ಭೋಪಾಲ್, ನ.7: ಛತ್ತೀಸ್‌ಗಢನಲ್ಲಿ ಇಂದು ಚುನಾವಣೆ ನಡೆಯುತ್ತಿದೆ. ಈ ಮಧ್ಯೆ ಛತ್ತೀಸ್‌ಗಢ ಸಿಎಂ ಭೂಪೇಶ್ ಬಘೇಲ್ (bhupesh baghel) ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬಂದಿದೆ. ಕೇಂದ್ರ ಸರ್ಕಾರದ ಸಚಿವರು ಕೂಡ ಈ ಬಗ್ಗೆ ಆರೋಪ ಮಾಡಿದ್ದಾರೆ. ಭೂಪೇಶ್ ಬಘೇಲ್ ಅವರು ಮಹಾದೇವ್ ಬೆಟ್ಟಿಂಗ್ ಆ್ಯಪ್ (mahadev online betting) ಪ್ರವರ್ತಕರಿಂದ 508 ಕೋಟಿ ರೂಪಾಯಿಗಳನ್ನು ಪಡೆದಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ಕೇಂದ್ರ ಸಚಿವ ಅನುರಾಗ್ ಠಾಕೂರ್ (anurag thakur) ಅವರು ಮಾತನಾಡಿದ್ದಾರೆ. ಕಾಂಗ್ರೆಸ್ ಪಕ್ಷದವರು ದೊಡ್ಡ ದರೋಡೆಕೋರ ಎಂದು ಹೇಳಿದ್ದಾರೆ. ಮಹಾದೇವ್ ಆ್ಯಪ್‌ನಿಂದ ಪಡೆದ ಹಣವನ್ನು ಮುಖ್ಯಮಂತ್ರಿ ಹಾಗೂ ಅವರ ಮಂತ್ರಿಗಳಿಗೆ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.
ಭೂಪೇಶ್ ಬಘೇಲ್ ಅವರ ಸರ್ಕಾರದಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ. ಈಗ ಮಹಾದೇವ್ ಆಪ್ ಭ್ರಷ್ಟಾಚಾರ ಕೂಡ ಒಂದು. ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಭ್ರಷ್ಟಾಚಾರ ಮಾಡುತ್ತಿದೆ ಎಂದು ಸಚಿವ ಅನುರಾಗ್ ಠಾಕೂರ್ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ಭೂಪೇಶ್ ಬಾಘೇಲ್ ಮಹದೇವ್ ಆ್ಯಪ್‌ನಿಂದ 508 ಕೋಟಿ ತೆಗೆದುಕೊಂಡಿದ್ದಾರೆ. ಅದಕ್ಕೆ ಈ ಆಪ್ನ್ನು ಬ್ಯಾನ್ ಮಾಡಿಲ್ಲ. ಇನ್ನು ಇದನ್ನು ಬ್ಯಾನ್ ಮಾಡಲು ಕೇಂದ್ರಕ್ಕೆ ಪತ್ರ ಬರೆದಿದ್ದಾರಾ? ಈ ಯಾವ ಪ್ರಶ್ನೆಗೂ ಉತ್ತರ ನೀಡುತ್ತಿಲ್ಲ. ಎಷ್ಟು ದಿನ ಪ್ರಶ್ನೆಗಳಿಂದ ಓಡುತ್ತೀರಿ? ಈಗ ಛತ್ತೀಸ್‌ಗಢವು ‘ಭಾಗ್ ಭೂಪೇಶ್ ಭಾಗ್’ ಎಂದು ಹೇಳುತ್ತಿದೆ. ಇನ್ನು ದೆಹಲಿ ನಾಯಕರಾದ ಮನೀಶ್ ಸಿಸೋಡಿಯಾ ಮತ್ತು ಸತ್ಯೇಂದ್ರ ಜೈನ್ ಹಾಗೂ ಅರವಿಂದ್ ಕೇಜ್ರಿವಾಲ್ ಎಲ್ಲಿಗೆ ಹೋಗಿದ್ದಾರೆ, ಅಲ್ಲಿಗೆ ನೀವು ಹೋಗುತ್ತಿರ ಎಂದು ಹೇಳಿದ್ದಾರೆ.
ಈಗಾಗಲೇ ಆನ್‌ಲೈನ್ ಬೆಟ್ಟಿಂಗ್ ಹಗರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಇಡಿ) ಮಹದೇವ್ ಬುಕ್ ಆ್ಯಪ್ ಮನಿ ಲಾಂಡರಿಂಗ್ ಪ್ರಕರಣವು ಮತ್ತೆ ಮರುಜೀವ ಪಡೆದುಕೊಂಡಿದೆ, ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಅವರ ಕೈವಾಡ ಇದೆ ಎಂಬ ಆರೋಪದ ಮೇಲೆ ಇಡಿ ಪ್ರಕರಣ ದಾಖಲಿಸಿಕೊಂಡಿದೆ. ಈ ಆ್ಯಪ್ ಅನ್ನು ದುಬೈ ಮೂಲದ ಜ್ಯೂಸ್ ಮಾರಾಟಗಾರ ಸೌರಭ್ ಚಂದ್ರಕರ್ ಮತ್ತು ಅವರ ಸಹಚರ ರವಿ ಉಪ್ಪಲ್ ನಡೆಸುತ್ತಿದ್ದರು. ಈ ಇಬ್ಬರು ಛತ್ತೀಸ್‌ಗಢ ಮೂಲದವರು ಎಂದು ಹೇಳಲಾಗಿದೆ. ಈ ಆಪ್ಯ ಇತರ ಕಾನೂನುಬಾಹಿರ ಚಟುವಟಿಕೆಗಳಿಗೆ ಅವಕಾಶ ನೀಡಿದೆ. ಆನ್‌ಲೈನ್ ಕ್ಯಾಸಿನೊ ಮತ್ತು ಬೆಟ್ಟಿಂಗ್ ಪ್ಲಾಟ್‌ಫಾರ್ಮ್‌ಗಳನ್ನು ಕೂಡ ನೀಡುತ್ತದೆ ಎಂದು ಇಡಿ ಹೇಳಿದೆ.
ಇದನ್ನೂ ಓದಿ; ಮಹಾದೇವ್ ಬೆಟ್ಟಿಂಗ್ ಆ್ಯಪ್ ಪ್ರಕರಣ: ಛತ್ತೀಸ್‌ಗಢ ಸಿಎಂ ಭೂಪೇಶ್ ಬಘೇಲ್ ವಿರುದ್ಧ ಪ್ರಲ್ಹಾದ್ ಜೋಶಿ ವಾಗ್ದಾಳಿ
ಇನ್ನು ಬಾಲಿವುಡ್ ತಾರೆಯಾರದ ರಣಬೀರ್ ಕಪೂರ್, ಹುಮಾ ಖುರೇಷಿ, ಬೊಮನ್ ಇರಾನಿ ಮತ್ತು ಶ್ರದ್ಧಾ ಕಪೂರ್ನ್ನು ಇಡಿ ವಿಚಾರಣೆಗೆ ಕರೆಸಿಕೊಂಡಿದೆ. ಈಗಾಗಲೇ ಛತ್ತೀಸ್‌ಗಢ ಚುನಾವಣೆ ನಡೆಯುತ್ತಿದ್ದು, ಸಿಎಂ ಮೇಲೆ ಇಂತಹ ಬಹುದೊಡ್ಡ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಇಡಿ ತನಿಖೆಯನ್ನು ನಡೆಸುತ್ತಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ