AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಅ.2ರಂದು ರೂಕ್ ಆ್ಯಪ್ ಬಿಡುಗಡೆ ಮಾಡಲಿರುವ ಪೀಸ್ ಆಟೋ ಯೂನಿಯನ್

Bangalore News: ಓಲಾ, ಉಬರ್ ಮತ್ತು ರಾಪಿಡೋದಂತಹ ಅಗ್ರಿಗೇಟರ್‌ಗಳು ಪ್ರಸ್ತುತ ಪ್ರಾಬಲ್ಯ ಹೊಂದಿರುವ ಅಪ್ಲಿಕೇಶನ್ ಆಧಾರಿತ ಆಟೋ ವಿಭಾಗಕ್ಕೆ ನಗರ ಮೂಲದ ಆಟೋರಿಕ್ಷಾ ಯೂನಿಯನ್ ಪ್ರವೇಶಿಸಲು ಸಿದ್ಧವಾಗಿದೆ.

ಬೆಂಗಳೂರು: ಅ.2ರಂದು ರೂಕ್ ಆ್ಯಪ್ ಬಿಡುಗಡೆ ಮಾಡಲಿರುವ ಪೀಸ್ ಆಟೋ ಯೂನಿಯನ್
ಅ.2ರಂದು ರೂಕ್ ಆ್ಯಪ್ ಬಿಡುಗಡೆ ಮಾಡಲಿರುವ ಪೀಸ್ ಆಟೋ ಯೂನಿಯನ್Image Credit source: deccanherald
TV9 Web
| Updated By: Rakesh Nayak Manchi|

Updated on:Sep 17, 2022 | 12:17 PM

Share

ಬೆಂಗಳೂರು: ಓಲಾ, ಉಬರ್ ಮತ್ತು ರಾಪಿಡೋದಂತಹ ಅಗ್ರಿಗೇಟರ್‌ಗಳು ಪ್ರಸ್ತುತ ಪ್ರಾಬಲ್ಯ ಹೊಂದಿರುವ ಅಪ್ಲಿಕೇಶನ್ ಆಧಾರಿತ ಆಟೋ ವಿಭಾಗಕ್ಕೆ ನಗರ ಮೂಲದ ಆಟೋರಿಕ್ಷಾ ಯೂನಿಯನ್ ಪ್ರವೇಶಿಸಲು ಸಿದ್ಧವಾಗಿದೆ. ನಗರದಲ್ಲಿ ಸುಮಾರು 10,000 ಸದಸ್ಯ ಚಾಲಕರನ್ನು ಹೊಂದಿರುವ ಪೀಸ್ ಆಟೋ ಯೂನಿಯನ್, ಬೆಂಗಳೂರು ಮೂಲದ ಮೊಬಿಲಿಟಿ ಸ್ಟಾರ್ಟ್‌ಅಪ್ ಜೊತೆಗೆ ರೂಕ್ ಹೆಸರಿನ ಅಪ್ಲಿಕೇಶನ್‌ನೊಂದಿಗೆ ಬರಲು ಯೋಜಿಸಿದೆ. ಬೆಳ್ಳಂದೂರು ಪ್ರದೇಶದಲ್ಲಿ ಪ್ರಾಯೋಗಿಕ ಸಂಚಾರ ಆರಂಭಿಸಲು ಯೋಜಿಸಲಾಗಿದೆ ಎಂದು ಒಕ್ಕೂಟದ ಮುಖಂಡರು ತಿಳಿಸಿದ್ದಾರೆ.

ಹೊರ ವರ್ತುಲ ರಸ್ತೆಯ ಬೆಳ್ಳಂದೂರಿನಿಂದ ಸೇವೆ ಆರಂಭಿಸುತ್ತಿದ್ದು, ನಾಗವಾರ, ಎಲೆಕ್ಟ್ರಾನಿಕ್ಸ್ ಸಿಟಿ, ವೈಟ್‌ಫೀಲ್ಡ್‌, ಕೋರಮಂಗಲ, ಎಚ್‌ಎಸ್‌ಆರ್‌ ಲೇಔಟ್‌ಗೆ ವಿಸ್ತರಿಸಲಾಗುವುದು ಎಂದು ಪೀಸ್‌ ಆಟೋದ ರಘುನಾರಾಯಣಗೌಡ ಹೇಳಿದರು. ಅಕ್ಟೋಬರ್ 2 ರಂದು ನಗರದಾದ್ಯಂತ ಸೇವೆಗಳನ್ನು ಸುಗಮಗೊಳಿಸಲು ಅಪ್ಲಿಕೇಶನ್‌ನ ಪೂರ್ಣ ಪ್ರಮಾಣದ ಬಿಡುಗಡೆ ನಡೆಯಲಿದೆ. 2013ರ ಅಕ್ಟೋಬರ್ 2 ರಂದು ಪೀಸ್ ಆಟೋವನ್ನು ಸಂಘಟನೆಯನ್ನು ಆರಂಭಿಸಿದ ಹಿನ್ನೆಲೆ ಅದೇ ದಿನದಂದು ‘ರೂಕ್’ ಅಪ್ಲಿಕೇಶನ್ ಅನ್ನು ಪ್ರಾರಂಭಿಸಲಿದ್ದೇವೆ ಎಂದರು.

“ನಾವು ಮೊದಲ ಹಂತದಲ್ಲಿ ಈ ಪ್ಲಾಟ್‌ಫಾರ್ಮ್‌ಗೆ ನಮ್ಮ ಸದಸ್ಯರನ್ನು ಮಾತ್ರ ನೋಂದಾಯಿಸುತ್ತಿದ್ದೇವೆ. ನಮ್ಮ ಒಕ್ಕೂಟವು ಸವಾರಿಗಳನ್ನು ಮೇಲ್ವಿಚಾರಣೆ ಮಾಡುತ್ತದೆ ಮತ್ತು ವಿಶೇಷವಾಗಿ ಪೀಕ್ ಅವರ್‌ಗಳಲ್ಲಿ ಯಾವುದೇ ರದ್ದತಿಗಳಿಲ್ಲ ಎಂದು ಖಚಿತಪಡಿಸುತ್ತದೆ. ಈಗಾಗಲೇ 2,000 ಚಾಲಕರು ಪ್ಲಾಟ್‌ಫಾರ್ಮ್‌ಗೆ ಸೇರಿದ್ದಾರೆ” ಎಂದು ತಿಳಿಸಿದ್ದಾರೆ.

ರೂಕ್ ಅಪ್ಲಿಕೇಶನ್ ಅಥವಾ ಕಾಲ್ ಸೆಂಟರ್ ಮೂಲಕ ಗ್ರಾಹಕರು ಆಟೋ ಬುಕ್ ಮಾಡಲು ಸಾಧ್ಯವಾಗುತ್ತದೆ. ಅವರು ನಗದು ರಹಿತ ಕ್ರಮದಲ್ಲಿ ಶುಲ್ಕ ಪಾವತಿಸಬಹುದಾಗಿದೆ. ಕಾಲ್ ಸೆಂಟರ್‌ನಲ್ಲಿ ಚಾಲಕರ ಕುಟುಂಬದ ಸದಸ್ಯರಿಗೆ ಉದ್ಯೋಗ ಕಲ್ಪಿಸಲು ಆದ್ಯತೆ ನೀಡಲಾಗುವುದು ಎಂದು ರಘುನಾರಾಯಣಗೌಡ ಹೇಳಿದರು.

“ಚಾಲಕರು ದಿನಕ್ಕೆ 15 ಟ್ರಿಪ್‌ಗಳನ್ನು ಪೂರ್ಣಗೊಳಿಸಿದರೆ ಅಗ್ರಿಗೇಟರ್‌ಗಳು 500 ರೂ. ಪ್ರೋತ್ಸಾಹಕವನ್ನು ನೀಡುತ್ತಿದ್ದಾರೆ. ದೂರದ ಪ್ರಯಾಣವನ್ನು ಪಡೆದರೆ ಹೆಚ್ಚಿನವರು 12 ಕ್ಕಿಂತ ಹೆಚ್ಚು ಪಡೆಯಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಚಾಲಕರು ಈ ಪ್ರೋತ್ಸಾಹಕವನ್ನು ಪಡೆಯುವ ನಿಟ್ಟಿನಲ್ಲಿ ದೂರದ ಪ್ರಯಾಣವನ್ನು ನಿರಾಕರಿಸುತ್ತಾರೆ” ಎಂದರು.

ಮತ್ತಷ್ಟು ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:17 pm, Sat, 17 September 22