AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿಕ್ಷಣ ಮುಂದುವರಿಸುವ ಕನಸು ಕಂಡಿದ್ದ ಉಕ್ರೇನ್‌ ವಿದ್ಯಾರ್ಥಿಗಳಿಗೆ ಆತಂಕ: ಭಾರತದಲ್ಲಿ ವೈದ್ಯಕೀಯ ಸೀಟು ಇಲ್ಲ ಎಂದ ಸರಕಾರ

ಉಕ್ರೇನ್​ನಿಂದ ಮರಳಿರುವ ವಿದ್ಯಾರ್ಥಿಗಳಿಗೆ ಭಾರತದ ಯಾವುದೇ ವಿಶ್ವವಿದ್ಯಾಲಯಗಳಲ್ಲಿ ಮೆಡಿಕಲ್ ಮುಂದುವರೆಸಲು ಅವಕಾಶ ಇಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್​ಗೆ ತಿಳಿಸಿದೆ.

ಶಿಕ್ಷಣ ಮುಂದುವರಿಸುವ ಕನಸು ಕಂಡಿದ್ದ ಉಕ್ರೇನ್‌ ವಿದ್ಯಾರ್ಥಿಗಳಿಗೆ ಆತಂಕ: ಭಾರತದಲ್ಲಿ ವೈದ್ಯಕೀಯ ಸೀಟು ಇಲ್ಲ ಎಂದ ಸರಕಾರ
ಸಂಗ್ರಹ ಚಿತ್ರ
TV9 Web
| Updated By: ಆಯೇಷಾ ಬಾನು|

Updated on:Sep 17, 2022 | 8:52 AM

Share

ಬೆಂಗಳೂರು: ರಷ್ಯಾ ಮತ್ತು ಉಕ್ರೇನ್ ಯುದ್ಧ(Russia Ukraine War) ಸಮಯದಲ್ಲಿ ಉಕ್ರೇನ್​ನಿಂದ ಮರಳಿದ್ದ ಭಾರತೀಯ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರ ಶಾಕ್ ಕೊಟ್ಟಿದೆ. ಇದರಿಂದ ಸಾವಿರಾರು ಮೆಡಿಕಲ್ ವಿದ್ಯಾರ್ಥಿಗಳು(Medical Students) ಆತಂಕಕ್ಕೆ ಒಳಗಾಗಿದ್ದಾರೆ. ಉಕ್ರೇನ್​ನಿಂದ ಮರಳಿರುವ ವಿದ್ಯಾರ್ಥಿಗಳಿಗೆ ಭಾರತದ ಯಾವುದೇ ವಿಶ್ವವಿದ್ಯಾಲಯಗಳಲ್ಲಿ ಮೆಡಿಕಲ್ ಮುಂದುವರೆಸಲು ಅವಕಾಶ ಇಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್​ಗೆ ತಿಳಿಸಿದೆ. ಹೀಗಾಗಿ ಸರ್ಕಾರದ ನಡೆಯಿಂದ ವಿದ್ಯಾರ್ಥಿಗಳು ಕಂಗಲಾಗಿದ್ದಾರೆ. ಸಮರಪೀಡಿತ ಯುದ್ಧ ಭೂಮಿಯಿಂದ ಪ್ರಾಣಾಪಾಯದಿಂದ ಪಾರಾಗಿ ಬಂದು, ಸ್ವದೇಶದಲ್ಲಿ ಶಿಕ್ಷಣ ಮುಂದುವರಿಸುವ ಕನಸು ಕಂಡಿರುವ ಸಾವಿರಾರು ವಿದ್ಯಾರ್ಥಿಗಳಿಗೆ ಭಾರಿ ಹಿನ್ನಡೆಯಾಗಿದೆ.

ರಷ್ಯಾ ಮತ್ತು ಉಕ್ರೇನ್ ಯುದ್ಧ ಸಮಯದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ಭಾರತಕ್ಕೆ ಹಿಂತಿರುಗಿದ್ದರು. ಈ ವೇಳೆ ಕೇಂದ್ರ ಸರ್ಕಾರ ಭಾರತದಲ್ಲೇ ಓದು ಮುಂದುವರೆಸಲು ಅವಕಾಶ ನೀಡುವುದಾಗಿ ಭರವಾಸೆ ನೀಡಿ ವಿದ್ಯಾರ್ಥಿಗಳ ಕಣ್ಣೊರೆಸುವ ಕೆಲಸ ಮಾಡಿತ್ತು. ಆದ್ರೆ ಈಗ ತನ್ನ ತೀರ್ಮಾನದಿಂದ ಹಿಂದೆ ಸರಿದಿದೆ. ಭಾರತದ ಕಾಲೇಜುಗಳಲ್ಲಿ ಉಕ್ರೇನ್ ವಿದ್ಯಾರ್ಥಿಗಳಿಗೆ ಪ್ರವೇಶ ಇಲ್ಲ ಎಂದಿದೆ. ಇದನ್ನೂ ಓದಿ: ಶಾಸಕರ ತಂದೆಗೆ ಮಹಾ ಮೋಸ: ನಕಲಿ ದಾಖಲೆ ಸೃಷ್ಟಿಸಿ ಆಸ್ತಿಗಳನ್ನು ಮಾರುತ್ತಿದ್ದ ಮೈಸೂರಿನ ಕಾಂಗ್ರೆಸ್ ಮುಖಂಡ ಸೇರಿ ಐವರು ಅರೆಸ್ಟ್

ವಿದೇಶದಲ್ಲಿ ಅಭ್ಯಾಸ ಮಾಡಿ ಬಂದ ವಿದ್ಯಾರ್ಥಿಗಳಿಗೆ ಅರ್ಧದಲ್ಲಿ ಪ್ರವೇಶ ಕಲ್ಪಿಸಲು ರಾಷ್ಟ್ರೀಯ ವೈದ್ಯಕೀಯ ಆಯೋಗದ ಕಾಯಿದೆಯಲ್ಲಿ ಅವಕಾಶವೇ ಇಲ್ಲ. ಈ ರೀತಿ ಸಂಕಷ್ಟಕ್ಕೊಳಗಾದ ವಿದ್ಯಾರ್ಥಿಗಳಿಗೆ ಮಧ್ಯದಲ್ಲಿ ಅವಕಾಶ ಕೊಡುವುದರಿಂದ ವೈದ್ಯಕೀಯ ಶಿಕ್ಷಣದ ಗುಣಮಟ್ಟಕ್ಕೆ ಧಕ್ಕೆಯಾಗುತ್ತದೆ. ಮೆರಿಟ್‌ ಇಲ್ಲದ ವಿದ್ಯಾರ್ಥಿಗಳಿಗೆ ಅವಕಾಶ ಕೊಡುವುದರಿಂದ ಕಾನೂನು ಹೋರಾಟಗಳಿಗೂ ಕಾರಣವಾಗುವ ಅಪಾಯವಿದೆ ಎಂದು ಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಸರಕಾರ ಉಲ್ಲೇಖಿಸಿದೆ.

ರಾಷ್ಟ್ರೀಯ ವೈದ್ಯಕೀಯ ಆಯೋಗದ ಕಾಯ್ದೆಯಡಿ ಶಿಕ್ಷಣ ನಿರಾಕರಿಸಿದೆ. 1956ರ ಭಾರತೀಯ ವೈದ್ಯಕೀಯ ಮಂಡಳಿ ಕಾಯ್ದೆಯಡಿ ಪ್ರವೇಶಕಾತಿ ಇಲ್ಲ ಎಂದು ಸರ್ಕಾರ ಸ್ಪಷ್ಟ ಪಡಿಸಿದೆ. ಕೇಂದ್ರದ ನಿರ್ಧಾರದಿಂದ ವಿದ್ಯಾರ್ಥಿಗಳು, ಪೋಷಕರು ಕಂಗಾಲಾಗಿದ್ದಾರೆ. ಸದ್ಯ ಉಕ್ರೇಕ್ ವಿವಿ ವಿದ್ಯಾರ್ಥಿಗಳಿಗೆ ಆನ್ಲೈನ್ ಕ್ಲಾಸ್ ಆರಂಭಿಸಿದೆ. ಕೆಲ ವಿದ್ಯಾರ್ಥಿಗಳು ಸ್ವದೇಶದಿಂದಲೇ ಆನ್ಲೈನ್ ಪಾಠ ಪಡೆದುಕೊಳ್ತಿದ್ದಾರೆ. ಇದೀಗಾ ಆಫ್ಲೈನ್ ಕ್ಲಾಸ್​ಗೆ ಬನ್ನಿ ಎಂಬ ಆಹ್ವಾನ ಕೂಡ ಉಗ್ರೇನ್​ನಿಂದ ಬಂದಿದೆ. ಆದ್ರೆ ಭಾರತದಿಂದ ಉಕ್ರೇನ್​ಗೆ ನೇರ ಫ್ಲೈಟ್ ರದ್ದು ಮಾಡಲಾಗಿದೆ. ಹೀಗಾಗಿ ಉಕ್ರೇನ್​ಗೆ ಹೋಗಬಯಸುವ ವಿದ್ಯಾರ್ಥಿಗಳಿಗೆ ಸಮಸ್ಯೆ ಮೇಲೆ ಸಮಸ್ಯೆ ಎದುರಾಗಿದೆ. ಒಂದು ವೇಳೆ ಹೋಗಬಯಸುವ ವಿದ್ಯಾರ್ಥಿಗಳು ಮಾಲ್ಡವೀಸ್​ಗೆ ಹೋಗಿ ವೀಸಾ ಪಡೆದುಕೊಳ್ಳುವ ಅನಿವಾರ್ಯತೆ ಇದೆ. ಮಾಲ್ಡವೀಸ್ ನಿಂದ ಬಾರ್ಡರ್ ತಲುಪಿ, ಟ್ಯಾಕ್ಸಿ ಮೂಲಕ ಹೋಗಬೇಕಿದೆ. ಇದನ್ನೂ ಓದಿ: PM Modi Birthday: ಇಂದು ಪ್ರಧಾನಿ ನರೇಂದ್ರ ಮೋದಿ 72ನೇ ಜನ್ಮದಿನ; ದೇಶಾದ್ಯಂತ ಬಿಜೆಪಿಯಿಂದ ವಿವಿಧತೆಯಲ್ಲಿ ಏಕತೆ, ರಕ್ತದಾನ, ಸ್ವಚ್ಛತಾ ಅಭಿಯಾನ ಆಯೋಜನೆ

ಇನ್ನು ಇತರೆ ನಿಗದಿತ ದೇಶಗಳ ವಿಶ್ವವಿದ್ಯಾಲಯಗಳಲ್ಲಿ ತಮ್ಮ ವಿದ್ಯಾಭ್ಯಾಸ ಮುಂದಿವರೆಸಲು ರೂಪಿಸಲಾಗಿರುವ ಅಕಾಡೆಮಿಕ್ ಮೊಬಿಲಿಟಿ ಪ್ರೋಗ್ರಾಮ್ ಗೆ ರಾಷ್ಟ್ರೀಯ ವೈದ್ಯಕೀಯ ಆಯೋಗ ಅನುಮತಿ ನೀಡಿ ಕೈ ತೊಳೆದುಕೊಂಡಿದೆ. ಆದ್ರೆ ಮೊಬಿಲಿಟಿಗೆ ಅವಕಾಶ ಸಿಗುವುದು ರಷ್ಯಾ ಯುಕೆ ಹಾಲೆಂಡ್ ನತಂಹ ರಾಷ್ಟ್ರಗಳಲ್ಲಿ ಮಾತ್ರ. ಇತಂಹ ರಾಷ್ಟ್ರಗಳಲ್ಲಿ ಮೆಡಿಕಲ್ ಅಧ್ಯಯನ ಮುಂದುವರೆಸಲು ಉಕ್ರೇನ್ ಮೂರು ಪಟ್ಟು ಆರ್ಥಿಕ ವೆಚ್ಚ ಬೇಕು. ಹೀಗಾಗಿ ಶೇ50% ವಿದ್ಯಾರ್ಥಿಗಳು ಮೆಡಿಕಲ್ ಅಧ್ಯಯನವನ್ನೇ ಮೊಟಕು ಮಾಡಲು ಮುಂದಾಗಿದ್ದಾರೆ. ಇನ್ನು ಕೆಲವು ವಿದ್ಯಾರ್ಥಿಗಳು ಅಂತಾರಾಷ್ಟ್ರೀಯ ವರ್ಗಾವಣೆ ಮೊರೆ ಹೋಗ್ತಿದ್ದು ಆದ್ರೆ ಇದಕ್ಕೆ ಉಕ್ರೇನ್ ವಿವಿಗಳು ಅಂತಾರಾಷ್ಟ್ರಿಯ ವರ್ಗಾವಣೆ ಪಡೆಯಲು ಅವಕಾಶ ನೀಡ್ತಿಲ್ಲ. ಇದು ಉಕ್ರೇನ್ ವಿದ್ಯಾರ್ಥಿಗಳ ಸಂಕಷ್ಟಕ್ಕೆ ಕಾರಣವಾಗಿದೆ.

Published On - 8:52 am, Sat, 17 September 22

ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?