
ತೆರೆಯ ಮರೆಯಲ್ಲಿ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದರೂ ಆರ್‌ಎಸ್‌ಎಸ್ (RSS) ಅನ್ನು ಬಹುಸಂಖ್ಯಾತವಾದದ ಮೂಲಕವಷ್ಟೇ ನೋಡಲಾಗುತ್ತದೆ. ಈ ದೃಷ್ಟಿಕೋನದಿಂದ ಆರ್‌ಎಸ್‌ಎಸ್ ಅನ್ನು ನೋಡುವುದು ತಪ್ಪಾಗುತ್ತದೆ ಮತ್ತು ಅದು ಮಾಡಿದ ಅನೇಕ ಸಾಮಾಜಿಕ ಕಾರ್ಯಗಳನ್ನು ನಿರ್ಲಕ್ಷಿಸಿದಂತೆ ಎಂದು ಕೇಂದ್ರ ಸಚಿವ ಸಚಿವ ಭೂಪೇಂದ್ರ ಯಾದವ್ (Bhupendra Yadav) ಇತ್ತೀಚೆಗೆ ಹೇಳಿದ್ದರು. ನಾವು ಸಮಾಜವನ್ನು ಒಟ್ಟುಗೂಡಿಸಲು ಕೆಲಸ ಮಾಡುತ್ತೇವೆ. ಭಗವಾನ್ ಬುದ್ಧನ ಆಲೋಚನೆಗಳು ಮತ್ತು ಸಂಘದ ಆಲೋಚನೆಗಳು ಒಂದೇ ಆಗಿವೆ ಅವರು ಹೇಳಿದ್ದರು. ಈ ಹೇಳಿಕೆಯು ಆರ್‌ಎಸ್‌ಎಸ್ ತನ್ನ ಜಾಗತಿಕ ದೃಷ್ಟಿಕೋನದ ಸಂಪೂರ್ಣ ಚಿತ್ರವನ್ನು ಜನರಿಗೆ ತಲುಪಿಸಲು ವಿಫಲವಾಗಿದೆ ಎಂಬುದನ್ನು ಒಪ್ಪಿಕೊಂಡಂತೆಯೇ ಆಗಿದೆ. ಆದರೆ, ಇದಕ್ಕೆ ಮುಖ್ಯ ಕಾರಣವೆಂದರೆ ಸಮೂಹ ಮಾಧ್ಯಮದೊಂದಿಗೆ ಆರ್‌ಎಸ್‌ಎಸ್‌ನ ಸಂವಹನದ ಕೊರತೆಯಾಗಿದ್ದು, ಕಳೆದ ಕೆಲವು ವರ್ಷಗಳಿಂದ ಈ ನಿಟ್ಟಿನಲ್ಲಿ ಆರ್‌ಎಸ್‌ಎಸ್ ಬದಲಾಗುತ್ತಿದೆ ಎಂದು.
ತನ್ನ ಸಾಮಾಜಿಕ ಕಾರ್ಯವನ್ನು ದಾಖಲಿಸುವ ರಚನಾತ್ಮಕ ಕಾರ್ಯಕ್ರಮದ ಮೂಲಕ ಆರ್‌ಎಸ್‌ಎಸ್ ಬದಲಾಗುತ್ತಿದೆ. ಸಾಂಪ್ರದಾಯಿಕವಾಗಿ ಮಾಧ್ಯಮಗಳ ಜತೆ ತೆರೆದುಕೊಳ್ಳಲು ಹಿಂಜರಿಯುತ್ತಿದ್ದ ಸಂಘವು ಈಗ ತನ್ನ ದೈನಂದಿನ ಕೆಲಸ ಮತ್ತು ಆಂತರಿಕ ಕಾರ್ಯಗಳ ಬಗ್ಗೆ ಮಾಹಿತಿಯನ್ನು ಸಕ್ರಿಯವಾಗಿ ಹಂಚಿಕೊಳ್ಳುತ್ತಿದೆ. ಸಂಘದ ಉನ್ನತ ನಾಯಕರು ಪತ್ರಕರ್ತರೊಂದಿಗೆ ಸಂವಹನ ನಡೆಸಲು ಉತ್ಸುಕರಾಗುತ್ತಿರುವುದಲ್ಲದೆ ಕಾರ್ಯಕ್ರಮಗಳನ್ನು ಎಲ್ಲರಿಗೂ ಮುಕ್ತವಾಗಿರಿಸಿಕೊಳ್ಳುತ್ತಾರೆ. ಈ ಮೂಲಕ ಆರ್‌ಎಸ್‌ಎಸ್ ಬದಲಾಗುತ್ತಿದೆ ಮತ್ತು ಹೇಗೆ ಬದಲಾಗುತ್ತಿದೆ ಎಂಬ ವಿವರವನ್ನು ‘ದಿ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:02 pm, Sat, 30 September 23