ಬೆಂಗಳೂರು: ದೇಶದೆಲ್ಲಡೆ ಕೊರೊನಾ ಸಾಂಕ್ರಾಮಿಕ ಮಾಹಾಮಾರಿಗೆ ಲಸಿಕೆ ನೀಡಲು ಇದೇ ಮಾರ್ಚ್ 1ರಿಂದ 60 ವರ್ಷ ಮೇಲ್ಪಟ್ಟವಿರಿಗೆ ಕೊರೊನಾ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು. ಈ ಕುರಿತಂತೆ ಕೇಂದ್ರ ಸರ್ಕಾರ ಸ್ಪಷ್ಟಗೊಳಿಸಿದೆ. 45 ವರ್ಷ ಮೇಲ್ಪಟ್ಟ ಕಾಯಿಲೆಯಿಂದ ಬಳಲುತ್ತಿರುವರು ಮತ್ತು 60 ವರ್ಷ ಮೇಲ್ಪಟ್ಟವರು ಕೋ-ವಿನ್(CO-WIN) ಅಪ್ಲಿಕೇಶನ್ ಒಂದರಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. ಹೇಗೆ ಅಪ್ಲಿಕೇಶನ್ ಮೂಲಕ ಹೆಸರು ನೋಂದಾಯಿಸುವುದು? ಎಂಬುದರ ವಿವರ ಈ ಕೆಳಗಿಂತಿದೆ.
ಈಗಾಗಲೇ ಮೊದಲನೇ ಹಾಗೂ ಎರಡನೇ ಹಂತದಲ್ಲಿ ಕೊರೊನಾ ವಾರಿಯರ್ಸ್ಗೆ ಲಸಿಕೆ ನೀಡಲಾಗಿದ್ದು, ಇದೀಗ ಮೂರನೇ ಹಂತದಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಉಚಿತ ಲಸಿಕೆ ನೀಡಲಾಗುತ್ತಿದೆ. ಹಾಗೂ 45 ವರ್ಷ ಮೇಲ್ಪಟ್ಟವರು ಕಾಯಿಲೆಯಿಂದ ಬಳಲುತ್ತಿದ್ದರೆ ಅವರಿಗೆ ಉಚಿತವಾಗಿ ಮಾರ್ಚ್ 1ರಿಂದ ಲಸಿಕೆ ನೀಡಲಾಗುತ್ತದೆ.
ಕೋ-ವಿನ್ ಅಪ್ಲಿಕೇಶನ್ ಮೂಲಕ ಹೆಸರು ನೋದಾಯಿಸುವ ಸಂಪೂರ್ಣ ಮಾಹಿತಿ:
* ಮೊದಲು ನಿಮ್ಮ ಮೊಬೈಲ್ನ ಮೂಲಕ ನೇರವಾಗಿ cowin.gov.in ನಲ್ಲಿ ಕೋ-ವಿನ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವುದು.
* ನಿಮ್ಮ ಹೆಸರನ್ನು ನೋಂದಾಯಿಸಲು ಮೊಬೈಲ್ನ 10 ಅಂಕಿಯ ಸಂಖ್ಯೆ ಅಥವಾ ಆಧಾರ್ ಸಂಖ್ಯೆಯನ್ನು ನಮೂದಿಸಿ
* ಐಡಿ ನೋಂದಣಿಗಾಗಿ ಫೋಟೋ ಗುರುತು ಇರುವ ಗುರುತಿನ ಚೀಟಿ (ಆಧಾರ್ ಕಾರ್ಡ್) ಅಗತ್ಯ
* ನಮೂದಿಸಿದ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ. ಆ ಒಟಿಪಿಯನ್ನು ಅಪ್ಲಿಕೇಶನ್ನಲ್ಲಿ ನಮೂದಿಸಿರಿ. ನಿಮ್ಮ ಖಾತೆ ಇದೀಗ ರಚನೆಯಾಗುತ್ತದೆ.
* ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ ನಿಗದಿತ ದಿನಾಂಕ ಮತ್ತು ಸಮಯದ ಮೇಲೆ ವ್ಯಾಕ್ಸಿನೇಷನ್ ಕೇಂದ್ರಕ್ಕೆ ಭೇಟಿ ನೀಡುವ ಮಾಹಿತಿ ಸಿಗುತ್ತದೆ.
* ಲಸಿಕೆ ಪಡೆದ ನಂತರ ಪ್ರಮಾಣ ಪತ್ರ ನಿಮಗೆ ಲಭಿಸಲಿದೆ. ನೋಂದಣಿ ಮಾಡಿದ ಐಡಿ ಬಳಸಿ ಪ್ರಮಾಣ ಪತ್ರವನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು.
45 ವರ್ಷ ಮೇಲ್ಪಟ್ಟವರು ಅನಾರೋಗ್ಯದ ಕುರಿತಾಗಿ ವೈದ್ಯಕೀಯ ಪ್ರಮಾಣ ಪತ್ರವನ್ನು ಸಲ್ಲಿಸುವುದು ಕಡ್ಡಾಯ
ಹೃದಯ ಸಂಬಂಧಿ ಕಾಯಿಲೆಗಳು, ಮಧುಮೇಹ, ಅಧಿಕ ರಕ್ತದೊತ್ತಡ, ಕ್ಯಾನ್ಸರ್ ಮತ್ತು ಏಡ್ಸ್ ರೋಗದಿಂದ ಬಳಲುತ್ತಿರುವ ಹೆಸರು ನೋಂದಾಯಿಸಬಹುದು. ಹೃದಯ ಸಂಬಂಧಿ ಕಾಯಿಲೆಗಳಿಗೆ ಸಂಬಂಧಿಸಿ, ಕಳೆದ ಒಂದು ವರ್ಷದಲ್ಲಿ ಹೃದಯ ವೈಫಲ್ಯದಿಂದ ಬಳಲುತ್ತಿರುವ ಮತ್ತು ಆಸ್ಪತ್ರೆಗೆ ದಾಖಲಾದವರು, ತೀವ್ರವಾದ ಶ್ವಾಸಕೋಶದ ಅಪಧಮನಿ ಅಧಿಕ ರಕ್ತದೊತ್ತಡ (ಪಿಎಹೆಚ್), ಹೃದಯ ಕಾಯಿಲೆಗಳಿಂದ ಬಳಲುತ್ತಿರುವವರು ಲಸಿಕೆ ಪಡೆಯಲು ಅರ್ಹರು.
10 ವರ್ಷಗಳಿಗಿಂತ ಹೆಚ್ಚು ಕಾಲ ಮಧುಮೇಹದಿಂದ ಬಳಲುತ್ತಿರುವ ಅಥವಾ ಮಧುಮೇಹದಿಂದ ಉಂಟಾಗುವ ತೊಂದರೆಗಳನ್ನು ಹೊಂದಿರುವವರು ನೋಂದಣಿ ಮಾಡಿಕೊಳ್ಳಬಹುದು. ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ಹೊಂದಿರುವವರನ್ನು ಸಹ ಲಸಿಕೆ ಪಡೆಯುವ ಪಟ್ಟಿಯಲ್ಲಿ ಪರಿಗಣಿಸಲಾಗುತ್ತದೆ.
Registration process simplified – Beneficiary can choose CVC of their choice
?Advance Self-Registration through Co-WIN 2.0 platform or Aarogya Setu App
?On-site registration at CVC
?Facilitated Cohort Registration – specific dates for vaccinating identified target groups. pic.twitter.com/8a4TKTjd4g— Dr Harsh Vardhan (@drharshvardhan) February 27, 2021
ಇದನ್ನೂ ಓದಿ: TV9 Digital Live | ಕೊರೊನಾ ಲಸಿಕೆ ಪಡೆಯಲು ಹಿಂಜರಿಕೆ ಏಕೆ?
Published On - 11:35 am, Sun, 28 February 21