ವಿಡಿಯೋ ನೋಡಿ: ನಡುರಾತ್ರಿ, ನಡುರಸ್ತೆಯಲ್ಲಿ ಡ್ಯೂಟಿಯಲ್ಲಿದ್ದ ಪೊಲೀಸ್ ಕಾನ್‌ಸ್ಟೆಬಲ್ ಗೆ ಡಿಕ್ಕಿ ಹೊಡೆದ ಕಾರು

|

Updated on: Oct 20, 2023 | 12:33 PM

Watch Video: ಅತಿವೇಗದಲ್ಲಿ ಬರುತ್ತಿದ್ದ ಕಾರನ್ನು ನಿಲ್ಲಿಸಲು ಯತ್ನಿಸಿದ ಕಾನ್‌ಸ್ಟೆಬಲ್ ಮಹೇಶ್ ಅವರ ಮೆಲೆ ಆ ಕಾರು ಹತ್ತಿಕೊಂಡು ವೇಗವಾಗಿ ಮಾಯವಾಗಿದೆ. ಇದರಿಂದ ಮಹೇಶ್ ತೀವ್ರ ಗಾಯಗಳಾಗಿವೆ. ಕೆಳಗೆ ಬಿದ್ದ ಮಹೇಶರನ್ನು ಉಳಿದ ಪೊಲೀಸರು ಆಸ್ಪತ್ರೆಗೆ ಕರೆದೊಯ್ದರು. ಗೋಪಾಲಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ವಿಡಿಯೋ ನೋಡಿ: ನಡುರಾತ್ರಿ, ನಡುರಸ್ತೆಯಲ್ಲಿ ಡ್ಯೂಟಿಯಲ್ಲಿದ್ದ ಪೊಲೀಸ್ ಕಾನ್‌ಸ್ಟೆಬಲ್ ಗೆ ಡಿಕ್ಕಿ ಹೊಡೆದ ಕಾರು
ನಡುರಸ್ತೆಯಲ್ಲಿ ಡ್ಯೂಟಿಯಲ್ಲಿದ್ದ ಪೊಲೀಸ್ ಕಾನ್‌ಸ್ಟೆಬಲ್ ಗೆ ಡಿಕ್ಕಿ ಹೊಡೆದ ಕಾರು
Follow us on

ಹೈದರಾಬಾದ್, ಅಕ್ಟೋಬರ್ 20: ಹೈದರಾಬಾದ್‌ನ ಚಿಲಕಲಗೂಡು ಪ್ರದೇಶದಲ್ಲಿ ಬುಧವಾರ ಮಧ್ಯರಾತ್ರಿ 2 ಗಂಟೆಯಲ್ಲಿ ಭೀಕರ ಸರ್ತೆ ಅಪಘಾತ ನಡೆದಿದೆ. ಕರ್ತವ್ಯದಲ್ಲಿದ್ದ ಪೊಲೀಸ್ ಕಾನ್‌ಸ್ಟೆಬಲ್ ಗೆ ವೇಗವಾಗಿ ಅಡ್ಡಾದಿಡ್ಡಿಯಾಗಿ ಬಂದ ಕಾರೊಂದು ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ಕಾನ್‌ಸ್ಟೆಬಲ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆಗೆ ಸಂಬಂಧಿಸಿದ ಸಂಪೂರ್ಣ ವಿವರ ಈ ಕೆಳಗಿನಂತಿದೆ. ಚಿಲಕಲಗೂಡು ಗೋಪಾಲಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ (Gopalapuram Police Station) ರಾತ್ರಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾನ್‌ಸ್ಟೆಬಲ್‌ಗೆ ಅಪರಿಚಿತ ಕಾರೊಂದು ಡಿಕ್ಕಿ ಹೊಡೆದು (Car Accident) ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾನ್‌ಸ್ಟೆಬಲ್ (Hyderabad Constable) ಮಹೇಶ್ ಅವರಿಗೆ ಪೆಟ್ಟಾಗಿದ್ದು, ತಕ್ಷಣವೇ ಅವರನ್ನು ಅಲ್ಲಿದ್ದ ಇತರೆ ಪೊಲೀಸ್​ ಸಿಬ್ಬಂದಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ಘಟನೆಗೆ ಸಂಬಂಧಿಸಿದ ಸಿಸಿಟಿವಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಛಿಲಕಲಗೂಡು ಬಳಿ ಚಿಲ್ಲರ್ ರಸ್ತೆಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸರಿಗೆ ಕಾರೊಂದು ಡಿಕ್ಕಿ ಹೊಡೆದಿದೆ. ಈ ಘಟನೆಗೆ ಸಂಬಂಧಿಸಿದ ದೃಶ್ಯಗಳು ಅಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿವೆ. ಸಿಕಂದರಾಬಾದ್‌ನ ಗೋಪಾಲಪುರ ಪೊಲೀಸ್ ಠಾಣಾ ವ್ಯಾಪ್ತಿಯ ಚಿಲಕಲಗೂಡ ಆಲುಗದ್ದಾ ಬಳಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದಾಗ ವೇಗವಾಗಿ ವಾಹನ ಚಲಾಯಿಸುವವರನ್ನು ತಡೆಯಲು ತಡೆಗೋಡೆಗಳನ್ನು ಸ್ಥಾಪಿಸಲಾಗಿತ್ತು.

ಆ ಮಾರ್ಗವಾಗಿ ಬರುವ ವಾಹನಗಳನ್ನು ಪೊಲೀಸರು ತಪಾಸಣೆ ಮಾಡುತ್ತಿದ್ದರು.. ಅತಿವೇಗದಲ್ಲಿ ಬರುತ್ತಿದ್ದ ಕಾರನ್ನು ನಿಲ್ಲಿಸಲು ಯತ್ನಿಸಿದ ಕಾನ್‌ಸ್ಟೆಬಲ್ ಮಹೇಶ್ ಅವರ ಮೆಲೆ ಆ ಕಾರು ಹತ್ತಿಕೊಂಡು ವೇಗವಾಗಿ ಮಾಯವಾಗಿದೆ. ಇದರಿಂದ ಮಹೇಶ್ ತೀವ್ರ ಗಾಯಗಳಾಗಿವೆ. ಕೆಳಗೆ ಬಿದ್ದ ಮಹೇಶರನ್ನು ಉಳಿದ ಪೊಲೀಸರು ಆಸ್ಪತ್ರೆಗೆ ಕರೆದೊಯ್ದರು. ಜೀವಕ್ಕೆ ಅಪಾಯ ವಿಲ್ಲ… ಆದರೆ ಮೂಳೆಗಳು ಮುರಿದಿವೆ ಎಂದಿದ್ದಾರೆ ವೈದ್ಯರು. ಗೋಪಾಲಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಪೊಲೀಸರು ಕಾರಿನ ನಂಬರ್ ಆಧರಿಸಿ ವಿವರ ಸಂಗ್ರಹಿಸಲು ಆರಂಭಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 12:30 pm, Fri, 20 October 23