ಕೇರಳ: ಮಾನವ- ವನ್ಯಜೀವಿ ಸಂಘರ್ಷ: ವಯನಾಡಿನಲ್ಲಿ ಹರತಾಳ; ತೀವ್ರಗೊಂಡ ಪ್ರತಿಭಟನೆ
ಮಾನಂತವಾಡಿಯಲ್ಲಿ ಕಾಡಾನೆ ದಾಳಿಗೆ ಬಲಿಯಾದ ಪೌಲ್ ಅವರ ಮೃತದೇಹವನ್ನು ಪುಲ್ಪಳ್ಳಿ ಪಟ್ಟಣಕ್ಕೆ ತಂದಿದ್ದು, ಪುಲ್ಪಳ್ಳಿ ಬಸ್ ನಿಲ್ದಾಣದಲ್ಲಿ ಶವದೊಂದಿಗೆ ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಇನ್ನೊಂದೆಡೆ ಕೇಣಿಚ್ಚಿರದಲ್ಲಿ ಚಿರತೆ ದಾಳಿಗೆ ಬಲಿಯಾದ ಹಸುವಿನ ಕಳೇಬರವನ್ನು ಸ್ಥಳೀಯರು ಅರಣ್ಯ ಇಲಾಖೆಯ ವಾಹನಕ್ಕೆ ಕಟ್ಟಿ ಹಾಕಿದ್ದಾರೆ. ತಮ್ಮ ಬೇಡಿಕೆಗಳ ಬಗ್ಗೆ ಭರವಸೆ ನೀಡಿದರೆ ಮಾತ್ರ ಕಳೇಬರವನ್ನು ಅಲ್ಲಿಂದ ತೆಗೆಯಲಾಗುವುದು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ.
ವಯನಾಡು ಫೆಬ್ರುವರಿ 17: ಕೇರಳದ (Kerala) ಅರಣ್ಯ ಇಲಾಖೆಗೆ ಸೇರಿದ ಜೀಪಿನ ಮೇಲೆ ನೂರಾರು ಪ್ರತಿಭಟನಾಕಾರರು ಶನಿವಾರ ಪುಲ್ಪಳ್ಳಿಯಲ್ಲಿ (Pulpally) ದಾಳಿ ನಡೆಸಿದ್ದಾರೆ. ವಯನಾಡಿನಲ್ಲಿ (Wayanad) ವನ್ಯಜೀವಿ ದಾಳಿಯಿಂದ (elephant attack) ವಾರದೊಳಗೆ ಇಬ್ಬರು ಸಾವಿಗೀಡಾದ ಹಿನ್ನೆಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳು ಕರೆ ನೀಡಿದ್ದ ಒಂದು ದಿನದ ಹರತಾಳದ ವೇಳೆ ಈ ದಾಳಿ ನಡೆದಿದೆ. ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ಕೋರಿ ಎಲ್‌ಡಿಎಫ್, ಯುಡಿಎಫ್ ಮತ್ತು ಬಿಜೆಪಿ ಹರತಾಳಕ್ಕೆ ಕರೆ ನೀಡಿವೆ. ಶನಿವಾರ ಕೆಣಿಚ್ಚಿರಾದಲ್ಲಿ ಹುಲಿ ಕೊಂದ ಹಸುವಿನ ಕಳೇಬರವನ್ನು ಅರಣ್ಯ ಇಲಾಖೆಯ ಜೀಪಿಗೆ ಕಟ್ಟಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶುಕ್ರವಾರ ಆನೆ ತುಳಿದು ಸಾವಿಗೀಡಾದ ಪುಲ್ಪಳ್ಳಿ ಇಕೋ ಟೂರಿಸಂ ಸೆಂಟರ್‌ನ ಉದ್ಯೋಗಿ ಪಾಲ್ ಅವರ ಮೃತದೇಹದೊಂದಿಗೆ ಮತ್ತೊಂದು ವರ್ಗದ ಆಂದೋಲನಕಾರರು ಪ್ರತಿಭಟನೆ ನಡೆಸುತ್ತಿದ್ದಾರೆ.
ರೇಡಿಯೊ ಕಾಲರ್ ಅವಳಡಿಸಿದ ಬೇಲೂರು ಮಖ್ಣಾ ಎಂಬ ಆನೆ ಕಳೆದ ವಾರ ಮಾನಂತವಾಡಿ ನಿವಾಸಿ ಅಜೀಶ್ (42) ಎಂಬವರನ್ನು ಕೊಂದಿತ್ತು. ಇದನ್ನು ಖಂಡಿಸಿ ವಯನಾಡಿನಲ್ಲಿ ಭಾರೀ ಪ್ರತಿಭಟನೆಗಳು ನಡೆಯುತ್ತಿವೆ. ಮಾನಂತವಾಡಿಯಲ್ಲಿ ಕಾಡಾನೆ ದಾಳಿಗೆ ಬಲಿಯಾದ ಪೌಲ್ ಅವರ ಮೃತದೇಹವನ್ನು ಪುಲ್ಪಳ್ಳಿ ಪಟ್ಟಣಕ್ಕೆ ತಂದಿದ್ದು, ಪುಲ್ಪಳ್ಳಿ ಬಸ್ ನಿಲ್ದಾಣದಲ್ಲಿ ಶವದೊಂದಿಗೆ ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದಾರೆ.
ಪ್ರತಿಭಟನೆಯ ದೃಶ್ಯ
STORY | Human-animal conflicts: Dawn-to-dusk hartal in Kerala’s Wayanad district
READ: https://t.co/FS28sPXuSz
VIDEO: pic.twitter.com/LRmVBPNcqo
— Press Trust of India (@PTI_News) February 17, 2024
ಆರಂಭದಲ್ಲಿ ಎರಡು ಗುಂಪುಗಳಾಗಿ ಪ್ರತಿಭಟನೆ ನಡೆಸಲಾಯಿತು. ಟ್ರಾಫಿಕ್ ಜಂಕ್ಷನ್ ಮತ್ತು ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಯಿತು. ಅರಣ್ಯ ಇಲಾಖೆ ವಿರುದ್ಧ ಭಾರೀ ಪ್ರತಿಭಟನೆ ನಡೆಯುತ್ತಿದ್ದು, ಪ್ರತಿಭಟನಾಕಾರರು ಜೀಪನ್ನು ತಡೆದು ಟಯರ್ ಪಂಕ್ಚರ್ ಮಾಡಿದ್ದಾರೆ. ಅದೇ ಜೀಪಿನ ಮೇಲೆ ಅರಣ್ಯ ಇಲಾಖೆ ಎಂದು ಬರೆದಿರುವ ಹೂವಿನ ಹಾರ ಇಟ್ಟು ಪ್ರತಿಭಟಿಸಿದ ಜನರು ಜೀಪ್ನ ರೂಫ್ ಹರಿದು ಹಾಕಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧವೂ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ಇನ್ನೊಂದೆಡೆ ಕೇಣಿಚ್ಚಿರದಲ್ಲಿ ಚಿರತೆ ದಾಳಿಗೆ ಬಲಿಯಾದ ಹಸುವಿನ ಕಳೇಬರವನ್ನು ಸ್ಥಳೀಯರು ಅರಣ್ಯ ಇಲಾಖೆಯ ವಾಹನಕ್ಕೆ ಕಟ್ಟಿ ಹಾಕಿದ್ದಾರೆ. ತಮ್ಮ ಬೇಡಿಕೆಗಳ ಬಗ್ಗೆ ಭರವಸೆ ನೀಡಿದರೆ ಮಾತ್ರ ಕಳೇಬರವನ್ನು ಅಲ್ಲಿಂದ ತೆಗೆಯಲಾಗುವುದು ಎಂದು ಪ್ರತಿಭಟನಾಕಾರರ ಪಟ್ಟು ಹಿಡಿದಿದ್ದಾರೆ.ಪೌಲ್ ಕುಟುಂಬಕ್ಕೆ 50 ಲಕ್ಷ, ಉದ್ಯೋಗ, ಸಾಲ ಮನ್ನಾ ಮುಂತಾದ ಬೇಡಿಕೆಗಳನ್ನು ಪ್ರತಿಭಟನಾಕಾರರು ಮುಂದಿಟ್ಟಿದ್ದಾರೆ. ಪ್ರತಿಭಟನೆ ಮತ್ತು ಮುಂದಿನ ಕ್ರಮಗಳನ್ನು ಎದುರಿಸಲು 10 ಸದಸ್ಯರ ಸಮಿತಿಯನ್ನು ರಚಿಸಲಾಗಿದೆ. ಪುಲ್ಪಳ್ಳಿ ಪಂಚಾಯಿತ್ ಎದುರು ಪ್ರತಿಭಟನೆ ನಡೆಯುತ್ತಿದ್ದು, ಚರ್ಚೆಯಲ್ಲ ಪರಿಹಾರವೇ ಬೇಕು ಎನ್ನುತ್ತಾರೆ ಸ್ಥಳೀಯರು.
ಇದನ್ನೂ ಓದಿ: ಕೇರಳದ ಕಣ್ಣೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ಕರ್ನಾಟಕದ ಮೋಸ್ಟ್ ವಾಂಟೆಡ್ ಭೂಗತ ನಕ್ಸಲ್ ಸುರೇಶ್ ಬಂಧನ
ಉನ್ನತ ಮಟ್ಟದ ಸಭೆಗೆ ಸಿಎಂ ಕರೆ
ಪ್ರತಿಭಟನೆಯ ಹಿನ್ನಲೆಯಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ವಯನಾಡಿನಲ್ಲಿ ಹೆಚ್ಚುತ್ತಿರುವ ಕಾಡು ಪ್ರಾಣಿಗಳ ದಾಳಿ ಸಮಸ್ಯೆಯನ್ನು ಪರಿಹರಿಸಲು ಉನ್ನತ ಮಟ್ಟದ ಸಭೆಯನ್ನು ಕರೆದಿದ್ದು, ಫೆಬ್ರವರಿ 20 ರಂದು ವಯನಾಡಿನಲ್ಲಿ ಕಂದಾಯ, ಅರಣ್ಯ ಮತ್ತು ಸ್ಥಳೀಯ ಸ್ವಯಂ ಆಡಳಿತ ಸಚಿವರ ಸಭೆ ನಡೆಯಲಿದೆ.
ಹರತಾಳ ದಿನವಾದ ಇಂದು ಕಲ್ಪೆಟ್ಟಾ, ಬತ್ತೇರಿ, ಮಾನಂತವಾಡಿ, ಲಕಿಡಿ ಮತ್ತಿತರ ಪ್ರಮುಖ ಪಟ್ಟಣಗಳಲ್ಲಿ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿದ್ದವು. ಏತನ್ಮಧ್ಯೆ, ಅಜೀಶ್ ಸಾವಿಗೆ ಕಾರಣವಾದ ಬೇಲೂರು ಮಖ್ಣಾವನ್ನು ಸೆರೆಹಿಡಿಯಲು ಅರಣ್ಯಾಧಿಕಾರಿಗಳ ಒಂದು ವಿಭಾಗವು ಕಾರ್ಯಾಚರಣೆಯನ್ನು ಪುನರಾರಂಭಿಸಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ