ಪ್ರಿಯಕರನೊಂದಿಗೆ ಓಡಿಹೋಗಿದ್ದಕ್ಕೆ ಪೊಲೀಸ್ ಠಾಣೆಯಲ್ಲೇ ಹೆಂಡತಿಯನ್ನು ಶೂಟ್ ಮಾಡಿ ಕೊಂದ ಗಂಡ!
ತನ್ನ ಹೆಂಡತಿ ಬೇರೊಬ್ಬನೊಂದಿಗೆ ಓಡಿಹೋಗಿದ್ದಾಳೆಂದು ಕೋಪಗೊಂಡಿದ್ದ ಗಂಡ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ. ಹೀಗಾಗಿ, ಪೊಲೀಸರು ಆತನ ಪತ್ನಿ ಮತ್ತು ಆಕೆಯ ಪ್ರೇಮಿಯನ್ನು ವಿಚಾರಣೆಗೆ ಕರೆಸಿದ್ದರು. ಅಲ್ಲಿಗೆ ದೂರು ನೀಡಿದ ಗಂಡನನ್ನು ಕೂಡ ಕರೆಸಿದ್ದರು. ಆಗ ಪೊಲೀಸರು ಊಹಿಸದ ಘಟನೆಯೊಂದು ನಡೆದಿದೆ. ಅಲ್ಲಿ ನಡೆದಿದ್ದಾರೂ ಏನು? ಇದರಲ್ಲಿ ಪೊಲೀಸರ ನಿರ್ಲಕ್ಷ್ಯ ಎಷ್ಟು? ಎಂಬೆಲ್ಲದರ ಬಗ್ಗೆ ಮಾಹಿತಿ ಇಲ್ಲಿದೆ.

ನವದೆಹಲಿ, ಜನವರಿ 12: ತನ್ನ ಪತ್ನಿ ಬೇರೊಬ್ಬನ ಜೊತೆ ಓಡಿಹೋಗಿದ್ದಾಳೆಂದು ಕೋಪಗೊಂಡ ವ್ಯಕ್ತಿಯೊಬ್ಬ ಪೊಲೀಸ್ ಠಾಣೆಯ ಆವರಣದಲ್ಲೇ ಆಕೆಯ ಮೇಲೆ ಗುಂಡು ಹಾರಿಸಿದ್ದಾನೆ. ಈ ಘಟನೆ ಉತ್ತರ ಪ್ರದೇಶದ (Uttar Pradesh) ಹರ್ದೋಯ್ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ. ಅನೂಪ್ ಮತ್ತು ಸೋನಿ 17 ವರ್ಷಗಳ ಹಿಂದೆ ವಿವಾಹವಾಗಿದ್ದರು. ಆದರೆ, ಈ ತಿಂಗಳ 7ರಂದು ಸೋನಿ ತನ್ನ ಗಂಡನನ್ನು ಬಿಟ್ಟು ಸುರ್ಜೀತ್ ಎಂಬ ವ್ಯಕ್ತಿಯೊಂದಿಗೆ ಓಡಿಹೋಗಿದ್ದಳು.
ಈ ಬಗ್ಗೆ ಆಕೆಯ ಗಂಡ ದೂರು ನೀಡಿದ್ದ. ದೂರು ಸ್ವೀಕರಿಸಿದ ನಂತರ ಜನವರಿ 11ರಂದು ಪೊಲೀಸರು ಆಕೆಯನ್ನು ಗುರುತಿಸಿ ಠಾಣೆಗೆ ಕರೆತಂದರು. ನಂತರ, ಆಕೆಯನ್ನು ಪಾಲಿ ಪೊಲೀಸ್ ಠಾಣೆಗೆ ಸ್ಥಳಾಂತರಿಸಿ ಪೊಲೀಸ್ ಕಸ್ಟಡಿಯಲ್ಲಿ ಇರಿಸಲಾಯಿತು. ಇಂದು ಬೆಳಿಗ್ಗೆ ಸೋನಿ ಪೊಲೀಸ್ ಸ್ಟೇಷನಿನ ಕ್ಯಾಂಟೀನ್ನಲ್ಲಿ ತಿಂಡಿ ತಿನ್ನಲು ಹೋಗುತ್ತಿದ್ದಾಗ, ಅಲ್ಲಿಯೇ ಅಡಗಿಕೊಂಡಿದ್ದ ಆಕೆಯ ಪತಿ ಅನೂಪ್ ಇದ್ದಕ್ಕಿದ್ದಂತೆ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ.
ಇದನ್ನೂ ಓದಿ:
ಅವನು ತನ್ನ ಬಳಿ ಇದ್ದ ಗನ್ನಿಂದ ಆಕೆಗೆ ಗುಂಡು ಹಾರಿಸಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಸೋನಿಯನ್ನು ಪೊಲೀಸರು ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ, ಚಿಕಿತ್ಸೆ ಪಡೆಯುತ್ತಿದ್ದಾಗ ಆಕೆ ಸಾವನ್ನಪ್ಪಿದ್ದಾಳೆ. ಪೊಲೀಸ್ ಠಾಣೆಗೆ ಆಕೆಯ ಗಂಡ ಹೇಗೆ ಗನ್ ತೆಗೆದುಕೊಂಡು ಬಂದಿದ್ದ ಎಂಬುದು ಈಗ ಚರ್ಚೆಯ ವಿಷಯವಾಗಿದೆ. ಆ ವೇಳೆ ಯಾವುದೇ ತಪಾಸಣೆ ನಡೆಯಲಿಲ್ಲವೇ? ಪೊಲೀಸ್ ಕಸ್ಟಡಿಯಲ್ಲಿರುವ ಮಹಿಳೆಗೆ ರಕ್ಷಣೆ ನೀಡಲು ಅವರು ವಿಫಲರಾಗಿದ್ದಾರೆಯೇ? ಎಂಬ ಪ್ರಶ್ನೆಗಳು ಎದ್ದಿವೆ.
ಆರೋಪಿ ಅನೂಪ್ನನ್ನು ಗನ್ ಜೊತೆಗೆ ತಕ್ಷಣವೇ ಬಂಧಿಸಲಾಗಿದೆ. ವಿಧಿವಿಜ್ಞಾನ ತಂಡವು ಘಟನೆಯ ಸ್ಥಳದಿಂದ ಸಾಕ್ಷ್ಯಗಳನ್ನು ಸಂಗ್ರಹಿಸಿತು. ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಿದ ಪೊಲೀಸ್ ಸಿಬ್ಬಂದಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಎಸ್ಪಿ ಆದೇಶಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
