Hyderabad Liberation Day 2022: ಇಂದು ಹೈದರಾಬಾದ್​ನಲ್ಲಿ ಧ್ವಜಾರೋಹಣ ನೆರವೇರಿಸಲಿರುವ ಗೃಹಸಚಿವ ಅಮಿತ್ ಶಾ

| Updated By: Rakesh Nayak Manchi

Updated on: Sep 17, 2022 | 6:51 AM

ಹೈದರಾಬಾದ್ ವಿಮೋಚನಾ ದಿನದ ಪ್ರಯುಕ್ತ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಹೈದರಾಬಾದ್​ನಲ್ಲಿ ಧ್ವಜಾರೋಹಣ ನೆರವೇರಿಸಲಿದ್ದು, ಬಳಿಕ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.

Hyderabad Liberation Day 2022: ಇಂದು ಹೈದರಾಬಾದ್​ನಲ್ಲಿ ಧ್ವಜಾರೋಹಣ ನೆರವೇರಿಸಲಿರುವ ಗೃಹಸಚಿವ ಅಮಿತ್ ಶಾ
ಕೇಂದ್ರ ಗೃಹಸಚಿವ ಅಮಿತ್ ಶಾ
Follow us on

ಹೈದರಾಬಾದ್: ಇಂದು ಹೈದರಾಬಾದ್ ವಿಮೋಚನಾ ದಿನ. ಇಲ್ಲಿನ ನಿಜಾಮ ಮೀರ್ ಉಸ್ಮಾನ್ ಅಲಿ ಹೈದರಾಬಾದ್ ಅನ್ನು ಭಾರತೊಂದಿಗೆ ವಿಲೀನಕ್ಕೆ ಒಪ್ಪದೆ ಸ್ವತಂತ್ರ್ಯ ದೇಶವೆಂದು ಘೋಷಣೆ ಮಾಡಿದ್ದನು. ಆದರೆ ಬಹುಪಾಲು ಜನರ ಆಶಯದಂತೆ ಅಂದಿನ ಗೃಹಮಂತ್ರಿಯಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲರು 1947ರ ಸೆ.18ರಂದು ಶಸ್ತ್ರಾಸ್ತ್ರ ಕಾರ್ಯಾಚರಣೆ ನಡೆಸಿ ನಿಜಾಮ ಮತ್ತು ಸೈನಿಕರನ್ನು ಮಣಿಸಿ ಹೈದರಾಬಾದ್​ ಅನ್ನು ಭಾರತಕ್ಕೆ ಸೇರಿಸಿದರು. ಈ ದಿನದ ಪ್ರಯುಕ್ತ ಇಂದು ಕೇಂದ್ರ ಗೃಹಮಂತ್ರಿ ಅಮಿತ್ ಶಾ (Amith Shah) ಅವರು ಹೈದರಾಬಾದ್​ನಲ್ಲಿ ರಾಷ್ಟ್ರಧ್ವಜಾರೋಹಣ ಮಾಡಲಿದ್ದಾರೆ.

ಶುಕ್ರವಾರ ಹೈದರಾಬಾದ್​ಗೆ ತೆರಳಿರುವ ಅಮಿತ್ ಶಾ ಅವರು ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ತಂಗಿದ್ದಾರೆ. ಶನಿವಾರ (ಸೆ.18) ಬೆಳಗ್ಗೆ 8.45ಕ್ಕೆ ಸಿಕಂದರಾಬಾದ್‌ ಪರೇಡ್‌ ಮೈದಾನ ತಲುಪಿ 11.45ರವರೆಗೆ ಪರೇಡ್‌ ಮೈದಾನದಲ್ಲಿ ಉಳಿಯಲಿದ್ದಾರೆ. ಕೇಂದ್ರ ಸರ್ಕಾರದ ‘ವಿಮೋಚನಾ ದಿನಾಚರಣೆ’ ಅಂಗವಾಗಿ ಶಾ ಅವರು ರಾಷ್ಟ್ರಧ್ವಜಾರೋಹಣ ಮಾಡಲಿದ್ದಾರೆ. ನಂತರ ಪ್ರವಾಸೋದ್ಯಮ ಪ್ಲಾಜಾದಲ್ಲಿ ನಡೆಯುವ ಪಕ್ಷದ ಮುಖಂಡರ ಮಹತ್ವದ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ನಂತರ ಮಧ್ಯಾಹ್ನ 2.30ಕ್ಕೆ ಸಿಕಂದರಾಬಾದ್‌ನ ಕ್ಲಾಸಿಕ್ ಗಾರ್ಡನ್ಸ್‌ಗೆ ತೆರಳಿ ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಜಿ.ಕಿಶನ್ ರೆಡ್ಡಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ರಾಜ್ಯದ ಅಂಗವಿಕಲರಿಗೆ ಉಪಕರಣಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಬಳಿಕ ಪೊಲೀಸ್ ಅಕಾಡೆಮಿಗೆ ತೆರಳಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ರಾತ್ರಿ 7.30ಕ್ಕೆ ಅಮಿತ್ ಶಾ ಅವರ ದೆಹಲಿಗೆ ಮರಳಲಿದ್ದಾರೆ.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ತೆಲಂಗಾಣದಲ್ಲಿನ ಕೇಸರಿ ಪಕ್ಷ ಬಿಜೆಪಿ ನಾಯಕರು ಈ ದಿನವನ್ನು ‘ಹೈದರಾಬಾದ್ ವಿಮೋಚನಾ ದಿನ’ ಎಂದು ಕರೆಯುತ್ತಿದ್ದರೆ, ಟಿಆರ್‌ಎಸ್ ನೇತೃತ್ವದ ತೆಲಂಗಾಣ ಸರ್ಕಾರ ಇದನ್ನು ‘ರಾಷ್ಟ್ರೀಯ ಏಕೀಕರಣ ದಿನ’ ಎಂದು ಕರೆಯುತ್ತಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:51 am, Sat, 17 September 22