಕೂಡಲೇ ಪಿಎಫ್ಐ ಸಂಘಟನೆಯ ಎಲ್ಲ ಸದಸ್ಯರು ತಮ್ಮ ಚಟುವಟಿಕೆಗಳನ್ನು ನಿಲ್ಲಿಸಬೇಕು ಎಂದು ಕೇಳಿಕೊಳ್ಳುತ್ತೇನೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕೇಂದ್ರ ಗೃಹ ಸಚಿವಾಲಯ ಬುಧವಾರ ಬೆಳಗ್ಗೆ ಪಿಎಫ್ಐ ಮತ್ತು ಅದಕ್ಕೆ ಸಂಬಂಧಿಸಿದ ಸಂಘಟನೆಗಳನ್ನು ನಿಷೇಧಿಸಿದೆ. ರಿಹ್ಯಾಬ್ ಇಂಡಿಯಾ ಫೌಂಡೇಶನ್ (RIF) ಮತ್ತು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ, ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ ಅಡಿಯಲ್ಲಿ ಐದು ವರ್ಷಗಳವರೆಗೆ ನಿಷೇಧ ವಿಧಿಸಿದೆ.
ಐದು ದಿನಗಳಲ್ಲಿ ಈ ಸಂಘಟನೆಗಳ ಮೇಲೆ ಎರಡನೇ ರಾಷ್ಟ್ರವ್ಯಾಪಿ ದಮನದ ಒಂದು ದಿನದ ನಂತರ ನಿಷೇಧವು ಬಂದಿದೆ. ಏಳು ರಾಜ್ಯಗಳಾದ್ಯಂತ ಪೊಲೀಸ್ ತಂಡಗಳು ಮಂಗಳವಾರ ದಾಳಿ ನಡೆಸಿ 270 ಕ್ಕೂ ಹೆಚ್ಚು ಜನರನ್ನು ಬಂಧಿಸಿವೆ.

Published On - 6:43 pm, Wed, 28 September 22