‘ಅಮಿತ್​ ಜೀ, ನೀವು ಕಾಶ್ಮೀರಿ ಪಂಡಿತರನ್ನು ವಾಪಸ್ ಕರೆತಂದಿರಾ?’-ಕಾಂಗ್ರೆಸ್ ನಾಯಕ ಅಧೀರ್​ ರಂಜನ್​ ಚೌಧರಿ ಪ್ರಶ್ನೆ

|

Updated on: Feb 13, 2021 | 6:10 PM

ನೀವು ಗಿಲ್ಗಿಟ್​ ಬಲ್ಟಿಸ್ತಾನವನ್ನು ವಾಪಸ್​ ತರುತ್ತೇವೆ ಎನ್ನುತ್ತಿದ್ದೀರಿ, ಆದರೆ ಅದಕ್ಕೂ ಮೊದಲು ಕಾಶ್ಮೀರ ವ್ಯಾಲಿಯಲ್ಲಿ ಪಡಬಾರದ ಕಷ್ಟ ಅನುಭವಿಸಿ, ಹೋದವರನ್ನು, ಸ್ಥಳಾಂತರ ಆದವರನ್ನು ಕರೆತನ್ನಿ ಎಂದು ಅಧೀರ್​ ರಂಜನ್ ಚೌಧರಿ ಹೇಳಿದರು.

‘ಅಮಿತ್​ ಜೀ, ನೀವು ಕಾಶ್ಮೀರಿ ಪಂಡಿತರನ್ನು ವಾಪಸ್ ಕರೆತಂದಿರಾ?-ಕಾಂಗ್ರೆಸ್ ನಾಯಕ ಅಧೀರ್​ ರಂಜನ್​ ಚೌಧರಿ ಪ್ರಶ್ನೆ
ಗೃಹ ಸಚಿವ ಅಮಿತ್​ ಶಾ ಮತ್ತು ಕಾಂಗ್ರೆಸ್​ ನಾಯಕ ಅಧೀರ್​ ರಂಜನ್​ ಚೌಧರಿ
Follow us on

ದೆಹಲಿ: ಜಮ್ಮು-ಕಾಶ್ಮೀರದಲ್ಲಿ ಆರ್ಟಿಕಲ್ 370 (ವಿಶೇಷ ಸ್ಥಾನಮಾನ)ನ್ನು ರದ್ದುಗೊಳಿಸುವ ಮೊದಲು ನೀಡಿದ್ದ ಅಭಿವೃದ್ಧಿ ಭರವಸೆಗಳನ್ನೆಲ್ಲ ಈಡೇರಿಸಿದ್ದೀರಾ ಎಂದು ಕಾಂಗ್ರೆಸ್​ ನಾಯಕ ಅಧೀರ್​ ರಂಜನ್​ ಚೌಧರಿಯವರು, ಗೃಹ ಸಚಿವ ಅಮಿತ್​ ಶಾ ಅವರನ್ನು ಪ್ರಶ್ನಿಸಿದರು. ಇಂದು ಲೋಕಸಭೆಯಲ್ಲಿ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅಧೀರ್ ರಂಜನ್ ಚೌಧರಿ, ಜಮ್ಮುಕಾಶ್ಮೀರದಲ್ಲಿನ ವಿಶೇಷ ಸ್ಥಾನಮಾನ ರದ್ದುಗೊಳಿಸುವ ಮೊದಲು ನೀವು ನೀಡಿದ್ದ ಭರವಸೆಯೆಲ್ಲ ಹಾಗೇ ಇದೆ. ಯಾವುದೂ ಪೂರ್ಣಗೊಂಡಿಲ್ಲ. ಅಷ್ಟೇ ಏಕೆ, ಇಂದಿಗೂ ಸಹ ಜಮ್ಮು-ಕಾಶ್ಮೀರ ಸಹಜ ಸ್ಥಿತಿಗೆ ಮರಳಿಲ್ಲ ಎಂದು ಹೇಳಿದರು.

ಕಾಶ್ಮೀರದಲ್ಲಿ ಸುಮಾರು 90 ಸಾವಿರ ಕೋಟಿ ರೂ.ಮೌಲ್ಯದ ಸ್ಥಳೀಯ ಉದ್ಯಮಗಳು ಸಂಪೂರ್ಣ ನೆಲಕಚ್ಚಿವೆ. ಜಮ್ಮು-ಕಾಶ್ಮೀರವನ್ನು ಇನ್ನು ಹೇಗೆ ಅಭಿವೃದ್ಧಿ ಮಾಡುತ್ತೀರಿ ಎಂದು ನೀವು ನಮಗೆ ಹೇಳಿ. ಅಮಿತ್​ ಜೀ, ನೀವು ಕಾಶ್ಮೀರಿ ಪಂಡಿತರನ್ನು ವಾಪಸ್​ ಕರೆತರುವುದಾಗಿ ಹೇಳಿದ್ದೀರಿ..ಅದು ಸಾಧ್ಯವಾಯಿತಾ? ಎಷ್ಟು ಜನ ಕಾಶ್ಮೀರಿ ಪಂಡಿತರನ್ನು, ಬ್ರಾಹ್ಮಣರನ್ನು ವಾಪಸ್​ ಕರೆತಂದಿದ್ದೀರಿ? ಕಾಶ್ಮೀರಿ ಪಂಡಿತರಿಗೆ 200-300 ಎಕರೆ ಭೂಮಿ ಕೊಡಲು ನಿಮಗೆ ಸಾಧ್ಯವಾಗಲಿಲ್ಲ ಎಂದರು.

ನೀವು ಗಿಲ್ಗಿಟ್​ ಬಲ್ಟಿಸ್ತಾನವನ್ನು ವಾಪಸ್​ ತರುತ್ತೇವೆ ಎನ್ನುತ್ತಿದ್ದೀರಿ, ಆದರೆ ಅದಕ್ಕೂ ಮೊದಲು ಕಾಶ್ಮೀರ ವ್ಯಾಲಿಯಲ್ಲಿ ಪಡಬಾರದ ಕಷ್ಟ ಅನುಭವಿಸಿ, ಹೋದವರನ್ನು, ಸ್ಥಳಾಂತರ ಆದವರನ್ನು ಕರೆತನ್ನಿ ಎಂದು ಹೇಳಿದರು.

ಇದನ್ನೂ ಓದಿ: Spinal Muscular Atrophy | ಕಂದನ ಉಳಿಸು ಕರ್ನಾಟಕ: ಮಗುವಿನ ಚಿಕಿತ್ಸೆಗೆ ನೆರವಾಗುವಂತೆ ಪ್ರಧಾನಿ ಮೋದಿಗೆ ಪತ್ರ ಬರೆದ ರಾಜ್ಯಸಭಾ ಸದಸ್ಯ ಚಂದ್ರಶೇಖರ್..!